Garuda Purana: ಸೂರ್ಯಾಸ್ತದ ನಂತರ ಈ ಕೆಲಸವನ್ನು ಮಾಡಬೇಡಿ, ಇಲ್ಲವೇ ನಷ್ಟವಾದೀತು!

Tue, 22 Feb 2022-8:28 am,

ಗರುಡ ಪುರಾಣದ ಪ್ರಕಾರ, ಸೂರ್ಯಾಸ್ತದ ನಂತರ ಅಂತಿಮ ವಿಧಿಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಸೂರ್ಯಾಸ್ತದ ನಂತರ ಅಂತಿಮ ಸಂಸ್ಕಾರ ಮಾಡುವುದರಿಂದ ಮೃತರು ಮರಣಾನಂತರದ ಜೀವನದಲ್ಲಿ ನೋವು ಅನುಭವಿಸಬೇಕಾಗುತ್ತದೆ. ಹಾಗೆಯೇ ಮುಂದಿನ ಜನ್ಮದಲ್ಲಿ ಯಾವುದಾದರೊಂದು ಅಂಗದಲ್ಲಿ ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸೂರ್ಯಾಸ್ತದ ನಂತರ ಶವಸಂಸ್ಕಾರವನ್ನು ಮಾಡಬಾರದು. 

ಶಾಸ್ತ್ರಗಳ ಪ್ರಕಾರ, ಸೂರ್ಯಾಸ್ತದ ನಂತರ ಕೂದಲು, ಉಗುರುಗಳು ಮತ್ತು ಗಡ್ಡವನ್ನು ಕತ್ತರಿಸಬಾರದು. ಹೀಗೆ ಮಾಡಿದರೆ ಸಾಲ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ನಂತರ  ಮರಗಳು ಮತ್ತು ಗಿಡಗಳಿಗೆ ನೀರು ಕೊಡುವುದು, ಮರಗಳು ಮತ್ತು ಗಿಡಗಳನ್ನು ಸ್ಪರ್ಶಿಸುವುದು ಅಥವಾ ಅದರ ಎಲೆಗಳನ್ನು ಕೀಳುವುದು ಒಳ್ಳೆಯದಲ್ಲ. ಸೂರ್ಯಾಸ್ತದ ನಂತರ, ಮರಗಳು ಮತ್ತು ಸಸ್ಯಗಳು ನಿದ್ರೆಗೆ ಹೋಗುತ್ತವೆ ಎಂದು ನಂಬಲಾಗಿದೆ. ಸೂರ್ಯಾಸ್ತದ ನಂತರ ತುಳಸಿ ಗಿಡವನ್ನು ಮುಟ್ಟಬಾರದು. 

ಕೆಲವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡುತ್ತಾರೆ. ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ನಂತರ. ಶಾಸ್ತ್ರಗಳ ಪ್ರಕಾರ, ನೀವು ಸೂರ್ಯಾಸ್ತದ ನಂತರ ಸ್ನಾನ ಮಾಡಿದರೆ, ನಂತರ ನಿಮ್ಮ ಹಣೆಗೆ ಶ್ರೀಗಂಧವನ್ನು ಹಚ್ಚಬೇಡಿ. ಸೂರ್ಯಾಸ್ತದ ನಂತರ ಸ್ನಾನ ಮಾಡುವುದು ಜೀವನದಲ್ಲಿ ದುರಾದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಪುರಾಣಗಳ ಪ್ರಕಾರ, ಸೂರ್ಯಾಸ್ತದ ನಂತರ ಮೊಸರು ತಿನ್ನಬಾರದು. ವಾಸ್ತವವಾಗಿ, ಸೂರ್ಯಾಸ್ತದ ನಂತರ ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link