ದಿನಕ್ಕೊಮ್ಮೆ ಇದನ್ನು ತಿನ್ನಿ.. ದಿನವಿಡೀ ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ!
ಮಧುಮೇಹಿಗಳಿಗೆ ಬೆಳಿಗ್ಗೆ ಕೆಲವು ದಿನಚರಿ ಪಾಲಿಸುವುದು ಬಹಳ ಮುಖ್ಯ. ಮಧುಮೇಹಿಗಳು ಮುಂಜಾನೆ ಈ ಆಹಾರವನ್ನು ಸೇವಿಸಿದರೆ ಬ್ಲಡ್ ಶುಗರ್ ಬ್ಯಾಲೆನ್ಸ್ ಮಾಡಬಹುದು.
ಬೆಳಿಗ್ಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದರೆ, ಮಧುಮೇಹ ಹೊಂದಿರುವವರಿಗೆ ಸಮಸ್ಯೆಯಾಗಬಹುದು. ಹೀಗಾಗಿ ಬೆಳಿಗ್ಗೆ ಪ್ರೋಟೀನ್, ಉತ್ತಮ ಕೊಬ್ಬು, ಫೈಬರ್ ಮತ್ತು ಪಿಷ್ಟವಿಲ್ಲದ ಸಮತೋಲಿತ ಊಟವನ್ನು ಸೇವಿಸಬೇಕು.
ಬೆಳಗಿನ ಜಾವ ಲಿವರ್ ನಲ್ಲಿ ಗ್ಲೂಕೋಸ್ ಉತ್ಪತ್ತಿಯಾಗುವುದರಿಂದ ಇಡೀ ದಿನ ಶಕ್ತಿ ತುಂಬಿರುತ್ತದೆ. ಬಹಳ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ದಿನವಿಡೀ ತಲೆಸುತ್ತು ಬರುವುದು ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದರ ಲಕ್ಷಣ.
ಪ್ರತಿದಿನ ಬೆಳಿಗ್ಗೆ ಒಂದು ಚಮಚ ತುಪ್ಪದೊಂದಿಗೆ ಅರಿಶಿನ ಪುಡಿಯನ್ನು ತಿನ್ನುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿ.
ಮಧುಮೇಹದಿಂದ ಬಳಲುತ್ತಿರುವವರಿಗೆ ತುಪ್ಪ ಬಹಳ ಮುಖ್ಯವಾದ ಆಹಾರ ಪದಾರ್ಥವಾಗಿದೆ. ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.
ಬೆಳಿಗ್ಗೆ ಒಂದು ಚಮಚ ತುಪ್ಪದೊಂದಿಗೆ ಅರಿಶಿನ ತಿನ್ನುವುದರಿಂದ ದಿನವಿಡಿ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.