ಈ ರಾಶಿಯ ಹುಡುಗಿಯರು ಸಾಕ್ಷಾತ್ ಲಕ್ಷ್ಮೀಯ ಸ್ವರೂಪ.. ಹುಟ್ಟಿದ ಕ್ಷಣದಿಂದಲೇ ಅಪ್ಪನ ಅದೃಷ್ಟ ಬೆಳಗುವರು, ಗಂಡನ ಪಾಲಿಗಂತೂ ಭಾಗ್ಯದ ದೇವತೆ !
Lucky Daughter : ಈ ರಾಶಿಯಲ್ಲಿ ಜನಿಸಿದ ಹುಡುಗಿಯರು ತಾವು ಹುಟ್ಟಿದ ಮನೆಗೆ ಅದೃಷ್ಟವನ್ನು ತರುತ್ತಾರೆ. ಇವರು ಮದುವೆ ಬಳಿಕ ತಮ್ಮ ಗಂಡನ ಪಾಲಿನ ಅದೃಷ್ಟ ದೇವತೆಗಳಾಗಿರುತ್ತಾರೆ. ಆ ರಾಶಿಗಳು ಯಾವವು ಎಂದು ತಿಳಿಯೋಣ...
ಕನ್ಯಾ ರಾಶಿ - ಚಿಕ್ಕ ವಯಸ್ಸಿನಲ್ಲೇ ಸ್ವಂತ ಸಾಮರ್ಥ್ಯದಿಂದ ಹೆತ್ರವರ ಹೆಸರನ್ನು ಬೆಳಗುವರು. ತಂದೆಯ ಕಷ್ಟಗಳೆಲ್ಲ ಮಾಯವಾಗಿ ಮನೆಯಲ್ಲಿ ಸಂಪತ್ತು ವೃದ್ಧಿಸುವುದು. ಬಾಲ್ಯದಿಂದಲೂ ಜವಾಬ್ದಾರಿಯುತರಾಗಿರುತ್ತಾರೆ.
ವೃಷಭ ರಾಶಿ - ಇವರು ಹುಟ್ಟತ್ತಲೇ ಮನೆಗೆ ಸೌಭಾಗ್ಯ ಬಂದಂತೆ. ತಂದೆಯ ಅದೃಷ್ಟ ಬೆಳಗುತ್ತಾರೆ. ಶ್ರಮಜೀವಿಗಳಾಗಿರುವ ಈ ಹೆಣ್ಣುಮಕ್ಕಳು ತುಂಬಾ ಪ್ರಾಮಾಣಿಕರು. ಸಾಕಷ್ಟು ಹೆಸರು ಮತ್ತು ಹಣವನ್ನು ಗಳಿಸುತ್ತಾರೆ.
ತುಲಾ ರಾಶಿ - ಈ ರಾಶಿಯ ಹೆಣ್ಣು ಮಕ್ಕಳ ಬುದ್ಧಿ ಚುರುಕಾಗಿರುತ್ತದೆ. ತಂದೆಯ ಜೀವನದಲ್ಲಿ ಅಭಿವೃದ್ಧಿ ಕಾಣುತ್ತಾರೆ. ತುಂಬಾ ಸೂಕ್ಷ್ಮ ಹೃದಯಿಗಳು. ತಂದೆಗೆ ಅದೃಷ್ಟ ಮತ್ತು ಸಮೃದ್ಧಿ ತರುತ್ತಾರೆ.
ಮಕರ ರಾಶಿ - ಈ ರಾಶಿಯ ಹುಡುಗಿಯರಿಗೆ ತಂದೆ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ತಾವು ಹುಟ್ಟಿದ ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿ ತರುತ್ತಾರೆ.
ಕಟಕ ರಾಶಿ - ಈ ರಾಶಿಯಲ್ಲಿ ಮಗಳು ಜನಿಸುತ್ತಿದ್ದಂತೆ ತಂದೆಯ ಕಷ್ಟಗಳೆಲ್ಲ ದೂರವಾಗುತ್ತವೆ. ತುಂಬಾ ಅದೃಷ್ಟಶಾಲಿ. ತಂದೆಗೆ ಆದಾಯ ಹೆಚ್ಚಾಗುತ್ತದೆ.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.