ಶುಂಠಿ ರಸವನ್ನು ಇದರಲ್ಲಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿದ ಯುರಿಕ್ ಆಸಿಡ್ ಕರಗಿ... ಕಿಡ್ನಿ ಸ್ಟೋನ್ ಸಹ ಪುಡಿಯಾಗಿ ಹೊರಬರುವುದು!
ಯುರಿಕ್ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ಮೂತ್ರಪಿಂಡ ಅದನ್ನು ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಆಗ ಇದು ಹರಳುಗಳ ರೂಪದಲ್ಲಿ ಕೀಲುಗಳ ಸಂಧಿಗಳ ನಡುವೆ ಶೇಖರಣೆಯಾಗುತ್ತದೆ.
ಯುರಿಕ್ ಆಸಿಡ್ ಮಟ್ಟ ಹೆಚ್ಚಾದರೆ ಸಂಧಿವಾತಕ್ಕೆ ಕಾರಣವಾಗುತ್ತದೆ. ಯುರಿಕ್ ಆಸಿಡ್ ನಿಯಂತ್ರಿಸಲು ಶುಂಠಿಯು ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಸಾಮಾನ್ಯವಾಗಿ ಆರಂಭಿಕ ಹಂತಗಳಲ್ಲಿ ಯುರಿಕ್ ಆಸಿಡ್ ಹೆಚ್ಚಳದ ಬಗ್ಗೆ ಜನರಿಗೆ ತಿಳಿದಿರುವುದಿಲ್ಲ. ಯುರಿಕ್ ಆಸಿಡ್ ಹೆಚ್ಚಾದಾಗ ಕೀಲುಗಳಲ್ಲಿ ನೋವು, ಎದ್ದು ಕುಳಿತುಕೊಳ್ಳಲು ತೊಂದರೆ, ಪಾದಗಳು ಮತ್ತು ಬೆರಳುಗಳಲ್ಲಿ ಊತ ಮುಂತಾದ ಕೆಲವು ರೋಗಲಕ್ಷಣಗಳು ಕಂಡು ಬರುತ್ತವೆ.
ಶುಂಠಿ ಹೆಚ್ಚಿದ ಯುರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಹೆಚ್ಚಿದ ಯುರಿಕ್ ಆಸಿಡ್ ಮತ್ತು ಅದರಿಂದ ಉಂಟಾಗುವ ಊತ, ನೋವನ್ನು ಕಡಿಮೆ ಮಾಡುತ್ತದೆ.
ಶುಂಠಿಯನ್ನು ತುರಿದು ಒಂದು ಲೋಟ ನೀರಿಗೆ ಸೇರಿಸಿ. 5 ನಿಮಿಷಗಳ ಕಾಲ ಕುದಿಸಿ ಮತ್ತು ಸ್ವಲ್ಪ ತಣ್ಣಗಾಗಿಸಿ. ಬಳಿಕ ಅದನ್ನು ಸೇವಿಸಿ. ಇದು ನಿಮಗೆ ಕೀಲು ನೋವಿನಿಂದ ಸಾಕಷ್ಟು ಪರಿಹಾರವನ್ನು ನೀಡುತ್ತದೆ.
ಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಪೇಸ್ಟ್ ಅನ್ನು ನೋವಿನ ಸ್ಥಳಕ್ಕೂ ಅನ್ವಯಿಸಬಹುದು.
ಯುರಿಕ್ ಆಸಿಡ್ ಆಸಿಡ್ ಅತಿಯಾದಾಗ ಕಿಡ್ನಿ ಸ್ಟೋನ್ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಮಜ್ಜಿಗೆಗೆ ಶುಂಠಿ ರಸ ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಮಟ್ಟ ತಗ್ಗುವುದರ ಜೊತೆಗೆ ಕಿಡ್ನಿ ಸ್ಟೋನ್ ಕರಗಲು ಸಹಾಯಕವಾಗಿದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.