ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಶುಂಠಿ
ವೈರಲ್ ಸೋಂಕಿನಿಂದ ರಕ್ಷಣೆ: ಶುಂಠಿಯಲ್ಲಿ ವಿಟಮಿನ್ ಎ, ವಿಟಮಿನ್ ಡಿ, ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಇದರಿಂದಾಗಿ ಅನೇಕ ರೋಗಗಳು ನಿವಾರಣೆಯಾಗುತ್ತವೆ. ಮತ್ತೊಂದೆಡೆ, ಶುಂಠಿಯನ್ನು ಸೇವಿಸುವ ಮೂಲಕ, ಶೀತ ಮತ್ತು ಕೆಮ್ಮುಗಳಂತಹ ವೈರಲ್ ಸೋಂಕುಗಳಿಂದ ಕೂಡಾ ಮುಕ್ತಿ ಪಡೆಯಬಹುದು.
ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುತ್ತದೆ: ಇದಲ್ಲದೆ, ಶುಂಠಿಯು ಜೀರ್ಣಕ್ರಿಯೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಇದು ಪರಿಣಾಮಕಾರಿ ಕೆಲಸ ಮಾಡುತ್ತದೆ ಎನ್ನಲಾಗುತ್ತದೆ.
ವಾಂತಿಯನ್ನು ನಿವಾರಿಸುತ್ತದೆ: ವಾಂತಿಯಾ ಸಮಸ್ಯೆ ಕಾಡುತ್ತಿದ್ದರೆ ಹಸಿ ಶುಂಠಿಯನ್ನು ಸೇವಿಸಬಹುದು. ಇದು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ.
ಮಹಿಳೆಯ ಆರೋಗ್ಯಕ್ಕೆ : ಸಮಯಕ್ಕೆ ಸರಿಯಾಗಿ ಋತುಮತಿಯಾಗದ ಮಹಿಳೆಯರೂ ಶುಂಠಿಯನ್ನು ಸೇವಿಸಬಹುದು. ಇದರಿಂದ ಅವರಿಗೆ ಅನುಕೂಲವಾಗುತ್ತದೆ. ಮುಟ್ಟಿನ ನೋವು ಕೂಡ ನಿವಾರಣೆಯಾಗುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಸ್ವೀಕರಿಸುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)