Ayodhya Ram Mandir Free Prasad: ಅಯೋಧ್ಯೆ ರಾಮಮಂದಿರ ಪ್ರಸಾದವನ್ನು ಆನ್‌ಲೈನ್‌ನಲ್ಲಿ ಈ ರೀತಿ ಫ್ರೀ ಆಗಿ ಬುಕ್ ಮಾಡಿ
ಕೋಟಿ ಕೋಟಿ ರಾಮ ಭಕ್ತರ ಕನಸು ಇಂದು ನನಸಾಗಲಿದೆ. ಇಂದು ಅಂದರೆ ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ರಾಮ ಭಕ್ತರು ಕುತೂಹಲಕಾರಿಯಾಗಿ ಕಾಯುತ್ತಿದ್ದಾರೆ.
ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಪೂಜೆಯ ಪ್ರಸಾದ: ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ದೇಶಾದ್ಯಂತ ಆಯ್ದ ಗಣ್ಯರನ್ನು ಮಾತ್ರ ಆಹ್ವಾನಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಹೋಗಲು ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಅವಕಾಶವಿರುವುದಿಲ್ಲ. ಆದರೆ, ನೀವು ಆನ್‌ಲೈನ್‌ನಲ್ಲಿಯೇ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ನೇರವಾಗಿ ವೀಕ್ಷಿಸಬಹುದು. ಮಾತ್ರವಲ್ಲ, ನೀವು ಕುಳಿತಿರುವಲ್ಲಿಯೇ ರಾಮಮಂದಿರ ಪ್ರಾಣ ಪ್ರತಿಷ್ಠಾ ಪೂಜೆಯ ಪ್ರಸಾದವನ್ನು ಬುಕ್ ಮಾಡಬಹುದು.
ರಾಮಮಂದಿರದ ಖಾದಿ ಆರ್ಗ್ಯಾನಿಕ್ ಹೆಸರಿನ ವೆಬ್‌ಸೈಟ್ ಒಂದು ವಾರದೊಳಗೆ ನಿಮ್ಮ ಮನೆಗೆ ಪ್ರಸಾದವನ್ನು ತಲುಪಿಸಲಾಗುವುದು ಎಂದು ಹೇಳುತ್ತಿದೆ. ನೀವು ರಾಮಮಂದಿರ ಪ್ರಸಾದವನ್ನು ಮನೆಗೆ ತರೆಸಿಕೊಳ್ಳಲು ಬಯಸಿದರೆ ಇದನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲು, ನೀವು ವೆಬ್‌ಸೈಟ್ khadiorganic.com ಗೆ ಭೇಟಿ ನೀಡಬೇಕು. ಈಗ ಇಲ್ಲಿ ನಿಮ್ಮ ಉಚಿತ ಪ್ರಸಾದ್ ಪಡೆಯಿರಿ ಎಂದು ಮೇಲಿನಂತೆ ಬರೆಯಲಾಗಿದೆ, ಅಲ್ಲಿ ಕ್ಲಿಕ್ ಮಾಡಿ.
khadiorganic.com ವೆಬ್‌ಸೈಟ್ ಗೆ ಭೇಟಿ ನೀಡಿದಾದ ಇಲ್ಲಿ ನಿಮ್ಮ ಉಚಿತ ಪ್ರಸಾದವನ್ನು ಪಡೆಯಿರಿ ಎಂದು ಬರೆಯಲಾಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಈಗ ನೀವು ನಿಮ್ಮ ಹೆಸರು, ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಬೇಕು. ನಿಮಗೆ ನಿಮ್ಮ ಪ್ರಸಾದ್ ಉಚಿತವಾಗಿ ಬೇಕಾದರೆ, ನಂತರ ಉಚಿತ ವಿತರಣಾ ಕೇಂದ್ರವನ್ನು ಕ್ಲಿಕ್ ಮಾಡಿ. ಒಂದೊಮ್ಮೆ ನೀವು ಖಾದಿ ಆರ್ಗ್ಯಾನಿಕ್ ನಿಂದ ಪ್ರಸಾದವನು ಖರೀದಿಸಲು ಬಯಸಿದರೆ ಖಾದಿ ಆರ್ಗ್ಯಾನಿಕ್ ವಿತರಣಾ ಕೇಂದ್ರದಿಂದ ಪಿಕಪ್ ಆಯ್ಕೆಯನ್ನು ಆರಿಸಿ.
ನೀವು ಕುಳಿತಿರುವಲ್ಲಿಯೇ ಕುಳಿತು ರಾಮ ಮಂದಿರ ಪ್ರಸಾದವನ್ನು ಆರ್ಡರ್ ಮಾಡಲು ಬಯಸಿದರೆ ಇದಕ್ಕಾಗಿ ಕೇವಲ 51 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ 51ರೂ. ಶುಲ್ಕ ಪ್ರಸಾದದ ಶುಲ್ಕವಲ್ಲ, ಇದು ನಿಮ್ಮ ವಿಳಾಸಕ್ಕೆ ಪ್ರಸಾದವನ್ನು ತಲುಪಿಸಲು ತಗುಲುವ ಡೆಲಿವರಿ ಶುಲ್ಕವಾಗಿರಲಿದೆ.