ಒಂದೇ ತಿಂಗಳಲ್ಲಿ ಬೆಲ್ಲಿ ಫ್ಯಾಟ್ ಕರಗಿಸಲು ನೀರಿನಲ್ಲಿ ಇದನ್ನು ಬೆರೆಸಿ ಕುಡಿಯಿರಿ!
![ಶುಂಠಿ ಶುಂಠಿ](https://kannada.cdn.zeenews.com/kannada/sites/default/files/2024/06/19/414730-smartphone-battery-swelling-2.jpg?im=FitAndFill=(500,286))
ಸಾಮಾನ್ಯವಾಗಿ ಶೀತ-ನೆಗಡಿಗೆ ದಿವ್ಯೌಷಧಿ ಎಂದು ಪರಿಗಣಿಸಲಾಗಿರುವ ಶುಂಠಿ ತೂಕ ನಷ್ಟಕ್ಕೂ ಕೂಡ ಅತ್ಯುತ್ತಮ ಕೊಡುಗೆ ನೀಡಬಲ್ಲದು.
![ತೂಕ ಇಳಿಕೆಗೆ ಶುಂಠಿ ತೂಕ ಇಳಿಕೆಗೆ ಶುಂಠಿ](https://kannada.cdn.zeenews.com/kannada/sites/default/files/2024/06/19/414729-smartphone-battery-swelling-3.jpg?im=FitAndFill=(500,286))
ನೀವು ತೂಕ ಇಳಿಕೆಗಾಗಿ ಶುಂಠಿ ನೀರನ್ನು ನಿತ್ಯ ಸೇವಿಸುವುದು ಹೆಚ್ಚು ಪ್ರಯೋಜನಕಾರಿ ಆಗಿದೆ.
![ಶುಂಠಿ ನೀರನ್ನು ತಯಾರಿಸುವ ವಿಧಾನ ಶುಂಠಿ ನೀರನ್ನು ತಯಾರಿಸುವ ವಿಧಾನ](https://kannada.cdn.zeenews.com/kannada/sites/default/files/2024/06/19/414728-smartphone-battery-swelling-4.jpg?im=FitAndFill=(500,286))
ತೂಕ ಇಳಿಕೆಗಾಗಿ ಶುಂಠಿ ನೀರನ್ನು ತಯಾರಿಸಲು ಮೊದಲಿಗೆ ಒಂದು ಗ್ಲಾಸ್ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ, ಇದಕ್ಕೆ ಒಂದು ತುಂಡು ಶುಂಠಿಯನ್ನು ತುರಿದು ಹಾಕಿ. ನೀರು ಅರ್ಧ ಕಡಿಮೆಯಾಗುವವರೆಗೂ ಚೆನ್ನಾಗಿ ಕುದಿಸಿ. ಇದನ್ನು ಫಿಲ್ಟರ್ ಮಾಡಿ ಸೇವಿಸಿ.
ಒಂದೊಮ್ಮೆ ನಿಮಗೆ ಬಿಸಿ ನೀರು ಕುಡಿಯಲು ಇಷ್ಟವಿಲ್ಲದಿದ್ದರೆ ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಇಂಚಿನ ಉದ್ದದ ಶುಂಠಿಯನ್ನು ನೆನೆಸಿಟ್ಟು, ಬೆಳಿಗ್ಗೆ ಎದ್ದ ಕೂಡಲೇ ಈ ನೀರನ್ನು ಶೋಧಿಸಿ ಕುಡಿಯಿರಿ.
ಶುಂಠಿಯಲ್ಲಿರುವ ಔಷಧೀಯ ಗುಣಗಳು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಿರಂತರವಾಗಿ ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರನ್ನು ಕುಡಿಯುವುದರಿಂದ ಹೊಟ್ಟೆ ಸುತ್ತಲೂ ಶೇಖರಣೆಯಾಗಿರುವ ಫ್ಯಾಟ್ ಕರಗಿ, ಹೊಟ್ಟೆ ಚಪ್ಪಟೆಯಾಗುವುದನ್ನು ನೀವು ಗಮನಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.