ಸೂರ್ಯಕುಮಾರ್ ಟಿ20 ನಾಯಕ ಆಗಬೇಕೆಂದು ನೂತನ ಕೋಚ್ ಪಟ್ಟು..! ಇವರ ಮೇಲೆ ಗೌತಮ್ ಗಂಭೀರ್‌ಗೆ ಯಾಕೆ ಇಷ್ಟು ಒಲವು..?
ಆಗಸ್ಟ್ 27 ರಿಂದ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಶ್ರೀಲಂಕಾ ಪ್ರವಾಸಕ್ಕೆ ಭಾರತ ಈಗಾಗಲೇ ತಯಾರಿ ನಡೆಸುತ್ತಿದ್ದು, ಆಗಸ್ಟ್ 3 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ ಶ್ರೀಲಂಕಾದ ವಿರುದ್ಧ ಆಡಲಿದೆ. ಈ ಸರಣಿಯಿಂದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಕೋಚ್ ಆಗಿ ತಮ್ಮ ಜವಾಬ್ದಾರಿ ನಿರ್ವಹಿಸಿಲಿದ್ದಾರೆ. ತಂಡದ ಆಯ್ಕೆ ಸಂದರ್ಭದಲ್ಲಿ ಟಿ20 ನಾಯಕತ್ವದ ಕುರಿತು ಮಹತ್ವದ ಘೋಷಣೆಯಾಗುವ ನಿರೀಕ್ಷೆಯಿದೆ.
2024 ರ ಟಿ 20 ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದರೂ, ಸೂರ್ಯಕುಮಾರ್ ಯಾದವ್ ಅವರನ್ನು ಲಂಕಾ ಸರಣಿಗೆ ಟಿ 20 ನಾಯಕರನ್ನಾಗಿ ನೇಮಿಸಲಾಗುವುದು ಎಂದು ವರದಿಗಳು ಸೂಚಿಸುತ್ತವೆ. 2022 ರಿಂದ 2023 ರವರೆಗಿನ T20 ಪಂದ್ಯಗಳಲ್ಲಿ ಪಾಂಡ್ಯ ನಾಯಕರಾಗಿ ಒಳ್ಳೆಯ ಪ್ರದರಶನ ನೀಡಿದ್ದರು, ಇದಾದರು ಕೂಡ ಸೂರ್ಯಕುಮಾರ್ ಅವರನ್ನು ತಂಡದ ನಾಯಕರನ್ನಾಗಿ ಮಾಡುತ್ತಿರುವ ಇಷಯ ಎಲ್ಲರಲ್ಲು ಅಚ್ಚರಯನ್ನುಂಟು ಮಾಡಿದೆ.
ಈಗ ಸದ್ಯಕ್ಕೆ ಕೇಳಿ ಬರುತ್ತಿರುವ ವರದಿಗಳ ಪ್ರಕಾರ ಗಂಭೀರ್ ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡದಿರಲು ನಿರ್ಧರಿಸಿದೆ. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಗಾಯಗೊಂಡ ಪಾಂಡ್ಯ ಸುಮಾರು ಆರು ತಿಂಗಳ ಕಾಲ ಆಟದಿಂದ ದೂರವಿದ್ದರು ಮತ್ತು 2021 ರಲ್ಲಿ ಅವರು ಬೆನ್ನುನೋವಿಗೆ ಒಳಗಾಗಿದ್ದರು. ಇದೀಗ ಪಾಂಡ್ಯ ಅವರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನಾಯಕ ಪಟ್ಟ ನೀಡದಿರಲು ಸಮಿತಿ ಸಭೆ ನಿರ್ದಾರ ಕೈಗೊಂಡಿದೆ ಎಂದು ವರದಿಯಾಗಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಮಾತ್ರವಲ್ಲದೆ 2026ರ ಟಿ20 ವಿಶ್ವಕಪ್‌ನಲ್ಲೂ ಸೂರ್ಯಕುಮಾರ್ ಯಾದವ್ ಭಾರತವನ್ನು ಮುನ್ನಡೆಸಲಿದ್ದಾರೆ ಎಂದು ಪಿಟಿಐ ವರದಿತಿಳಿಸಿದೆ. ಶ್ರೀಲಂಕಾ ಸರಣಿ ಮಾತ್ರವಲ್ಲದೆ 2026ರ ವಿಶ್ವಕಪ್ ವರೆಗೂ ಸೂರ್ಯಕುಮಾರ್ ತಂಡದಲ್ಲಿ ಉಳಿಯುವ ಪ್ರಬಲ ಸಾಧ್ಯತೆ ಇದೆ.
ಪಾಂಡ್ಯ ಅವರ ಗಾಯದ ಇತಿಹಾಸವು ಈ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವರ ಬೆನ್ನಿನ ಗಾಯ 2021 ರಲ್ಲಿ ದೀರ್ಘಕಾಲದವರೆಗೆ ಅವರ ಬೌಲಿಂಗ್ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿತು. ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಉಂಟಾದ ಗಾಯದಿಂದಾಗಿ ಅವರು ಸುಮಾರು ಆರು ಪಂದ್ಯಗಳನ್ನು ತಪ್ಪಿಸಿಕೊಂಡರು. ಈ ಸಮಸ್ಯೆಗಳು ಗಂಭೀರ್ ತಂಡದ ನಾಯಕತ್ವದಲ್ಲಿ ಹೆಚ್ಚು ಸ್ಥಿರತೆಯನ್ನು ಬೀರುವಂತೆ ಮಾಡಿತು. ಗಾಯ ಮತ್ತಿತರ ಕಾರಣಗಳಿಂದ ಪಾಂಡ್ಯ ತಂಡದಲ್ಲಿ ನಾಯಕನ ಸ್ಥಾನದಿಂದ ಹೊರಗುಳಿದಿದ್ದಾರೆ. ಗಂಭೀರ್‌ಗೆ ನಿಯಮಿತವಾಗಿ ಆಡುವ ನಾಯಕನ ಅಗತ್ಯವಿದೆ. ಈ ಕಾರಣಕ್ಕೆ ಸೂರ್ಯಕುಮಾರ್ ಯಾದವ್ ಹೆಸರನ್ನು ಪರಿಗಣಿಸಲಾಗಿದೆ ಎಂದು ವರದಿಯಾಗಿದೆ.