ರಾತ್ರಿ ದೇಹದ ಈ ಭಾಗಕ್ಕೆ ತುಪ್ಪ ಮತ್ತು ಈ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿದರೆ ಬಿಳಿ ಕೂದಲು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗುತ್ತದೆ! ಒಮ್ಮೆ ಟ್ರೈ ಮಾಡಿ ನೋಡಿ
ದೇಹದ ಇತರ ಭಾಗಗಳನ್ನು ಆರೋಗ್ಯಕರವಾಗಿಡಲು ತುಪ್ಪ ಪ್ರಯೋಜನಕಾರಿಯಾಗಿದೆ. ಪ್ರತಿದಿನ ರಾತ್ರಿ ಎರಡು ಹನಿ ತುಪ್ಪವನ್ನು ಹೊಕ್ಕಳಿಗೆ ಹಚ್ಚಿದರೆ ಹೊಟ್ಟೆನೋವು, ಮಲಬದ್ಧತೆ ಮೊದಲಾದ ಹಲವು ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಇಷ್ಟು ಮಾತ್ರವಲ್ಲದೆ, ಹೊಕ್ಕಳಿಗೆ ತುಪ್ಪ ಮತ್ತು ಎಣ್ಣೆ ಹಚ್ಚುವುದರಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಎನ್ನುವ ಮಾಹಿತಿ ನಿಮಗೆ ಇದೆಯೇ?
ಬಿಳಿ ಕೂದಲು ಕಪ್ಪಾಗುವಂತೆ ಮಾಡಲು ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ತುಪ್ಪ ಮತ್ತು ಎಣ್ಣೆಯನ್ನು ಹಚ್ಚಬೇಕು.ಎಣ್ಣೆ ಅಂದ ಕೂಡಲೇ ಯಾವ ಎಣ್ಣೆಯನ್ನು ತುಪ್ಪದ ಜೊತೆ ಹಚ್ಚಬೇಕು ಎನ್ನುವುದು ಬಹಳ ಮುಖ್ಯ.
ತುಪ್ಪದ ಜೊತೆಗೆ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಸೇರಿಸಿ ಹೊಕ್ಕಳಿಗೆ ಹಚ್ಚಬೇಕು.ಇದರಿಂದ ಕೂದಲು ಕಪ್ಪಾಗುವುದಲ್ಲದೆ ಉದ್ದನೆ ಬೆಳೆಯಲು ಸಹಾಯ ಮಾಡುತ್ತದೆ.
ಪ್ರತಿ ರಾತ್ರಿ ಮಲಗುವ ಮುನ್ನ ಹೊಕ್ಕುಳಲ್ಲಿ ದೇಸಿ ತುಪ್ಪವನ್ನು ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಉತ್ತಮಗೊಳ್ಳುತ್ತದೆ.ಕೂದಲು ಬಲಗೊಳ್ಳುತ್ತದೆ ಮತ್ತು ಬಿಳಿ ಕೂದಲು ಕಪ್ಪಾಗುತ್ತದೆ.
ಹೊಕ್ಕುಳಕ್ಕೆ ಕೆಲವು ಹನಿ ಸಾಸಿವೆ ಎಣ್ಣೆ ಮತ್ತು ತುಪ್ಪವನ್ನು ಹಾಕಿ ಕನಿಷ್ಠ 20 ನಿಮಿಷಗಳ ಕಾಲ ಮಸಾಜ್ ಮಾಡಬೇಕು.ನಂತರ ಮಲಗಿಕೊಳ್ಳಿ. ಹೀಗೆ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗುವುದರಲ್ಲಿ ಸಂದೇಹವೇ ಬೇಡ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.