Fathrerʼs Day: ನಿಮ್ಮ ರಿಯಲ್ ಲೈಫ್ ʻಹೀರೋʼಗೆ ಯಾವ ಗಿಫ್ಟ್ ಕೊಡಬೇಕು ಅಂತಾ ಕನ್‌ಫ್ಯೂಸ್ ಆಗ್ತಾ ಇದೆಯಾ? ಇಲ್ಲಿವೆ ನೋಡಿ ಬೆಸ್ಟ್ ಐಡಿಯಾ
ನಿಮ್ಮ ರಿಯಲ್ ಲೈಫ್ ಹೀರೋಗೆ ಯಾವ ಗಿಫ್ಟ್ ಕೊಡಬೇಕು ಅಂತಾ ಕನ್‌ಫ್ಯೂಸ್ ಆಗ್ತಾ ಇದೆಯಾ? ಇಲ್ಲಿವೆ ನೋಡಿ ಗಿಫ್ಟ್ ಐಡಿಯಾ
ಅಪ್ಪಾ, ಎಲ್ಲರ ಜೀವನದಲ್ಲಿ ಇವರೊಬ್ಬರ ಪಾತ್ರ ತುಂಬಾ ಪ್ರಮುಖ್ಯತೆಯನ್ನು ಹೊಂದಿರುತ್ತದೆ. ಎಲ್ಲಾರಿಗೂ ತಮ್ಮ ತಂದೆ ಎಂದರೆ ಏನೋ ಸ್ಪೆಷಲ್. ಕೇಳಿದ್ದನ್ನೇಲ್ಲಾ ಕೊಡಿಸುವ ಅಪ್ಪನಿಗೆ ಇಂದು ಅಪ್ಪಾಂದಿರ ದಿನಾಚರಣೆಯಂದು ನಿಮ್ಮ ಹೀರೋಗೂ ನೀವು ಒಂದು ಗಿಫ್ಟ್ ನೀಡಲು ಬಯಸುತ್ತಿದ್ದೀರಾ? ಏನು ಗಿಫ್ಟ್ ಕೊಡಿಸ ಬೇಕು ಎಂದು ಕನ್‌ಫ್ಯೂಸ್ ಆಗ್ತಾ ಇದೆಯಾ? ಇಲ್ಲಿವೆ ನೋಡಿ ಕೆಲವು ಗಿಫ್ಟ್ ಐಡಿಯಾಸ್...
ನಿಮ್ಮ ತಂದೆ ಉಪಕರಣಗಳನ್ನು ಇಷ್ಟ ಪಡುವ ವ್ಯಕ್ತಿಯಾಗಿದ್ದರೆ ಮೊಬೈಲ್ ಫೋನ್, ಹೆಡ್‌ಫೋನ್, ಸ್ಮಾರ್ಟ್ ವಾಚ್ ನಂತಹ ಗಿಫ್ಟ್ ನೀಡ ಬಹುದು.
ನೀವು ಕೊಡುವ ಗಿಫ್ಟ್ ಕಾಸ್ಟ್ಲಿ ಅಗಿ ಇದೆಯಾ ಇಲ್ಲವಾ ಅನ್ನೋದಕ್ಕಿಂತ ನಿಮ್ಮ ತಂದೆಗೆ ಅದು ಇಷ್ಟಾ ಆಗುತ್ತಾ ಇಲ್ಲವಾ ಅನ್ನೋದು ಮುಖ್ಯ. ಎಷ್ಟೇ ಹಳೆಯ ಐಡಿಯಾ ಅದರೂ ಫೋಟೋ ಫ್ರೇಮ್ಸ್ ಬಹಳಷ್ಟು ಭಾವನೆಗಳನ್ನು ಅಡಗಿಸಿಕೊಂಡಿರುತ್ತದೆ. ಬಜೆಟ್ ಕಮ್ಮಿಯಾಗಿದ್ದರೂ. ಫೋಟೋ ಫ್ರೇಮ್‌ಗಳು ಬಹಳ ಎಮೋಷನಲ್ ಆಗಿ ಇರುತ್ತವೆ.
ಎಷ್ಟೇ ಹಣ ಕೊಟ್ಟು ಅಥವಾ ಎಷ್ಟೇ ಹಣ ಕೊಟ್ಟು ನೀವು ಗಿಫ್ಟ್ಸ್ ಕರೀದಿಸಿದರೂ ಕೂಡ ನಿಮ್ಮ ಕಯ್ಯಾರೆ ನೀವು ತಯಾರಿಸಿ ಕೊಡುವ ಗಿಫ್ಟ್ಸ್ ಬಹಳ ಸ್ಪೆಷಲ್ ಆಗಿರುತ್ತವೆ. ಆದಷ್ಟೂ ನಿಮ್ಮ ಕೈಯ್ಯಾರೆ ತಯಾರಿಸಿರುವ ಗಿಫ್ಟ್ಸ್ ಕೊಡಿ.
ಫ್ಯಾಮಿಲಿಯೊಂದಿಗೆ ಟೈಮ್ ಸ್ಪೆಂಡ್ ಮಾಡುವುದರಿಂದ ಸಂಬಂಧಗಳು ಹೆಚ್ಚು ಗಟ್ಟಿಯಾಗುತ್ತವೆ. ನಿಮ್ಮವರನ್ನು ನೀವು ಅರ್ಥ ಮಾಡಿಕೊಳ್ಳುವಲ್ಲಿ ಪ್ರಯಾಣ ಹೆಚ್ಚು ಮಹತ್ವ ವಹಿಸುತ್ತವೆ. ಈ ಸ್ಪೆಷಲ್ ದಿನದಂದು ನಿಮ್ಮ ತಂದೆಯನ್ನು ಹೊರಗೆ ಕರೆದುಕೊಂಡು ಹೋಗಿ. ಕೂತು ಅವರೊಂದಿಗೆ ಮಾತನಾಡಿ. ಅವರಿಗೆ ಬೇಕಾದನ್ನು ಕೊಡಸಿ ಇದರಿಂದ ನಮಗಾಗಿ ದುಡಿಯುತ ಜೀವನ ಸವಿಸುವ ಜೀವಕ್ಕೆ ಇದು ಖುಷಿ ಕೊಡುತ್ತದೆ.
ನಿಮ್ಮ ತಂದೆಗೆ ಇಷ್ಟವಾದ ತಿಂಡಿಯನ್ನು ಅವರಿಗೆ ನಿಮ್ಮ ಕೈಯ್ಯಾರೆ ಮಾಡಿ ಕೊಡಿ ಇಲ್ಲವಾದರೆ ತಂದು ಕೊಡಿ. ಆದಷ್ಟೂ ನೀವೇ ಮಾಡಲು ಟ್ರೈ ಮಾಡಿ... ಇದರಿಂದ ಅದು ಚೆನ್ನಾಗಿ ಇದ್ದರೂ ಇಲ್ಲವಾದರೂ ಅದನ್ನು ಮಾಡಿದ ನಿಮ್ಮ ಪ್ರೀತಿಯ ಮುಂದೆ ಎಲ್ಲವೂ ಸೋಲುತ್ತದೆ