Garuda Purana: ಯೋಗ್ಯ-ಆರೋಗ್ಯವಂತ ಮಗು ಬೇಕಿದ್ದರೆ ಗರುಡ ಪುರಾಣದ ಈ ನಿಯಮಗಳನ್ನು ಅನುಸರಿಸಿ
1. ಗರುಡ ಪುರಾಣದಲ್ಲಿ ಹೇಳಲಾಗಿದೆ ಶುಭ ಸಮಯ - ಗರುಡ ಪುರಾಣದಲ್ಲಿ, ಗರ್ಭಧಾರಣೆಗೆ ಶುಭ ಸಮಯ, ದಿನ, ನಕ್ಷತ್ರಜ ಇತ್ಯಾದಿಗಳನ್ನು ಉಲ್ಲೇಖಿಸಲಾಗಿದೆ. ಇದರ ಹೊರತಾಗಿ, ಗರ್ಭಧಾರಣೆಯ ಕೆಲವು ನಿಯಮಗಳನ್ನು ಸಹ ಇದರಲ್ಲಿ ಹೇಳಲಾಗಿದೆ. ಒಂದು ವೇಳೆ ಶುಭ ಸಮಯದಲ್ಲಿ ನಿಯಮಗಳನ್ನು ಅನುಸರಿಸುವ ಮೂಲಕ ಗರ್ಭಧಾರಣೆ ನಡೆದರೆ, ಆಗ ಮಗು ತುಂಬಾ ಫಿಟ್ ಮತ್ತು ಆರೋಗ್ಯವಾಗಿರುತ್ತದೆ. ಅಂತಹ ಮಕ್ಕಳು ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಹೊಂದುತ್ತಾರೆ ಎನ್ನಲಾಗಿದೆ.
2. ಈ ದಿನಗಳಲ್ಲಿ ಗರ್ಭ ಧರಿಸಬೇಡಿ - ಗರುಡ ಪುರಾಣದ ಪ್ರಕಾರ, ಮಹಿಳೆ ಆರೋಗ್ಯವಂತ ಮಗುವನ್ನು ಹೊಂದಲು ಬಯಸಿದರೆ, ಆಕೆ ತನ್ನ ಮುಟ್ಟಿನ ಅವಧಿಯಲ್ಲಿ ಗರ್ಭಿಣಿಯಾಗಬಾರದು. ಇದು ಮಗುವಿನಲ್ಲಿ ರೋಗಗಳು ಅಥವಾ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, 7 ದಿನಗಳ ನಂತರ ಮಾತ್ರ ಗರ್ಭಧರಿಸಲು ಪ್ರಯತ್ನಿಸಿ.
3. ಈ ಸಮಯ ಶುಭವಾಗಿರುತ್ತದೆ - ಮಹಿಳೆಯ ಮುಟ್ಟಿನ ಎಂಟನೇ ಮತ್ತು ಹದಿನಾಲ್ಕನೆಯ ರಾತ್ರಿಗಳನ್ನು ಗರ್ಭಧಾರಣೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಅಂತಹ ಮಕ್ಕಳು ದೀರ್ಘಾಯುಷ್ಯ, ಸುಸಂಸ್ಕೃತರು, ಒಳ್ಳೆಯ ಅಭ್ಯಾಸ ಮತ್ತು ಗುಣಗಳನ್ನು ಹೊಂದಿದ್ದಾರೆ ಮತ್ತು ಅದೃಷ್ಟವಂತರು. ನಿರ್ಧಿಷ್ಟ ವಾರದ ದಿನದ ಕುರಿತು ಹೇಳುವುದಾದರೆ, ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಗರ್ಭಧರಿಸಲು ಅತ್ಯಂತ ಶುಭ ದಿನಗಳಾಗಿವೆ.
4. ಈ ತಿಥಿಗಳು ಕೂಡ ಶುಭವಾಗಿವೆ - ಅಷ್ಟಮಿ, ದಶಮಿ ಮತ್ತು ದ್ವಾದಶಿ ದಿನಾಂಕವನ್ನು ಗರ್ಭಧರಿಸಲು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೇ, ರೋಹಿಣಿ, ಮೃಗಶಿರ, ಹಸ್ತ, ಚಿತ್ರ, ಪುನರ್ವಸು, ಪುಷ್ಯ, ಸ್ವಾತಿ, ಅನುರಾಧ, ಶ್ರವಣ, ಧನಿಷ್ಠ, ಶತಭಿಷ, ಉತ್ತರ ಭಾದ್ರಪದ, ಉತ್ತರದಶದ ಮತ್ತು ಉತ್ತರಾ ಫಾಲ್ಗುಣಿ ನಕ್ಷತ್ರಗಳನ್ನೂ ಗರ್ಭಧಾರಣೆಗೆ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.
5. ಸಕಾರಾತ್ಮಕ ಯೋಚನೆ ಅತ್ಯಂತ ಆವಶ್ಯಕ - ಗರ್ಭಧಾರಣೆಯ ದಿನ ಪತಿ-ಪತ್ನಿ ಇಬ್ಬರ ಜಾತಕದಲ್ಲಿ ಚಂದ್ರ ಬಲವಾಗಿದ್ದರೆ ಮತ್ತು ಅವರ ಆಲೋಚನೆಗಳು ಸಕಾರಾತ್ಮಕವಾಗಿದ್ದರೆ, ಹುಟ್ಟುವ ಮಗುವು ತುಂಬಾ ಬಲಶಾಲಿ ಹಾಗೂ ಉತ್ತಮ ವಿಚಾರಗಳನ್ನು ಹೋದಿರುತ್ತದೆ. ಇದಲ್ಲದೆ ತಾಯಿಯಾದವರು 9 ತಿಂಗಳುಗಳವರೆಗೆ ಉತ್ತಮ ನಡುವಳಿಕೆಯನ್ನು ಹೊಂದಿರಬೇಕು, ಉತ್ತಮ ಪೋಶಾಕಾಂಶಗಳಿಂದ ಕೂಡಿದ ಆಹಾರ ಸೇವನೆ, ವ್ಯಾಯಾಮ ಮಾಡಬೇಕು, ಒಳ್ಳೆಯ ಪುಸ್ತಕಗಳನ್ನು ಓದಬೇಕು, ಪ್ರಾರ್ಥನೆ ಮಾಡಬೇಕು. ಇದರಿಂದ ಮಗುವಿನಲ್ಲಿ ಆ ಗುಣಗಳು ಬರುತ್ತವೆ.