ಮಾದರಿ ಜೋಡಿ ಎನಿಸಿಕೊಂಡಿದ್ದವರ ಬಾಳಲ್ಲಿ ಬಿರುಗಾಳಿ!? ರಿತೇಶ್ ದೇಶಮುಖ್- ಜೆನಿಲಿಯಾ `ಬ್ರೇಕಪ್`! 12 ವರ್ಷಗಳ ಸುಂದರ ದಾಂಪತ್ಯದಲ್ಲಾಗಿದ್ದೇನು?
ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಬಾಲಿವುಡ್‌ನ ಆದರ್ಶ ದಂಪತಿಗಳು. ಇವರನ್ನು ನೋಡಿ, ಇತರ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಹ ಸ್ಫೂರ್ತಿ ಪಡೆಯುತ್ತಾರೆ. ಆದರೆ ಒಂದೊಮ್ಮೆ ಇವರಿಬ್ಬರೂ ಸಹ ಬ್ರೇಕಪ್ ಮಾಡಿಕೊಂಡಿದ್ದರಂತೆ,
ಈ ಮಾದರಿ ಜೋಡಿ ತಮ್ಮ ಮೊದಲ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅದಾದ ಸ್ವಲ್ಪ ಸಮಯದ ನಂತರ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿತ್ತು. ಇದೀಗ ಮದುವೆಯಾಗಿ 12 ವರ್ಷಗಳೇ ಕಳೆದಿವೆ.
ಇದೀಗ 12 ವರ್ಷಗಳ ನಂತರ ಜೆನಿಲಿಯಾ ಡಿಸೋಜಾ ತಮ್ಮ ಪತಿಯ ಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಒಮ್ಮೆ ತಾನು ಮತ್ತು ರಿತೇಶ್ ಬ್ರೇಕಪ್ ಮಾಡಿಕೊಂಡಿದ್ದೆವು ಎಂದು ನಟಿ ಹೇಳಿದ್ದಾರೆ. ಈ ಬ್ರೇಕಪ್ ಹಿಂದಿನ ಕಾರಣ ಏನು ಮತ್ತು ನಂತರ ಹೇಗೆ ಪ್ಯಾಚ್ ಅಪ್ ಮಾಡಿಕೊಂಡರು ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ, ಜೆನಿಲಿಯಾ ಡಿಸೋಜಾ ಅವರು ತಮ್ಮ ಪತಿ ರಿತೇಶ್ ದೇಶ್‌ಮುಖ್ ಬಗ್ಗೆ ಬಹಳಷ್ಟು ವಿಷಯಗಳನ್ನು ಬಹಿರಂಗಪಡಿಸಿದ್ದರು.
"ನಾವು ಡೇಟಿಂಗ್‌ನಲ್ಲಿರುವಾಗ, ನಾನು ಬೇಗನೆ ಮಲಗುತ್ತಿದ್ದೆ ಮತ್ತು ರಿತೇಶ್ ತಡರಾತ್ರಿಯಲ್ಲಿ ಮಲಗುತ್ತಿದ್ದರು. ಒಂದು ದಿನ ರಾತ್ರಿ 1 ಗಂಟೆ ಸುಮಾರಿಗೆ ರಿತೇಶ್ ನನಗೆ ʼಬ್ರೇಕಪ್ʼ ಎಂದು ಮೆಸೇಜ್ ಕಳುಹಿಸಿದರು. ಹೀಗೆ ಬರೆದು ರಿತೇಶ್ ಮಲಗಿದ್ದರು. ನಾನು ಆ ಮೆಸೇಜ್‌ನ್ನು ನೋಡಿದ್ದು 2:30ರ ಸುಮಾರಿಗೆ. ಓದಿದ ತಕ್ಷಣ ನನಗೆ ಬಹಳಷ್ಟು ನೋವಾಯಿತು.ಇದ್ದಕ್ಕಿದ್ದಂತೆ ಏನಾಯಿತು ಎಂದು ಭಯಪಟ್ಟಿದ್ದೆ" ಎಂದರು.
"ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ರಿತೇಶ್ ಎದ್ದಾಗ ತಾನು ಏನು ಮೆಸೇಜ್ ಕಳುಹಿಸಿದ್ದೆ ಎಂಬುದು ಕೂಡ ಆತನಿಗೆ ನೆನಪಿರಲಿಲ್ಲ. ಅದು ಆತ ತಮಾಷೆಯಾಗಿ ಬರೆದಿದ್ದನಂತೆ. ನಾನು ಮಾತ್ರ ಬಹಳಷ್ಟು ನೊಂದುಬಿಟ್ಟಿದ್ದೆ" ಎಂದು ಜೆನಿಲಿಯಾ ಹೇಳಿದ್ದಾರೆ