Garuda Purana: ಈ ಜನರು ತಮ್ಮ ಜೀವನದಲ್ಲಿ ಎಂದಿಗೂ ದುಃಖಿತರಾಗುವುದಿಲ್ಲ, ಇವರ ಮೇಲೆ ಯಾವಾಗಲು ಲಕ್ಷ್ಮಿಯ ಕೃಪೆ ಇರುತ್ತದೆ

Sun, 16 Jan 2022-9:39 pm,

1. ಅನ್ನದಾನ - ದಾನದ ವಿಶೇಷ ಮಹತ್ವವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನಿರ್ಗತಿಕರಿಗೆ ಅನ್ನ ನೀಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ, ಅಗತ್ಯವಿರುವವರಿಗೆ ದಾನ ಮಾಡಿ.

2. ಪ್ರತಿನಿತ್ಯ ಮನೆಯಲ್ಲಿ ದೇವರಿಗೆ ನೈವೇದ್ಯ ಅರ್ಪಿಸಿ - ಗರುಡ ಪುರಾಣದ ಪ್ರಕಾರ, ಭೋಜನದ ಮೊದಲು ದೇವರಿಗೆ ಆಹಾರವನ್ನು ಅರ್ಪಿಸುವ ಮನೆಯಲ್ಲಿ ಆಹಾರ ಮತ್ತು ಹಣದ (Godess Lakshmi ) ಕೊರತೆ ಎಂದಿಗೂ ಇರುವುದಿಲ್ಲ. ಹೀಗೆ ಮಾಡಿ ತಾಯಿ ಅನ್ನಪೂರ್ಣೆಯ ಆಶೀರ್ವಾದವನ್ನು ಪಡೆಯಲು, ಪ್ರತಿದಿನ ಭೋಗ್ ವನ್ನು ಅರ್ಪಿಸಿ.

3. ಗ್ರಂಥಗಳ ಪಠಣ - ಗರುಡ ಪುರಾಣದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಗ್ರಂಥದಲ್ಲಿ ಅಡಗಿರುವ ಜ್ಞಾನ ಪಡೆಯಲು ಅವುಗಳ ಪಠಣ ಮಾಡಬೇಕು. ಹೀಗಾಗಿ ಆದಷ್ಟು ಹೆಚ್ಚು ಧಾರ್ಮಿಕ ಗ್ರಂಥಗಳನ್ನು ಪಠಿಸಬೇಕು.

4 ದೇವರ ಭಜನೆ ನಡೆಸಬೇಕು -ಗರುಡ ಪುರಾಣದ ಪ್ರಕಾರ, ತಪಸ್ಸು, ಧ್ಯಾನ, ಭಜನೆ  ಇತ್ಯಾದಿಗಳನ್ನು ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಇದರಿಂದ ಕೋಪವನ್ನು  ನಿಯಂತ್ರಿಸಬಹುದು. ಹೀಗಾಗಿ ಪ್ರತಿಯೊಬ್ಬರೂ ಧ್ಯಾನವನ್ನು ಮಾಡಲೇಬೇಕು.

5. ಕುಲದೇವರು ಅಥವಾ ಕುಲದೆವತೆಯ ಪೂಜೆ - ಗರುಡ ಪುರಾಣದ ಪ್ರಕಾರ, ಕುಲದೇವಿ ಅಥವಾ ಕುಲದೇವರ ಆರಾಧನೆಯು ಅತ್ಯುತ್ತಮವಾಗಿದೆ. ಅವರ ಪೂಜೆಯಿಂದ ಏಳು ನಮ್ಮ ತಲೆಮಾರುಗಳು  ಸುಖ ಸಂತೋಷದಿಂದ ಬಾಳುತ್ತವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link