ಹುಡುಗಿಯರು ಒಬ್ಬರೇ ಇರುವಾಗ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವುದು ಇದೇ ವಿಷಯವನ್ನಂತೆ !
ಕೆಲವು ಹುಡುಗಿಯರು ಅಥವಾ ಮಹಿಳೆಯರು ಯಾವಾಗ ನೋಡಿದರೂ ಆನ್‌ಲೈನ್‌ನಲ್ಲಿಯೇ ಇರುತ್ತಾರೆ. ಅಂದರೆ ಅವರು ಗೂಗಲ್‌ನಲ್ಲಿ ಏನನ್ನಾದರೂ ಸರ್ಚ್ ಮಾಡುತ್ತಲೇ ಇರುತ್ತಾರೆ. ಮಹಿಳೆಯರು ಒಬ್ಬರೇ ಇರುವಾಗ ಯಾವ ಕಂಟೆಂಟ್ ಅನ್ನು ಹೆಚ್ಚು ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಹುಡುಗಿಯರು ತಮ್ಮ ವೃತ್ತಿಜೀವನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ.ಹಾಗಾಗಿ ಇವರು ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತಾರೆ.ತಮ್ಮ ವೃತ್ತಿಜೀವನವನ್ನು ಯಾವ ದಿಕ್ಕಿನಲ್ಲಿ ಮುಂದುವರಿಸಬೇಕು ಎನ್ನುವುದರ ಬಗ್ಗೆ ಅರಿತುಕೊಳ್ಳುವ ಪ್ರಯತ್ನದಲ್ಲಿ ಇರುತ್ತಾರೆ.
ಇನ್ನು ಹುಡುಗಿಯರು ಹೆಚ್ಚಾಗಿ ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಗೆ ಹೋಗುತ್ತಾರೆ.ಇಲ್ಲಿ ಬಟ್ಟೆ ವಿನ್ಯಾಸಗಳು,ಹೊಸ ಸಂಗ್ರಹಗಳು,ಆಫರ್ ಗಳ ಬಗ್ಗೆ ಹೆಚ್ಚು ಸರ್ಚ್ ಮಾಡುತ್ತಾರೆ.
ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಹೆಣ್ಣು ಮಕ್ಕಳು ಫ್ಯಾಷನ್,ಟ್ರೆಂಡ್‌ಗಳು, ಸೌಂದರ್ಯ ಚಿಕಿತ್ಸೆಗಳು ಮತ್ತು ಮನೆಮದ್ದುಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್ ಮಾಡುತ್ತಲೇ ಇರುತ್ತಾರೆ.
ಮೆಹಂದಿಯ ಹುಚ್ಚು ಕೂಡಾ ಹೆಣ್ಣು ಮಕ್ಕಳಲ್ಲಿ ಸ್ವಲ್ಪ ಹೆಚ್ಚೇ ಇರುತ್ತದೆ. ಹುಡುಗಿಯರು ಸಾಮಾನ್ಯವಾಗಿ ಇತ್ತೀಚಿನ ಮೆಹಂದಿ ವಿನ್ಯಾಸಗಳನ್ನು ಗೂಗಲ್‌ನಲ್ಲಿ ಹುಡುಕುತ್ತಾರೆ.
ಹುಡುಗಿಯರು ಹೆಚ್ಚು ಸರ್ಚ್ ಮಾಡುವ ವಿಷಯಗಳಲ್ಲಿ ಸಂಗೀತವೂ ಸೇರಿದೆ.ಹುಡುಗಿಯರು ಅಂತರ್ಜಾಲದಲ್ಲಿ ರೊಮ್ಯಾಂಟಿಕ್ ಹಾಡುಗಳನ್ನು ಹುಡುಕಿ ಅದನ್ನು ಕೇಳುತ್ತಾರೆ.