ಗೌತಮ್ ಅದಾನಿಯಿಂದ ಈ ಸಿಮೆಂಟ್ ಕಂಪನಿ ಖರೀದಿ; ಶೇ.15ರಷ್ಟು ಏರಿಕೆ ಕಂಡ ಷೇರು ಬೆಲೆ!
ವರದಿಯ ಪ್ರಕಾರ ಸಿಕೆ ಬಿರ್ಲಾ ಅವರು ಓರಿಯಂಟ್ ಸಿಮೆಂಟ್‌ನಲ್ಲಿ ತಮ್ಮ Promoters ಪಾಲನ್ನು ಮಾರಾಟ ಮಾಡಲು ಗೌತಮ್ ಅದಾನಿಯನ್ನು ಸಂಪರ್ಕಿಸಿದ್ದಾರೆ. ಇದರ ನಂತರ ಓರಿಯಂಟ್ ಸಿಮೆಂಟ್ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಗೌತಮ್ ಅದಾನಿ ಸಿಮೆಂಟ್ ಕಂಪನಿಯ ಷೇರುಗಳನ್ನು ಖರೀದಿಸುವ ವದಂತಿಯ ಬಳಿಕ ಓರಿಯಂಟ್ ಸಿಮೆಂಟ್ ಷೇರುಗಳು 52 ವಾರಗಳ ದಾಖಲೆಯ ಮಟ್ಟವನ್ನು ತಲುಪಿವೆ.
ಮಂಗಳವಾರ ಈ ಷೇರು 189.30 ರೂ.ನಲ್ಲಿ ವಹಿವಾಟು ನಡೆಸುತ್ತಿತ್ತು. ಆದರೆ ಬುಧವಾರ ಬೆಳಗ್ಗೆ ಸುಮಾರು 14.60 ರೂ.(ಶೇ.7.72ರಷ್ಟು) ಏರಿಕೆಯೊಂದಿಗೆ 203.70 ರೂ.ಗೆ ತಲುಪಿತ್ತು. ವಹಿವಾಟಿನ ಅವಧಿಯಲ್ಲಿ ಷೇರಿನ ಗರಿಷ್ಠ ಮಟ್ಟ 216.50 ರೂ.ಗೆ ತಲುಪಿತ್ತು. ಇದಾದ ಬಳಿಕ ಪ್ರಾಫಿಟ್ ಬುಕ್ಕಿಂಗ್‍ನಿಂದಾಗಿ ಶೇರು ಸ್ವಲ್ಪ ಇಳಿಕೆ ಕಂಡಿತು.
ದೇಶೀಯ ಹೂಡಿಕೆದಾರರಿಂದ(Domestic players) ಆರಂಭಿಕ ಕೊಡುಗೆಗಳನ್ನು ತಿರಸ್ಕರಿಸಿದ ನಂತರ CK ಬಿರ್ಲಾ ಗೌತಮ್ ಅವರು ಗೌತಮ್ ಅದಾನಿಯನ್ನು ಸಂಪರ್ಕಿಸಿದ್ದಾರೆಂದು ವರದಿಯಾಗಿದೆ. ಈ ವರದಿಯ ಪ್ರಕಾರ, ಅದಾನಿ ಗ್ರೂಪ್‌ಗೆ ಸಂಭವನೀಯ ಒಪ್ಪಂದವನ್ನು ಚರ್ಚಿಸಲು ಎರಡೂ ಕಡೆಯ ಹಿರಿಯ ಮ್ಯಾನೇಜ್‌ಮೆಂಟ್ ಭೇಟಿಯಾಗಿದೆಯಂತೆ.
ಅದಾನಿ ಗ್ರೂಪ್ ಈಗಾಗಲೇ ದೇಶದಲ್ಲಿ 2ನೇ ಅತಿದೊಡ್ಡ ಸಿಮೆಂಟ್ ಉತ್ಪಾದಕವಾಗಿದೆ. Sanghi Industriesಇತ್ತೀಚಿನ ಸ್ವಾಧೀನದ ನಂತರ ಇದರ ಒಟ್ಟು ಸಿಮೆಂಟ್ ಉತ್ಪಾದನಾ ಸಾಮರ್ಥ್ಯವು 110 MTPAಗೆ ಹೆಚ್ಚಿದೆ.
ಕಳೆದ ಕೆಲವು ತಿಂಗಳುಗಳಿಂದ ಗೌತಮ್ ಅದಾನಿ ಜೊತೆಗೆ ಸಿಕೆ ಬಿರ್ಲಾರ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಟ್ರೆಂಡ್‌ಲೈನ್ ಡೇಟಾ ಪ್ರಕಾರ, ಸೆಪ್ಟೆಂಬರ್ 2023ರ ತ್ರೈಮಾಸಿಕದವರೆಗೆ ಪ್ರವರ್ತಕರು ಕಂಪನಿಯಲ್ಲಿ ಸುಮಾರು ಶೇ.37.9ರಷ್ಟು ಪಾಲನ್ನು ಹೊಂದಿದ್ದಾರೆ.