ಈ ಒಂದು ಪದಾರ್ಥದಿಂದ ಮುಖವನ್ನು ಮಸಾಜ್ ಮಾಡಿ..ನಿಮ್ಮ ತ್ವಚೆ ಚಿನ್ನದಂತೆ ಕಂಗೊಳಿಸುತ್ತದೆ
ತುಪ್ಪದಿಂದ ಮಸಾಜ್ ಮಾಡುವುದರಿಂದ ನಮ್ಮ ತ್ವಚೆಯು ಹೊಳೆಯುವುದಲ್ಲದೆ ಯೌವನದಿಂದ ಕೂಡಿರುತ್ತದೆ. ಹಾಗಾದರೆ ಈ ಮಸಾಜ್ ಅನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯಲು ಮುಂದೆ ಓದಿ...
ತುಪ್ಪದಲ್ಲಿ ವಿಟಮಿನ್ ಮತ್ತು ಕೊಬ್ಬಿನಾಮ್ಲಗಳಿವೆ, ಇದರ ಕಾರನ ತುಪ್ಪ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ತುಪ್ಪ ನಮ್ಮ ದೇಹದಲ್ಲಿ ಕೊಲಾಜೆನ್ ಉತ್ಪಾದನೆಯನ್ನು ಹೆಚ್ಚಿಸುವುದು ಅಷ್ಟೆ ಅಲ್ಲದೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಯಾವಾಗಲೂ ಉತ್ತಮ ಗುಣಮಟ್ಟದ ನೈಸರ್ಗಿಕ ತುಪ್ಪವನ್ನು ಬಳಸಿ ನಿಮ್ಮ ಮುಖವನ್ನು ಮಸಾಜ್ ಮಾಡಿ, ಇದರಿಂದ ನಿಮ್ಮ ಚರ್ಮ ಕಾಂತಿಯುತವಾಗುತ್ತದೆ.
ತುಪ್ಪವನ್ನು ಮುಖಕ್ಕೆ ಹಚ್ಚುವ ಮುನ್ನ ಸೋಪ್ ಹಾಕಿ ಮುಕವನ್ನು ಸ್ವಚ್ಛಗೊಳಿಸಿ ನಂತರ ತೇವವಿಲ್ಲದೆ ಒರೆಸಿ, ಮಸಾಜ್ ಮಾಡಿ.
ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ತೆಗೆದುಕೊಂಡು ಬಾನಲೆಗೆ ಹಾಕಿ ಬಿಸಿ ಮಾಡಿ. ಬಸಿ ಮಾಡಿದ ತುಪ್ಪವನ್ನು ಆರಲು ಬಿಡಿ, ಸ್ವಲ್ಪ ಸಮಯದ ನಂತರ ತುಪ್ಪವನ್ನು ಬೆರಳಿನಲ್ಲಿ ತೆಗೆದುಕೊಂಡು ಮುಕದ ಮೇಲೆ ಹಚ್ಚಿ ಮಸಾಜ್ ಮಾಡಿ.
ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಮುಖದ ಮೇಲೆ ನಿಧಾನವಾಗಿ ಮಸಾಜ್ ಮಾಡುತ್ತಾ ಹೋಗಿ, ಮುಖದ ಮೇಲೆ ಗೆರೆಗಳು ಮತ್ತು ಕಲೆಗಳಿರುವ ಜಾಗಗಳ ಮೇಲೆ ಸ್ವಲ್ಪ ಹೆಚ್ಚು ಒತ್ತಡವನ್ನು ನೀಡಿ ನಿಧಾನವಾಗಿ ನಿಮ್ಮ ಚರ್ಮವನ್ನು ಮಸಾಜ್ ಮಾಡಿ.
ಹೆಚ್ಚು ಸುಕ್ಕುಗಳು ಹಾಗೂ ಕಣ್ಣು ಮತ್ತು ಬಾಯಿಯ ಸುತ್ತಲೂ ತುಪ್ಪವನ್ನು ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ.
ನಿಮ್ಮ ಚರ್ಮದ ಮೇಲೆ ಚೆನ್ನಾಗಿ ಮಸಾಜ್ ಮಾಡಿದ ನಂತರ 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಇರಿಸಿ, ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆಯಿರಿ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.