ಸೊಳ್ಳೆ ಕಡಿತದಿಂದ ಉಂಟಾಗುವ ಕಲೆಗಳನ್ನು ನಿವಾರಿಸಲು ತುಂಬಾ ಪ್ರಯೋಜಕಾರಿ ವಸ್ತುಗಳಿವು
ಸೊಳ್ಳೆಗಳ ಕಡಿತವು ಚರ್ಮದ ಮೇಲೆ ಆಳವಾದ ಗಾಯಗಳನ್ನು ಬಿಡುವುದಲ್ಲದೆ, ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ತಪ್ಪಿಸಲು ನಿಮ್ಮ ಅಡುಗೆ ಮನೆಯಲ್ಲಿಯೇ ಲಭ್ಯವಿರುವ ವಸ್ತುಗ್ಳನ್ನು ಬಳಸಿ ಸೊಳ್ಳೆ ಕಡಿತದಿಂದ ಉಂಟಾಗುವ ಕಲೆಗಳನ್ನು ಹೇಗೆ ತೆಗೆದುಹಾಕುವುದು ಎಂದು ತಿಳಿಯೋಣ.
ಸೊಳ್ಳೆ ಕಚ್ಚಿದಾಗ ಕೆರೆದ ಜಾಗದಲ್ಲಿ ಗುರುತುಗಳು ಕಂಡು ಬಂದರೆ, ಬಳಿಕ ಈರುಳ್ಳಿಯನ್ನು ಕತ್ತರಿಸಿ ಆ ಜಾಗದಲ್ಲಿ ಹಚ್ಚಿರಿ. ಇದರಿಂದ ಸೊಳ್ಳೆ ಕಡಿತದ ತುರಿಕೆ ಕಡಿಮೆ ಆಗುವುದರ ಜೊತೆಗೆ ಕಲೆಯೂ ನಿವಾರಣೆ ಆಗುತ್ತದೆ.
ನಿಂಬೆಹಣ್ಣಿನ ಅದ್ಭುತ ಪ್ರಯೋಜನಗಳ ಬಗ್ಗೆ ನಮಗೆ ತಿಳಿದೇ ಇದೆ. ಸಾಮಾನ್ಯವಾಗಿ ನಾವು ನಿಂಬೆ ರಸವನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದ್ರೆ, ಈ ನಿಂಬೆ ಸಿಪ್ಪೆಯನ್ನು ಸೊಳ್ಳೆ ಕಡಿತದ ಜಾಗದಲ್ಲಿ ಉಜ್ಜಿದರೆ ಸೊಳ್ಳೆ ಕಡಿತದ ಗುರುತು ಮಾಯವಾಗುತ್ತದೆ.
ಸೊಳ್ಳೆ ಕಡಿತದಿಂದ ಉಂಟಾಗಿರುವ ಕಲೆಯ ಜಾಗದಲ್ಲಿ ಅಡುಗೆ ಸೋಡಾವನ್ನೂ ಹಾಕಿ ತೊಳೆಯುವುದರಿಂದ ಕಲೆ ಸಂಪೂರ್ಣವಾಗಿ ಮಾಯವಾಗುತ್ತದೆ ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿ ಎಂದು ಬಳಸಲ್ಪಡುವ ಆಪಲ್ ಸೈಡರ್ ವಿನೆಗರ್ ಚರ್ಮದ ಆರೈಕೆಯಲ್ಲಿಯೂ ತುಂಬಾ ಪ್ರಯೋಜನಕಾರಿ ಆಗಿದೆ. ಸೊಳ್ಳೆಯು ಮುಖ ಅಥವಾ ದೇಹದ ಯಾವುದೇ ಭಾಗಕ್ಕೆ ಕಚ್ಚಿದರೆ ಒಂದರ್ಧ ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಮೂರು ಚಮಚ ನೀರಿನಲ್ಲಿ ಬೆರೆಸಿ, ಅದನ್ನು ಪೀಡಿತ ಪ್ರದೇಶದಲ್ಲಿ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಕಲೆ ನಿವಾರಣೆ ಆಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.