Apple ಉತ್ಪನ್ನಗಳ ಖರೀದಿಯಲ್ಲಿ ಪಡೆಯಿರಿ ಭಾರೀ ಕ್ಯಾಶ್‌ಬ್ಯಾಕ್
ಭಾರತದ ಯಾವುದೇ ಆಪಲ್ ಅಂಗಡಿಯಿಂದ ಆನ್‌ಲೈನ್ ಆರ್ಡರ್ ಮೂಲಕ ಖರೀದಿಸಲು ಕಂಪನಿಯು ಗ್ರಾಹಕರಿಗೆ 5000 ರೂ.ಗಳ ಕ್ಯಾಶ್‌ಬ್ಯಾಕ್ ನೀಡುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಕೊಡುಗೆಯ ಅಧಿಸೂಚನೆಗಳನ್ನು ಆಪಲ್ ಸ್ಟೋರ್ ಇಂಡಿಯಾ ವೆಬ್‌ಪುಟದಲ್ಲಿ ನೋಡಬಹುದು.
ಆದಾಗ್ಯೂ ಆಪಲ್ ಕಂಪನಿಯು ನೀಡುತ್ತಿರುವ ಕೊಡುಗೆಯ ಲಾಭ ಪಡೆಯಲು ಕೆಲವು ಷರತ್ತುಗಳಿವೆ. ಮೊದಲ ಷರತ್ತಿನ ಪ್ರಕಾರ ಈ ಕ್ಯಾಶ್‌ಬ್ಯಾಕ್ ಕೊಡುಗೆ ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಎಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್ ಇಎಂಐಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಎರಡನೆಯ ಷರತ್ತು 44,900 ಅಥವಾ ಅದಕ್ಕಿಂತ ಅಧಿಕ ಮೌಲ್ಯದ ಪ್ರಾಡಕ್ಟ್ ಗಳ ಮೇಲೆ ಈ ಕೊಡುಗೆ ಲಭ್ಯವಿದೆ. ಬಹು ಆದೇಶಗಳನ್ನು ಒಟ್ಟುಗೂಡಿಸಿ 5,000 ರೂ.ಗಳ ಕ್ಯಾಶ್ ಬ್ಯಾಕ್ ಅನ್ನು ನೀಡಲಾಗುವುದಿಲ್ಲ ಎಂಬುದನ್ನು ನೆನಪಿಡಿ.
ಇದನ್ನೂ ಓದಿ - Antarctica Ice Bergs Melting - ಭೂಮಿಗೆ ಹಿಮಯುಗದ ಆಗಮನ! ಆತಂಕ ವ್ಯಕ್ತಪಡಿಸಿದ ವಿಜ್ಞಾನಿಗಳು
ಕಂಪನಿಯ ಪ್ರಕಾರ, ನೀವು ಆದೇಶಕ್ಕಾಗಿ ಸಂಪೂರ್ಣವಾಗಿ ಚೆಕ್ ಔಟ್ ಮಾಡಿದ ತಕ್ಷಣ ಕ್ಯಾಶ್‌ಬ್ಯಾಕ್ ಹಣವನ್ನು ಬಳಕೆದಾರರ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ (Credit Card) ಖಾತೆಗೆ 7 ದಿನಗಳಲ್ಲಿ ಜಮಾ ಮಾಡಲಾಗುತ್ತದೆ. ನೀವು 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಯನ್ನು ಹೊಂದಿರುತ್ತೀರಿ.
ಇದನ್ನೂ ಓದಿ - ಶೀಘ್ರದಲ್ಲೇ ಬರಲಿದೆ iPhone 13 ಈವರೆಗಿನ ಅತಿ ಸ್ಲಿಮ್ Smartphone
ಆಪಲ್ ಇಂಡಿಯಾ ಆನ್‌ಲೈನ್ ಸ್ಟೋರ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಯಿತು ಮತ್ತು ಆಪಲ್‌ನ ಎಲ್ಲಾ ಉತ್ಪನ್ನಗಳು Apple India online Storeನಲ್ಲಿ ಲಭ್ಯವಿದೆ.