Gastric Problem: ʼಗ್ಯಾಸ್ಟ್ರಿಕ್ʼ ಸಮಸ್ಯೆ ಇದ್ದವರು ಈ ಆಹಾರಗಳಿಂದ ದೂರವಿರಬೇಕು
ಇದು ಸುಲಭವಾಗಿ ಜೀರ್ಣವಾಗದ ತರಕಾರಿ. ಇದರಿಂದ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಾತ್ರಿ ವೇಳೆ ಕ್ಯಾಬೇಜ್ ಸೇವಿಸುವುದರಿಂದ ಹೊಟ್ಟೆಯಲ್ಲಿ ಸೆಳೆತ ಹಾಗೂ ಗ್ಯಾಸ್ಟ್ರಿಕ್ ಉಲ್ಬಣಿಸುತ್ತದೆ.
ಆಲೂಗಡ್ಡೆ ಅಂದರೆ ಪ್ರತಿಯೊಬ್ಬರಿಗೂ ಇಷ್ಟ. ಆದರೆ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಲ್ಲಿ ಆಲೂಗಡ್ಡೆಯಿಂದ ಆದಷ್ಟು ದೂರವಿರುವುದು ಒಳ್ಳೆಯದು. ಆಲೂಗಡ್ಡೆಯಲ್ಲಿ ಪಿಷ್ಟ ಹೆಚ್ಚಾಗಿರುತ್ತದೆ, ಇದು ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಕಾಳುಗಳ ಜೊತೆ ಬೇಯಿಸಿದ ಆಲೂಗಡ್ಡೆ ಸೇವಿಸಿದರೆ ಗ್ಯಾಸ್ಟ್ರಿಕ್ ಹೆಚ್ಚಾಗುತ್ತದೆ.
ಕಲ್ಲಂಗಡಿಯಲ್ಲಿ ನೀರು ಮತ್ತು ಖನಿಜದ ಪ್ರಮಾಣ ಹೆಚ್ಚಾಗಿರುತ್ತದೆ. ಈ ರಸಭರಿತ ಹಣ್ಣು ಕರುಳಿನಲ್ಲಿ ಕಳೆಯಬೇಕಾದ ಸಮಯವನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ಇದರಲ್ಲಿ ಸಕ್ಕರೆ ಮನ್ನಿಟಾಲ್ ಇರುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಕಾಡುತ್ತದೆ.
ಸೌತೆಕಾಯಿಯಲ್ಲಿ ನೀರು ಮತ್ತು ಫೈಬರ್ ಅಂಶ ಹೆಚ್ಚಾಗಿರುವುದರಿಂದ ರಾತ್ರಿ ವೇಳೆ ಇದನ್ನು ತಿನ್ನುವುದು ಹೊಟ್ಟೆಗೆ ಒಳ್ಳೆಯದಲ್ಲ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಗ್ಯಾಸ್ ತುಂಬಿಕೊಳ್ಳಲು ಕಾರಣವಾಗುತ್ತದೆ. ರಾತ್ರಿ ಸೌತೆಕಾಯಿ ತಿಂದ ಬಳಿಕ ಹೊಟ್ಟೆ ಉಬ್ಬರ ಬರಲು ಇದೇ ಕಾರಣ.
ನಿಂಬೆ ಹಣ್ಣು ಸಹ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಲ್ಲಿ ವಿಟಮಿನ್ ʼಸಿʼ ಪ್ರಮಾಣ ಸಮೃದ್ಧವಾಗಿದ್ದು, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಇದನ್ನು ಸೇವಿಸಬಾರದು. ಲಿಂಬೆ ಹಣ್ಣಿನ ಜ್ಯೂಸ್ ಸಹ ಕುಡಿಯಬಾರದು.