Gemology: ಜಾತಕದಲ್ಲಿ ಶನಿ ದುರ್ಲಬನಾಗಿದ್ದರೆ ಇಂದೇ ಈ ರತ್ನವನ್ನು ಧರಿಸಿ, ಆರ್ಥಿಕ ಸಮಸ್ಯೆಗಳಿಂದಲೂ ಸಿಗುತ್ತೆ ಪರಿಹಾರ
ಜ್ಯೋತಿಷ್ಯ ಶಾಸ್ತ್ರದಂತೆ ರತ್ನ ಶಾಸ್ತ್ರಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆ. ರತ್ನ ಧಾರಣೆಯಿಂದ ನಿರ್ದಿಷ್ಟ ಗ್ರಹ ದೋಷಗಳನ್ನು ನಿವಾರಿಸಬಹುದು.
ರತ್ನ ಶಾಸ್ತ್ರದ ಪ್ರಕಾರ, ನಿಮ್ಮ ಜಾತಕದಲ್ಲಿ ಯಾವ ಗ್ರಹಗಳ ದೋಷ ಇದೆಯೋ ಆ ಗ್ರಹಗಳ ದೋಷ ನಿವಾರಿಸಲು ವ್ಯಕ್ತಿಯು ನಿಯಮಿತವಾಗಿ ರತ್ನ ಧಾರಣೆ ಮಾಡುವುದು ಲಾಭದಾಯಕ ಮತ್ತು ಆ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ ಎಂಬ ನಂಬಿಕೆಯಿದೆ.
ರತ್ನಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಕರ್ಮಫಲದಾತ ಶನಿ ದುರ್ಬಲನಾಗಿದ್ದಾಗ ಅಂತಹವರು ಜ್ಯೋತಿಷಿಗಳ ಸಲಹೆ ಪಡೆದು ನೀಲಮಣಿ ಧರಿಸುವುದು ತುಂಬಾ ಶುಭ.
ಜಾತಕದಲ್ಲಿ ಶನಿ ದೋಷ ಇದ್ದವರು ನೀಲಮಣಿ ರತ್ನವನ್ನು ಧರಿಸುವುದರಿಂದ ಅವರ ಅದೃಷ್ಟ ರಾತ್ರೋರಾತ್ರಿ ಬದಲಾಗುತ್ತದೆ.
ನೀಲಮಣಿ ಧಾರಣೆಯಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ, ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ ವ್ಯಕ್ತಿಯ ಕೋಪ ಕಡಿಮೆಯಾಗಿ ತಾಳ್ಮೆ ಬರುತ್ತದೆ. ಆದಾಗ್ಯೂ, ಈ ರತ್ನವನ್ನು ಧರಿಸುವ ಮೊದಲು ಕೆಲವು ನಿಯಮಗಳನ್ನು ತಿಳಿಯುವುದು ಅಗತ್ಯ.
ಜಾತಕದಲ್ಲಿ ಶನಿ ದೋಷ ಇದ್ದವರಷ್ಟೇ ಜ್ಯೋತಿಷಿಗಳ ಸಲಹೆ ಪಡೆದು ನೀಲಮಣಿ ರತ್ನ ಧರಿಸಬೇಕು. ಉತ್ತಮ ಫಲಿತಾಂಶಕ್ಕಾಗಿ ನೀಲಮಣಿಯನ್ನು ಪಂಚಧಾತುಗಳಲ್ಲಿ ಹೊಂದಿಸಿ ಉಂಗುರ ಮಾಡಿಸಿ ಅದನ್ನು ಎಡಗೈನಲ್ಲೇ ಧರಿಸಬೇಕು. ಶನಿವಾರ ಮಧ್ಯರಾತ್ರಿ ಈ ಉಂಗುರ ಧಾರಣೆ ಮಾಡುವುದು ಹೆಚ್ಚು ಲಾಭದಾಯಕ.
ನೀಲಮಣಿ ಧರಿಸಿದ ಬಳಿಕ ಶನಿ ಗ್ರಹಕ್ಕೆ ಸಂಬಂಧಿಸಿದ ಕಪ್ಪು ಬಟ್ಟೆ, ಸಾಸಿವೆ ಎಣ್ಣೆ, ಕಬ್ಬಿಣ, ಕಪ್ಪೆಳ್ಳು, ಕಪ್ಪು ಕಂಬಳಿಯಂತಹ ಶನಿಗೆ ಸಂಬಂಧಿಸಿದ ವಸ್ತುಗಳನ್ನು ಅಗತ್ಯವಿದ್ದವರಿಗೆ ದಾನ ಮಾಡಿದರೆ ಒಳ್ಳೆಯದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.