ನಿಂಬೆಯಲ್ಲ, ಬಿಸಿ ನೀರಿಗೆ ಇದೊಂದು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಒಂದೇ ವಾರದಲ್ಲಿ ಕರಗುತ್ತೆ ಬೆಲ್ಲಿ ಫ್ಯಾಟ್!
![ತೂಕ ಇಳಿಕೆ Weight Loss](https://kannada.cdn.zeenews.com/kannada/sites/default/files/2024/09/22/447059-weightlossdrinks.jpg?im=FitAndFill=(500,286))
ತೂಕ ಇಳಿಕೆಗಾಗಿ ನಾನಾ ಪ್ರಯತ್ನ ಮಾಡಿದ್ರೂ ನಿರೀಕ್ಷಿತ ಫಲಿತಾಂಶ ಸಿಗದೇ ಬೇಸತ್ತಿದ್ದೀರಾ?
![ಬೆಲ್ಲಿ ಫ್ಯಾಟ್ Belly Fat](https://kannada.cdn.zeenews.com/kannada/sites/default/files/2024/09/22/447058-weightlossdrinks-1.jpg?im=FitAndFill=(500,286))
ದೇಹದ ತೂಕ ಇಳಿದ್ರೂ ಹೊಟ್ಟೆಯ ಫ್ಯಾಟ್ ಕರಗುತ್ತಿಲ್ಲವೇ?
![ನಿಂಬೆ ನೀರು Lemon Water](https://kannada.cdn.zeenews.com/kannada/sites/default/files/2024/09/22/447057-weightlossdrinks-2.jpg?im=FitAndFill=(500,286))
ಸಾಮಾನ್ಯವಾಗಿ ತೂಕ ಇಳಿಕೆ ಹಾಗೂ ಬೆಲ್ಲಿ ಫ್ಯಾಟ್ ಕರಗಿಸಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬೆ ರಸ ಸೇವಿಸಿ ಕುಡಿಯುತ್ತಾರೆ.
ಇನ್ನೂ ಕೆಲವರು ಬಿಸಿ ನೀರಿಗೆ ನಿಂಬೆ ರಸ, ಜೇನು ತುಪ್ಪ ಎರಡನ್ನೂ ಬೆರೆಸಿ ಕುಡಿಯುತ್ತಾರೆ. ಆದರೂ ಹೊಟ್ಟೆ ಕರಗಿಲ್ಲ ಅಂದ್ರೆ ಇಲ್ಲಿದೆ ಸುಲಭ ಉಪಾಯ.
ತೂಕ ಹೆಚ್ಚಾಗುತ್ತೆ ಎಂದು ಕೆಲವರು ತುಪ್ಪ ಬಳಸುವುದೇ ಇಲ್ಲ. ಆದರೆ, ತುಪ್ಪ ಬಳಸಿ ಬೆಣ್ಣೆಯಂತೆ ಬೆಲ್ಲಿ ಫ್ಯಾಟ್ ಕರಗಿಸಬಹುದು.
ತುಪ್ಪದಲ್ಲಿ ವಿಟಮಿನ್ ಎ, ಡಿ, ಕೆ 2 ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿ ಹೆಚ್ಚಳ, ದೃಷ್ಟಿ ಸುಧಾರಣೆ ಜೊತೆಗೆ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ.
ಬಿಸಿ ನೀರಿನೊಂದಿಗೆ ಒಂದು ಸ್ಪೂನ್ ತುಪ್ಪ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೇವಲ 7 ದಿನಗಳಲ್ಲಿ ಬೆಲ್ಲಿ ಫ್ಯಾಟ್ ಕರಗಿ ಹೊಟ್ಟೆ ಚಪ್ಪಟೆಯಾಗುತ್ತದೆ. ಆದರೆ, ಈ ನೀರು ಕುಡಿದ ಬಳಿಕ ಅರ್ಧಗಂಟೆ ಏನನ್ನೂ ತಿನ್ನುವಂತಿಲ್ಲ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.