ಈ ಎಲೆಯ ರಸವನ್ನು ತೆಂಗಿನೆಣ್ಣೆಯೊಂದಿಗೆ ಬೆರಸಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದು ! ಒಂದು ವಾರ ಬಳಸಿದರೆ ಸಾಕು!
ಕಪ್ಪು, ಉದ್ದ,ದೃಢ ಕೂದಲಿಗೆ ಸುಲಭ ಪರಿಹಾರ ನಿಮ್ಮ ಮನೆಯ ಹಿತ್ತಲಲ್ಲೇ ಇದೆ ಎನ್ನುವುದು ಬಹುತೇಕ ಮಂದಿಗೆ ತಿಳಿದಿರುವುದಿಲ್ಲ.ಹೌದು, ನಾವಿಲ್ಲಿ ಕೂದಲಿನ ಎಲ್ಲಾ ಸಮಸ್ಯೆಗಳು ವಾರದಲ್ಲಿಯೇ ಪರಿಹಾರವಾಗುವಂಥಹ ಸುಲಭ ಉಪಾಯವನ್ನು ಹೇಳಲಿದ್ದೇವೆ.
ಈ ಪರಿಹಾರವೆಂದರೆ ಪೇರಳೆ ಎಲೆಗಳು. ಪೇರಳೆ ಎಲೆಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ.ಇದು ಅನೇಕ ರೀತಿಯ ಜೀವಸತ್ವಗಳು,ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿ. ಅದರಲ್ಲಿಯೂ ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಇದು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.
ಕೆಲವು ಪೇರಳೆ ಎಲೆಗಳನ್ನು ತೊಳೆದು ಬ್ಲೆಂಡರ್‌ನಲ್ಲಿ ಹಾಕಿ ದಪ್ಪ ಪೇಸ್ಟ್ ತಯಾರಿಸಿ. ನಂತರ ಚಿಕ್ಕ ಈರುಳ್ಳಿ ತೆಗೆದುಕೊಂಡು ಪ್ಯೂರಿ ಅಥವಾ ಪೇಸ್ಟ್ ಮಾಡಿ ಅದರ ರಸವನ್ನು ತೆಗೆದುಕೊಳ್ಳಿ. ಈಗ ಈರುಳ್ಳಿ ರಸದಲ್ಲಿ ಪೇರಳೆ ಎಲೆಗಳ ಪೇಸ್ಟ್ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ.ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.ಅರ್ಧ ಗಂಟೆಯ ನಂತರ ಕೂದಲನ್ನು ತೊಳೆಯಿರಿ.
15 ರಿಂದ 20 ಪೇರಳೆ ಎಲೆಗಳನ್ನು ತೊಳೆದು ಒಣಗಿಸಿ.ಇದನ್ನು ಮಿಕ್ಸಿಯಲ್ಲಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ.ಈಗ ಈ ಪೇಸ್ಟ್ ಅನ್ನು ನಿಮ್ಮ ಪೂರ್ತಿ ಕೂದಲಿಗೆ ಹಚ್ಚಿ.ಕೆಲವು ನಿಮಿಷಗಳ ಕಾಲ ಬೆರಳುಗಳಿಂದ ಮಸಾಜ್ ಮಾಡಿ. 30-40 ನಿಮಿಷಗಳ ಕಾಲ ಈ ಪೇಸ್ಟ್ ನಿಮ್ಮ ಕೂದಲಿನ ಮೇಲೆ ಹಾಗೆಯೇ ಇರಲಿ. ನಂತರ ಸಾಧಾರಣ ನೀರಿನಿಂದ ಕೂದಲನ್ನು ತೊಳೆಯಿರಿ. ಈ ರೀತಿ ವಾರಕ್ಕೆರಡು ಬಾರಿ ಮಾಡಿದರೆ ಪರಿಣಾಮ ತಿಳಿಯುತ್ತದೆ.
ಇದಕ್ಕಾಗಿ ಕೆಲವು ಪೇರಳೆ ಎಲೆಗಳನ್ನು ತೊಳೆದು ಅವುಗಳನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಕುದಿಸಿ. 15 ರಿಂದ 20 ನಿಮಿಷಗಳ ಕಾಲ ಕುದಿಸಿದ ನಂತರ, ಅದನ್ನು ತಣ್ಣಗಾಗಿಸಿ. ಈ ನೀರು ತಣ್ಣಗಾದ ಬಳಿಕ ಅದನ್ನು ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹಿಸಿ. ಹೀಗೆ ಬಾಟಲಿಯಲ್ಲಿ ಹಾಕಿದ ನೀರನ್ನು ಕೂದಲಿನ ಬುಡಕ್ಕೆ ಮತ್ತು ಪೂರ್ತಿ ಕೂದಲಿಗೆ ಸ್ಪ್ರೇ ಮಾಡಿ, 10 ನಿಮಿಷಗಳ ಕಾಲ ಮಸಾಜ್ ಮಾಡಿ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.