Garuda Purana: ಜೀವನದಲ್ಲಿ ಎಂದಿಗೂ ಇವುಗಳನ್ನು ಅರ್ಧಕ್ಕೆ ಬಿಡಬೇಡಿ, ಇಲ್ಲವೇ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ

Mon, 25 Oct 2021-10:50 am,

ಈ ಕೆಲಸಗಳನ್ನು ಅಪೂರ್ಣವಾಗಿ ಬಿಡಬೇಡಿ: ಗರುಡ ಪುರಾಣದಲ್ಲಿ, ಅಂತಹ ಕೆಲವು ಕೆಲಸಗಳ ಬಗ್ಗೆ ಹೇಳಲಾಗಿದೆ, ಅದು ಪೂರ್ಣಗೊಳ್ಳದಿದ್ದರೆ, ಜೀವನದಲ್ಲಿ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ, ನೀವು ದುರದೃಷ್ಟವಶಾತ್ ಈ ಕೆಲಸಗಳನ್ನು ಮಾಡಬೇಕಾದಂತಹ ಸಂದರ್ಭಗಳಲ್ಲಿ ಸಿಕ್ಕಿಹಾಕಿಕೊಂಡರೆ, ಆ ಕಾರ್ಯಗಳನ್ನು ತಪ್ಪದೇ ಪೂರ್ಣಗೊಳಿಸಿ, ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಸಿಲುಕಬಹುದು.   

ಯಾವಾಗಲೂ ಸಂಪೂರ್ಣ ಚಿಕಿತ್ಸೆ ತೆಗೆದುಕೊಳ್ಳಿ: ನೀವು ಯಾವುದೇ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರೆ  ಅದನ್ನು ಮಧ್ಯದಲ್ಲಿಯೇ ಬಿಡಬೇಡಿ. ಯಾವಾಗಲೂ ಸಂಪೂರ್ಣ ಚಿಕಿತ್ಸೆಯನ್ನು ತೆಗೆದುಕೊಳ್ಳಿ ಅಥವಾ ಇಲ್ಲದಿದ್ದರೆ ರೋಗವು ಮತ್ತೆ ಮರಳುವ ಸಾಧ್ಯತೆ ಇರುತ್ತದೆ. ಇದರ ಹೊರತಾಗಿ, ರೋಗದ ಆರಂಭದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ, ಇದರಿಂದ ರೋಗವು ಮುಂದುವರೆಯದಂತೆ ನಿಗಾವಹಿಸಬಹುದು.

ಸಾಲವನ್ನು ಸಂಪೂರ್ಣವಾಗಿ ಪಾವತಿಸಿ: ಜೀವನದಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಯಾರೇ ಆದರೂ ಸಾಲ ಪಡೆಯಬೇಕಾಗಬಹುದು. ಆದರೆ ಅದನ್ನು ತಪ್ಪದೇ ಹಿಂದಿರುಗಿಸಿ. ಇಲ್ಲದಿದ್ದರೆ, ನೀವು ಸಾಲದ ಬಲೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ- Garuda Purana: ನಿಜವಾಗಲೂ ಭೂತ-ಪ್ರೇತಗಳು ಇರುತ್ತವೆಯೇ? ಗರುಡ ಪುರಾಣದಲ್ಲಿ ಅಡಗಿದೆ ಈ ಪ್ರಶ್ನೆಯ ರಹಸ್ಯ

ಯಾರೊಂದಿಗೂ ಹಗೆತನವನ್ನು ಮುಂದುವರೆಸಬೇಡಿ: ಅಂದಹಾಗೆ, ಯಾರೊಂದಿಗೂ ದ್ವೇಷ ಸಾಧಿಸಬೇಡಿ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನೀವು ಯಾರೊಂದಿಗಾದರೂ ದ್ವೇಷವನ್ನು ಹೊಂದಿದ್ದರೆ, ಸಾಧ್ಯವಾದಷ್ಟು ಬೇಗ ಅದನ್ನು ಕೊನೆಗೊಳಿಸಿ. ಇಲ್ಲದಿದ್ದರೆ ಶತ್ರು ಯಾವಾಗಲೂ ನಿಮ್ಮ ವಿರುದ್ಧ ಯೋಜನೆಗಳನ್ನು ಮಾಡುತ್ತಾನೆ ಮತ್ತು ಯಾವುದೇ ಸಮಯದಲ್ಲಿ ನಿಮಗೆ ಹಾನಿ ಮಾಡುತ್ತಾನೆ. 

ಇದನ್ನೂ ಓದಿ- Garuda Purana: ಕೆಟ್ಟ ಕೆಲಸಗಳು ಮಾತ್ರವಲ್ಲ, ಒಳ್ಳೆಯ ಕಾರ್ಯಗಳು ಕೂಡ ಜೀವನದಲ್ಲಿ ಬಿಕ್ಕಟ್ಟನ್ನು ತರಬಹುದು, ಇಲ್ಲಿದೆ ಕಾರಣ

ಬೆಂಕಿಯ ಕಿಡಿಯನ್ನು ಗಮನಿಸದೆ ಬಿಡಬೇಡಿ: ಮನೆಯಲ್ಲಿ ದ್ವೇಷ, ಅಸೂಯೆಗೆ ದಾರಿ ಮಾಡಿ ಕೊಡುವಂತಹ ವಿಷಯಗಳ ಬಗ್ಗೆ ಎಂದಿಗೂ ಅಜಾಗರೂಕರಾಗಿ ಇರಬೇಡಿ. ಇದು ಮನೆಯಲ್ಲಿ ಪರಸ್ಪರರ ವಿರುದ್ಧ ದ್ವೇಷ, ಹಗೆತನಕ್ಕೆ ದಾರಿ ಮಾಡಿಕೊಡುತ್ತದೆ. ಇಂತಹ ಒಂದು ಸಣ್ಣ ಕಿಡಿ ಕಂಡರೂ ಅದನ್ನು ಸಂಪೂರ್ಣವಾಗಿ ನಂದಿಸಿ. ಇಲ್ಲದಿದ್ದರೆ ಸಣ್ಣ ಕಿಡಿ ಇಡೀ ಮನೆಯನ್ನೇ ಹೊತ್ತಿ ಉರಿಸುವ ಸಾಧ್ಯತೆ ಇರುತ್ತದೆ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link