ಶುಂಠಿ ಜೊತೆಗೆ ಇದನ್ನು ಬೆರೆಸಿ ತಿಂದರೆ ಕೀಲುಗಳಲ್ಲಿ ಸಿಲುಕಿದ ಯುರಿಕ್ ಆಸಿಡ್ ಕರಗಿ ಹೋಗಿ, ಕಿಡ್ನಿ ಸ್ಟೋನ್ ಕೂಡ ಪುಡಿಯಾಗಿ ಹೊರಬರುವುದು!
ಮೂತ್ರಪಿಂಡದ ಫಿಲ್ಟರಿಂಗ್ ಸಾಮರ್ಥ್ಯ ಕಡಿಮೆಯಾದಾಗ ಯುರಿಕ್ ಆಸಿಡ್ ಸಮಸ್ಯೆ ಉಂಟಾಗುತ್ತದೆ. ಯುರಿಕ್ ಆಸಿಡ್ ದೇಹದ ಜೀವಕೋಶಗಳಿಂದ ಮತ್ತು ನಾವು ಸೇವಿಸುವ ಆಹಾರದಿಂದ ಉತ್ಪತ್ತಿಯಾಗುತ್ತದೆ.
ಈ ಯುರಿಕ್ ಆಸಿಡ್ ಹೆಚ್ಚಿನ ಭಾಗವನ್ನು ಮೂತ್ರಪಿಂಡ ಫಿಲ್ಟರ್ ಮೂಲಕ ದೇಹದಿಂದ ಹೊರಹಾಕುತ್ತದೆ. ಯುರಿಕ್ ಆಸಿಡ್ ಹೊರಹಾಕದಿದ್ದರೆ ಅದು ರಕ್ತದಲ್ಲಿ ಸಂಗ್ರಹವಾಗುತ್ತದೆ.
ದೇಹದಲ್ಲಿನ ಹೆಚ್ಚುವರಿ ಯುರಿಕ್ ಆಸಿಡ್ ಕಡಿಮೆ ಮಾಡಲು ಶುಂಠಿ ಸಹಾಯ ಮಾಡುತ್ತದೆ. ಈ ಸಮಸ್ಯೆಯನ್ನು ನಿಯಂತ್ರಿಸುವ ಅನೇಕ ಗುಣಗಳನ್ನು ಶುಂಠಿ ಹೊಂದಿದೆ. ಶುಂಠಿಯನ್ನು ಅನೇಕ ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.
ಶುಂಠಿಯಲ್ಲಿರುವ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಯುರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕೀಲು ನೋಚು ಸಹ ಕಡಿಮೆಯಾಗುವುದು.
ಶುಂಠಿಯ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಯುರಿಕ್ ಆಸಿಡ್ ನಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯನ್ನು ಮಜ್ಜಿಗೆಗೆ ಬೆರೆಸಿ ಕುಡಿಯುವುದರಿಂದ ಯುರಿಕ್ ಆಸಿಡ್ ಮಟ್ಟ ಕ್ರಮೇಣ ಕಡಿಮೆಯಾಗುವುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.