ಹೋದ ಮನೆಗೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ, ಗಂಡನಿಗೆ ಅದೃಷ್ಟ ದೇವತೆಯಂತೆ ಈ ರಾಶಿಯ ಹೆಣ್ಣು ಮಕ್ಕಳು!
ವೈದಿಕ ಜ್ಯೋತಿಷ್ಯದ ಪ್ರಕಾರ, ಮದುವೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಘಟ್ಟವಾಗಿದೆ. ಪ್ರತಿ ಪುರುಷನು ಸಹ ತನ್ನ ಜೀವನದಲ್ಲಿ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿರುವ ಸಂಗಾತಿಯನ್ನು ಪಡೆಯಲು ಬಯಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ಜನ್ಮ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಅತ್ತೆ ಮನೆಗೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ, ಗಂಡನಿಗೆ ಅದೃಷ್ಟ ದೇವತೆಯೇ ಆಗಿರುತ್ತಾರೆ.
ವೃಷಭ ರಾಶಿ: ಈ ರಾಶಿಯ ಹೆಣ್ಣು ಮಕ್ಕಳು ಹುಟ್ಟಿನಿಂದಲೇ ಲಕ್ಷ್ಮಿಯ ಪುತ್ರಿಯರಾಗಿರುತ್ತಾರೆ.ಇವರು ಕಾಲಿಡುವ ಜಾಗದಲ್ಲಿ ಎಂದೂ ಸಹ ಹಣಕಾಸಿನ ಸಮಸ್ಯೆ ಆಗುವುದಿಲ್ಲ. ಗಂಡನ ಪಾಲಿಗಂತೂ ಇವರು ಐಶ್ವರ್ಯ ಲಕ್ಷ್ಮಿಯರೇ ಆಗಿರುತ್ತಾರೆ.
ಕರ್ಕಾಟಕ ರಾಶಿ: ಕರುಣೆ, ಸಹಾನುಭೂತಿಯ ಗುಣವುಳ್ಳ ಈ ರಾಶಿಯ ಹೆಣ್ಣು ಮಕ್ಕಳಲ್ಲಿ ಅಂತಃಪ್ರಜ್ಞೆ ಇರುತ್ತದೆ. ಈ ರಾಶಿಯ ಹೆಣ್ಣು ಮಗುವನ್ನು ಕೈ ಹಿಡಿಯುವ ಗಂಡಸರು ಜೀವನದ ಪ್ರಗತಿ, ಯಶಸ್ಸು ಶತಸಿದ್ಧ.
ಸಿಂಹ ರಾಶಿ: ಬಲವಾದ ಮನಸ್ಥಿತಿಯುಳ್ಳ ಈ ರಾಶಿಯ ಹೆಣ್ಣು ಮಕ್ಕಳು ಗಂಡನ ತಪ್ಪನ್ನು ಹೊಟ್ಟೆಗೆ ಹಾಕಿಕೊಂಡು ಅವರನ್ನು ತಿದ್ದಿ ಸರಿ ದಾರಿಯಲ್ಲಿ ತರಬಲ್ಲ ಸಹನಾಮಣಿ. ಇವರ ಕೈ ಹಿಡಿಯುವ ಪುರುಷ ಪ್ರೀತಿ, ಬೆಂಬಲದಿಂದಲೇ ಜೀವನದಲ್ಲಿ ಅಗಾಧ ಕೀರ್ತಿ, ಯಶಸ್ಸನ್ನು ಗಳಿಸುತ್ತಾನೆ.
ವೃಶ್ಚಿಕ ರಾಶಿ: ಸಹಜತೆಯ ತೀಕ್ಷ್ಣ ಪ್ರಜ್ಞೆ ಹೊಂದಿರುವ ಈ ರಾಶಿಯ ಹೆಣ್ಣು ಮಕ್ಕಳು ಯಾವುದೇ ಸಮಸ್ಯೆಯನ್ನು ಧೃತಿಗೆಡದೆ ಎದುರಿಸುವ ಕೆಚ್ಚೆದೆಯನ್ನು ಹೊಂದಿರುತ್ತಾರೆ. ಇವರನ್ನು ವರಿಸುವ ಪುರುಷರಿಗೆ ಇವರು ಅದೃಷ್ಟ ಲಕ್ಷ್ಮಿ ಎಂತಲೇ ಹೇಳಬಹುದು.
ಕುಂಭ ರಾಶಿ: ಜವಾಬ್ದಾರಿ ಹೆಗಲ ಮೇಲಿದ್ದರೂ ಸದಾ ಹಸನ್ಮುಖಿಯಾಗಿರುವ ಈ ರಾಶಿಯ ಹೆಣ್ಣನ್ನು ಮದುವೆಯಾಗುವ ಪುರುಷ ಜೀವನದಲ್ಲಿ ಎಂದಿಗೂ ಕಷ್ಟ ಎಂಬುದನ್ನೇ ಕಾಣುವುದಿಲ್ಲ. ಈ ಜನ್ಮರಾಶಿಯವರು ಪತಿಗೆ ಸಾಕ್ಷಾತ್ ಲಕ್ಷ್ಮೀಯೇ ಆಗಿರುತ್ತಾರೆ.
ಮೀನ ರಾಶಿ: ಬಹಳ ಬುದ್ದಿವಂತರಾದ ಈ ರಾಶಿಯ ಹೆಣ್ಣು ಮಕ್ಕಳು ಹುಟ್ಟಿದ ಮನೆಯನ್ನು ಮಾತ್ರವಲ್ಲ ಮೆಟ್ಟಿನ ಮನೆಯಲ್ಲೂ ಸಂಪತ್ತನ್ನು ಹೊತ್ತು ತರುವ ಅದೃಷ್ಟ ಲಕ್ಷ್ಮಿಯರು. ಈ ರಾಶಿಯವರನ್ನು ಕೈ ಹಿಡಿಯುವ ಪುರುಷನೇ ಪುಣ್ಯವಂತ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.