ಸಾವು ಹತ್ತಿರ ಸುಳಿದಾಗ ಈ ಐದು ಬದಲಾವಣೆಗಳಾಗುತ್ತವೆ.. ಈ ವಸ್ತುಗಳು ಕಾಣಿಸಲು ಪ್ರಾರಂಭಿಸುತ್ತವೆ..ಗರುಡ ಪುರಾಣದಲ್ಲಿದೆ ನಿಗೂಡ ಸತ್ಯ
ಗರುಡ ಪುರಾಣ ಸನಾತನ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದು ಎಂದು ಹೆಸರು ಪಡೆದಿರುವ ಈ ಗ್ರಂಥ. ಅನೇಕ ಮಹತ್ವದ ಮಾಹಿತಿಯನ್ನು ತೋರಿಸಿ ಕೊಡುತ್ತದೆ. ಹಲವು ಹಂಶಗಳನ್ನು ಬಿಚ್ಚಿಡುತ್ತದೆ. ಅದರಲ್ಲೂ ಸಾವಿನ ನಂತರ ಹಾಗು ಸಾವಿಗೂ ಮುನ್ನ ಮಾನವನಲ್ಲಿ ಆಗುವ ಬದಲಾವಣೆಗಳನ್ನು ಗರುಡ ಪುರಾಣ ಬಿಚ್ಚಿಡುತ್ತದೆ.
ವಿಶ್ವದ ಸೃಷ್ಟಿಕರ್ತನಾದ ವಿಷ್ಣು ಈ ಗರುಡ ಪುರಾಣವನ್ನು ತನ್ನ ಭಕ್ತರಿಗಾಗಿ ಜಗತ್ತಿನ ಜನರಿಗಾಗಿ ಸಾರಿದ ಕಥೆ ಎಂದು ನಂಬಲಾಗುತ್ತದೆ.
ಈ ಗ್ರಂಥದಲ್ಲಿ ಸಾವಿನ ಮೊದಲು ಹಾಗು ಸಾವಿನ ನಂತರ ಮನುಷ್ಯನಲ್ಲಿ ಆಗುವ ಬದಲಾವಣೆಗಳನ್ನು ವಿವರಿಸಲಾಗಿದೆ.
ಇದೇ ಕಾರಣದಿಂದ ಜನರು ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದರೆ, ಈ ಗ್ರಂಥವನ್ನು ಪಠಿಸುತ್ತಾರೆ ಕಾರಣ ಮರಣ ಹೊಂದಿದವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ.
ಗರುಡ ಪುರಾಣ ಒಂದು ಅತ್ಯಂತ ನಿಗೂಡ ಗ್ರಂಥಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಈ ಗ್ರಂಥವನ್ನು ನಾವು ಮನೆಯಲ್ಲಿಟ್ಟುಕೊಳ್ಳಬಾರದು.
ಈ ಗ್ರಂಥ ಮನುಷ್ಯನ ಸಾವಿನ ಕುರಿತು ಹಲವು ವಿಶಯಗಳನ್ನು ಬಿಚ್ಚಿಡುತ್ತದೆ. ನಿಗೂಡ ಅಂಶಗಳನ್ನು ತೋರಿಸಿ ಕೊಡುತ್ತದೆ.
ಈ ಗ್ರಂಥದ ಪ್ರಕಾರ ಮನುಷ್ಯನಿಗೆ ಸಾವು ಎದುರಾದಾಗ ಹಲವಾರು ಬದಲಾವಣೆಯಾಗಿತ್ತದೆಯಂತೆ ಸಾವಿನ ಮುನ್ನ ಹಲವಾರು ವಿಷಯಗಳು ಕಾಣಿಸಲು ಪ್ರಾರಂಭಿಸುತ್ತವೆಯಂತೆ.
ಮನುಷ್ಯನಿಗೆ ಸಾವು ಸಮೀಪಿಸಿದಾಗ ಸಾವನ್ನಪ್ಪಿದ ಪೂರ್ವಜರು ಕಾಣಿಸಲು ಆರಂಭಿಸುತ್ತಾರಂತೆ. ತಮ್ಮತ್ತ ಬರುವಂತೆ ಕರೆಯುತ್ತರಂತೆ.
ಕನಸ್ಸಿನಲ್ಲಿಯೂ ಪೂರ್ವಜರು ಕಾಣಲು ಪ್ರಾರಂಭಿಸುತ್ತಾರೆ ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ.
ಗರುಡ ಪುರಾಣದಲ್ಲಿ ಮನುಷ್ಯನಿಗೆ ಸಾವು ಸಮೀಪಿಸಿದಾಗ ತಾನು ಹಿಂದೆ ಮಾಡಿದ ಎಲ್ಲ ಕೆಲಸಗಳು ಕಣ್ಣ ಮುಂದೆ ಹಾದು ಹೋಗುತ್ತದೆ ಎಂದು ಉಲ್ಲೇಖಿಸಲಾಗಿದೆ.
ಗರುಡ ಪುರಾಣದಲ್ಲಿ ಸಾವು ಸಂಭವಿಸಿದಾಗ ಮನುಷ್ಯನಿಗೆ ನಿಗೂಡ ಬಾಗಿಲು ಕಾಣಿಸುತ್ತದೆಯಂತೆ. ಬಾಗಿಲು ತೆಗೆದು ಯಾವುದೊ ಬಿಂಬ ಬೆಳಕಿನ ಕಿರಣಗಳ ಮಧ್ಯೆ ನಿಂತಂತೆ ಭಾಸವಾಗುತ್ತದೆಯಂತೆ.
ಸಾಮಾನ್ಯವಾಗಿ ನಾವು ನಮ್ಮ ಪ್ರತಿಬಿಂಬವನ್ನು ನೀರು ಎಣ್ಣೆ ಇಂತವುಗಳಲ್ಲಿ ಕಾಣಬಹುದು ಆದರೆ ಸಾವು ಸಮೀಪಿಸಿದಾಗ ಮನುಷ್ಯನಿಗೆ ಆತನ ನೆರಳು ಕಾಣುವುದಿಲ್ಲವಂತೆ.
ಗರುಡ ಪುರಾಣದ ಪ್ರಕಾರ ಸಾವು ಹತ್ತಿರ ಸಮೀಪಿಸಿದಾಗ ವಿಚಿತ್ರ ಕಪ್ಪು ಬಿಂಬಗಳು ಕಾಣುತ್ತವೆಯಂತೆ. ಅವರನ್ನು ಯಮದೂತರು ಎಂದು ನಂಬಲಾಗಿದ್ದು. ಹೀಗೆ ಕಂಡರೆ ಅದು ಸಾವಿನ ಮುನ್ಸೂಚನೆ ಎನ್ನುತ್ತದೆ ಗರುಡ ಪುರಾಣ.