ಒಣ ಕೆಮ್ಮಿನಿಂದ ಶಾಶ್ವತ ಪರಿಹಾರ ನೀಡುವ ಪವರ್‌ಫುಲ್ ಮನೆಮದ್ದು!
ಬದಲಾಗುತ್ತಿರುವ ಹವಾಮಾನದೊಂದಿಗೆ ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ನೆಗಡಿ, ಕೆಮ್ಮಿನಂಥ ಸಮಸ್ಯೆಗಳೂ ಬರಲಾರಂಭಿಸುತ್ತವೆ.
ಚಳಿಗಾಲದಲ್ಲಿ ಕಾಡುವ ಒಣ ಕೆಮ್ಮಿಗೆ ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು. ಒಣ ಕೆಮ್ಮು ಮತ್ತು ಕಫಕ್ಕೆ ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.
ಉಪ್ಪು ಮತ್ತು ಶುಂಠಿ ಚಳಿಗಾಲದ ಒಣ ಕೆಮ್ಮನ್ನು ಹೋಗಲಾಡಿಸುತ್ತವೆ. ಉಪ್ಪು ಮತ್ತು ಶುಂಠಿಯನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಕೆಮ್ಮು, ನೆಗಡಿ ಗುಣವಾಗುತ್ತದೆ.
ಶುಂಠಿಯಲ್ಲಿ ಆ್ಯಂಟಿಮೈಕ್ರೊಬಿಯಲ್ ಗುಣವಿದ್ದು, ಇದು ಬ್ಯಾಕ್ಟೀರಿಯಾವನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಒಣಕೆಮ್ಮಿಗೆ ರಾಮಬಾಣ.
ಶುಂಠಿ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ಅದಕ್ಕೆ ಕಲ್ಲು ಉಪ್ಪನ್ನು ಹಾಕಿ ಬಿಸಿಯಾಗಿರುವಾಗಲೇ ಬಾಯಿಗೆ ಹಾಕಿಕೊಂಡು ಸ್ವಲ್ಪ ಸಮಯ ಹೀರಬೇಕು. ಇದು ಒಣ ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.