Ginger Water Benefits: Diabetes ನಿಂದ Digestionವರೆಗೆ ಹಲವು ಲಾಭಗಳನ್ನು ನೀಡುತ್ತದೆ ಹಸಿ ಶುಂಠಿ ನೀರು
>>Improves Digestion - ಸಾಕಷ್ಟು ಜನರ ಪಚನ ಕ್ರಿಯೆ (Digestion) ಸರಿಯಾಗಿರುವುದಿಲ್ಲ. ಅವರು ಏನೇ ಸೇವಿಸಿದರೂ ಕೂಡ ಅವರ ಹೊಟ್ಟೆ ಹಾಳಾಗುತ್ತದೆ ಅಥವಾ ಅವರಿಗೆ ಕಾನ್ಸ್ಟಿಪೇಶನ್ ಸಮಸ್ಯೆ ಎದುರಾಗುತ್ತದೆ. ಇಂತಹ ಜನರ ಪಾಲಿಗೆ ಹಸಿ ಶುಂಠಿ ನೀರು ಸೇವನೆ ತುಂಬಾ ಲಾಭಕಾರಿಯಾಗಿದೆ.
>>Reduces Morning Sickness - ಹಸಿ ಶುಂಠಿ ನೀರಿನಲ್ಲಿ ಸ್ವಲ್ಪ ನಿಂಬೆ ರಸ ಹಾಗೂ ಜೇನುತುಪ್ಪ ಬೆರೆಸಿ ಸೇವಿಸಿದರೆ, ಗರ್ಭಾವಸ್ಥೆಯ ವೇಳೆ ಎದುರಾಗುವ ಮಾರ್ನಿಂಗ್ ಸಿಕ್ ನೆಸ್ ಅಥವಾ ವಾಂತಿ ಸಮಸ್ಯೆ ದೂರಾಗುತ್ತದೆ.
>>Good For Diabetes - ಹಸಿ ಶುಂಠಿ ನೀರು ಜಿಂಕ್ ಆಗರವಾಗಿದೆ. ಇದು ಶರೀರದಲ್ಲಿ ಇನ್ಸುಲಿನ್ ಸ್ರವಿಕೆಯನ್ನು ಉತ್ತೇಜಿಸುತ್ತದೆ ಮತ್ತು ದೇಹದಲ್ಲಿ ಬ್ಲಡ್ ಶುಗರ್ ಲೆವಲ್ ಅನ್ನು ಸರಿಯಾಗಿಡಲು ಸಹಕರಿಸುತ್ತದೆ. ಹೀಗಾಗಿ ಡಯಾಬಿಟಿಸ್ ರೋಗಿಗಳಿಗೆ ಶುಂಠಿ ನೀರು ತುಂಬಾ ಲಾಭಕಾರಿಯಾಗಿದೆ.
>>Reduces Heart Stroke Risk - ಹೃದ್ರೋಗದ ಉಪಚಾರದಲ್ಲಿಯೂ ಕೂಡ ಶುಂಠಿ ಮಿಶ್ರಿತ ನೀರು ಲಾಭಕಾರಿಯಾಗಿದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಮತ್ತು ಬ್ಲಡ್ ಪ್ರೆಶರ್ ನಿಯಂತ್ರಣಕ್ಕೆ ಇದು ತುಂಬಾ ಪರಿಣಾಮಕಾರಿಯಾಗಿದೆ. ಈ ಎಲ್ಲ ಸಂಗತಿಗಳು ಹಾರ್ಟ್ ಅಟ್ಯಾಕ್ ಹಾಗೂ ಸ್ಟ್ರೋಕ್ ನ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ.
>>Helps During Muscle Pain - ಹಲವು ಜನರು ಮಸಲ್ ಪೈನ್ (Muscle Pain) ನಿಂದ ಬಳಲುತ್ತಿರುತ್ತಾರೆ. ಇದಕ್ಕಾಗಿ ಅವರು ನೋವು ನಿವಾರಕ ಮಾತ್ರೆಗಳನ್ನೂ ಸೇವಿಸುತ್ತಾರೆ. ಆದರೆ, ಇಂತಹ ಮಾತ್ರೆಗಳು ಶರೀರಕ್ಕೆ ಹಾನಿಯನ್ನು ತಲುಪಿಸುತ್ತವೆ. ಹೀಗಾಗಿ ಹಸಿ ಶುಂಠಿ ನೀರನ್ನು ಸೇವಿಸಲು ಆರಂಭಿಸಿ. ಖಂಡಗಳ ನೋವು ಸಮಸ್ಯೆ ಇದರಿಂದ ನಿವಾರಣೆಯಾಗುತ್ತದೆ.