Fatherʼs Day: ಲೈಫ್‌ನ ರಿಯಲ್‌ ಹೀರೋಗೆ ʼವಿಶ್ವ ಅಪ್ಪಂದಿರ ದಿನʼದಂದು ಈ ಗಿಫ್ಟ್‌ ನೀಡಿ

Tue, 07 Jun 2022-9:24 am,

ನಿಮ್ಮ ತಂದೆಗೆ ವಾಚ್ ಹಾಕುವುದು ತುಂಬಾ ಇಷ್ಟವಾಗಿದ್ದರೆ, ಅವರಿಗೆ ವಾಚ್‌ನ್ನು ಗಿಫ್ಟ್‌ ಆಗಿ ನೀಡಬಹುದು. ಆದ್ದರಿಂದ, ಈ ತಂದೆಯ ದಿನದಂದು ನೀವು ನಿಮ್ಮ ತಂದೆಗೆ ಹೊಸ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿದಂತಾಗುತ್ತದೆ.

ತಂದೆಯ ದಿನದಂದು ನೀವು ನಿಮ್ಮ ತಂದೆಗೆ ಸ್ಮಾರ್ಟ್‌ಫೋನ್ ಉಡುಗೊರೆಯಾಗಿ ನೀಡಬಹುದು. ನಿಮ್ಮ ತಂದೆಗೆ ಸ್ಮಾರ್ಟ್‌ಫೋನ್‌ಗಳು ಇಷ್ಟವಾಗಿದ್ದರೆ, ಅವರು ಈ ಉಡುಗೊರೆಯನ್ನು ತುಂಬಾ ಇಷ್ಟಪಡುತ್ತಾರೆ.

ಹೆಚ್ಚಿನ ಜನರ ದಿನವು ಚಹಾ ಅಥವಾ ಕಾಫಿಯೊಂದಿಗೆ ಪ್ರಾರಂಭವಾಗುತ್ತದೆ. ಆದ್ದರಿಂದ ನೀವು ಅದ್ಭುತವಾದ ದಿನವನ್ನು ಪ್ರಾರಂಭಿಸಲು ನಿಮ್ಮ ತಂದೆಗೆ ಈ ವಿಶೇಷ ಕಾಫಿ ಮಗ್ ಅನ್ನು ಉಡುಗೊರೆಯಾಗಿ ನೀಡಬಹುದು. ಅದರಲ್ಲಿ ಕಾಫಿ ಕುಡಿಯುವಾಗ ನಿಮ್ಮ ತಂದೆ ನಿಮ್ಮನ್ನು ನೆನೆದು ಸಂತೋಷಪಡುತ್ತಾರೆ.  

ನಿಮ್ಮ ತಂದೆಗೆ ರೆಡಿಮೇಡ್ ಬಟ್ಟೆಗಳು ಇಷ್ಟವಾಗಿದ್ದರೆ, ಇದು ನಿಮಗೆ ಉತ್ತಮ ಅವಕಾಶವಾಗಿದೆ. ನೀವು ಅವರ ಬಟ್ಟೆಗಳ ಗಾತ್ರವನ್ನು ನೋಡಿ ಮತ್ತು ನಂತರ ಅವರಿಗೆ ಉತ್ತಮ ಡ್ರೆಸ್‌ಸೆಟ್ ಅನ್ನು ಖರೀದಿಸಿ. 

ನೀವು ನಿಮ್ಮ ತಂದೆಗೆ ಪಾದರಕ್ಷೆಯ ವಸ್ತುವನ್ನು ಉಡುಗೊರೆಯಾಗಿ ನೀಡಬಹುದು. ಅವರು ಬೆಳಿಗ್ಗೆ ಜಾಗಿಂಗ್ ಮಾಡುವವರಾಗಿದ್ದರೆ, ರನ್ನಿಂಗ್‌ ಶೂಗಳನ್ನು ಸಹ ಉಡುಗೊರೆಯಾಗಿ ನೀಡಬಹುದು. ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಉತ್ತಮ ಆಯ್ಕೆಗಳಿವೆ. ನೀವು ಬಯಸಿದರೆ, ನೀವು ಅಲ್ಲಿಂದಲೂ ಆರ್ಡರ್ ಮಾಡಬಹುದು. ಆದರೆ ನೆನಪಿಡಿ ಜೂನ್ 19 ರಂದು ಗಿಫ್ಟ್‌ನ್ನು ನೀಡಬೇಕು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link