ಈ ಬಳ್ಳಿಯ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿದರೆ ಅರ್ಧ ಗಂಟೆ ಸಾಕು ಬಿಳಿ ಕೂದಲು ಕಪ್ಪಾಗಲು
ಕೂದಲು ವಯಸ್ಸಾದಂತೆ ಬೆಳ್ಳಗಾದರೆ ಸಮಸ್ಯೆ ಇಲ್ಲ.ಆದರೆ ಕಿರಿ ವಯಸ್ಸಿನಲ್ಲಿಯೀ ಬಿಳಿ ಬಣ್ಣಕ್ಕೆ ತಿರುಗಿದರೆ ಅದು ಸಮಸ್ಯೆಯೇ. ಕೂದಲು ಬಿಳಿಯಾಗುವುದಕ್ಕೆ ಅನೇಕ ಕಾರಣಗಳಿವೆ.
ಕೆಲಸದ ಒತ್ತಡ,ರಾಸಾಯನಿಕ ವಸ್ತುಗಳ ಅಡ್ಡಪರಿಣಾಮ, ನಾವು ಸೇವಿಸುವ ಆಹಾರ ಇಂದು ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದಕ್ಕೆ ಕಾರಣ. ಇದರ ಜೊತೆ ಅನುವಂಶಿಕ ಕಾರಣವೂ ಸೇರಿರಬಹುದು.
ಕೂದಲು ಬಿಳಿಯಾದ ಕೂಡಲೇ ಡೈ ಹಚ್ಚಬೇಕಾಗಿಲ್ಲ.ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಲರ್ ಹೆಚ್ಚಬೇಕು ಎನ್ನುವುದು ಕೂಡಾ ಅನಿವಾರ್ಯವಲ್ಲ. ಬದಲಿಗೆ ಈ ಬಳ್ಳಿಯ ಎಲೆಯನ್ನು ಅರೆದು ಕೂದಲಿಗೆ ಹಚ್ಚಿ.
ಬಿಳಿ ಕೂದಲನ್ನು ಸಂಪೂರ್ಣವಾಗಿ ತೊಡೆದುಹಾಕಬೇಕಾದರೆ ಅಮೃತಬಳ್ಳಿ ಉತ್ತಮ ಆಯ್ಕೆ. ಇದನ್ನು ಅರೆದು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಮತ್ತೆ ಕಪ್ಪು ಬಣ್ಣ ಪಡೆಯುತ್ತದೆ.
ಒಂದು ಬಟ್ಟಲು ಅಮೃತಬಳ್ಳಿಯ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಡಿ. ಇದು ನಿಮ್ಮ ಕೂದಲಿಗೆ ಗಾಢ ಕಪ್ಪು ಬಣ್ಣವನ್ನು ನೀಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.