ತುಪ್ಪದಲ್ಲಿ ಬೆಳ್ಳುಳ್ಳಿ ಉರಿದು ಸೇವಿಸುವುದರಿಂದ ಸಿಗುತ್ತೆ ತೂಕ ನಷ್ಟಕ್ಕೆ ತಕ್ಷಣ ಪರಿಹಾರ..!
Ghee with garlic benefits: ಭಾರತೀಯ ಪಾಕಪದ್ಧತಿಯು ಅನೇಕ ತರಕಾರಿಗಳು ಮತ್ತು ಮಸಾಲೆಗಳನ್ನು ಒಳಗೊಂಡಿದೆ. ಅವು ಆಹಾರಕ್ಕೆ ರುಚಿಯನ್ನು ನೀಡುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಅಡುಗೆ ಮನೆಯಲ್ಲಿರುವ ಎರಡು ವಸ್ತುಗಳಿಂದ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಆ ಎರಡು ಪದಾರ್ಥಗಳು ಬೆಳ್ಳುಳ್ಳಿ ಮತ್ತು ತುಪ್ಪ. ಇವೆರಡೂ ಇಲ್ಲದ ಅಡುಗೆ ಮನೆಯೇ ಇಲ್ಲ ಎನ್ನಬಹುದು. ಇವೆರಡು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ.. ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಅನೇಕ ರೋಗಗಳನ್ನು ತಡೆಯಬಹುದು. ಇದು ಪವಾಡ ಔಷಧಿಯಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.
ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಆಗುವ ಆರೋಗ್ಯಕಾರಿ ಪ್ರಯೋಜನಗಳು ಯಾವುದು ತಿಳಿಯಲು ಮುಂದೆ ಓದಿ...
ತುಪ್ಪ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ . ತುಪ್ಪವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದರಲ್ಲಿರುವ ಆರೋಗ್ಯಕರ ಕೊಬ್ಬುಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ತುಪ್ಪದಲ್ಲಿ ವಿಟಮಿನ್ ಎ, ಕೆ, ಇ, ಡಿ, ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳು ಇವೆ. ಚಿಕ್ಕ ಮಕ್ಕಳಿಗೆ ತುಪ್ಪ ತಿನ್ನಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ತುಪ್ಪವನ್ನು ಪ್ರತಿದಿನ ಸೇವಿಸುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.
ಬೆಳ್ಳುಳ್ಳಿ ಸೇವನೆಯಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಬೆಳ್ಳುಳ್ಳಿಯಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವಿದೆ. ಅಧಿಕ ತೂಕವಿರುವವರಿಗೆ ಬೆಳ್ಳುಳ್ಳಿ ಸೇವನೆಯು ಉತ್ತಮ ಫಲಿತಾಂಶವನ್ನು ನೀಡುತ್ತದೆ. ತೂಕವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು.
ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಬೆಳ್ಳುಳ್ಳಿ ಒಳ್ಳೆಯದು. ಬೆಳ್ಳುಳ್ಳಿ ಸೇವನೆಯು ನಿಮಗೆ ಉತ್ತಮ ನಿದ್ರೆ ನೀಡುವಲ್ಲಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿದೆ. ಬೆಳ್ಳುಳ್ಳಿ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಬೆಳ್ಳುಳ್ಳಿಯನ್ನು ದೇಸಿ ತುಪ್ಪದೊಂದಿಗೆ ಸೇವಿಸುವುದು ಅಮೃತಕ್ಕಿಂತ ಕಡಿಮೆಯಿಲ್ಲ ಎನ್ನುತ್ತಾರೆ ಆಯುರ್ವೇದ ತಜ್ಞರು. ಬೆಳ್ಳುಳ್ಳಿಯ ಸಿಪ್ಪೆ ಬಿಡಿಸಿ ಅದನನು ಜಜ್ಜಿ, ನಂತರ ಅದನ್ನು ತುಪ್ಪದಲ್ಲಿ ಹುರಿಯಿರಿ.
ಪ್ರತಿದಿನ ಬೆಳಿಗ್ಗೆ ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ ಎಂದು ಆಯುರ್ವೇದ ಹೇಳುತ್ತದೆ. ತುಪ್ಪದಲ್ಲಿ ಹುರಿದ ನಂತರ.. ಬೆಳ್ಳುಳ್ಳಿಯ ರುಚಿ ಬದಲಾಗುತ್ತದೆ.