ಈ ಗುರುತುಗಳಿರುವ ಹುಡುಗಿಯರು ಅದೃಷ್ಟದ ಗಣಿಯಂತೆ..!
ವಿಶಾಲ ಹಣೆಯಿರುವ ಹುಡುಗಿಯರನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಅದೃಷ್ಟಶಾಲಿಗಳು ಎಂದು ಪರಿಗಣಿಸಲಾಗುತ್ತದೆ. ಅಂತಹ ಹುಡುಗಿಯರು ಅವರು ಹೋಗುವ ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತಾರೆಯಂತೆ.
ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಗೆ ಅನೇಕ ಅರ್ಥಗಳಿರುತ್ತವೆ, ಪ್ರಾಮುಖ್ಯತೆಯಿರುತ್ತದೆ. ದೇಹದ ಎಡಭಾಗದಲ್ಲಿ ಮಚ್ಚೆಯಿದ್ದರೆ, ಮಹಿಳೆಯರನ್ನು ಕುಟುಂಬಕ್ಕೆ ಅದೃಷ್ಟ ತರುತ್ತಾರೆಯಂತೆ.
ಪಾದದ ಅಡಿಭಾಗದಲ್ಲಿ ಶಂಖ, ಕಮಲ ಅಥವಾ ಚಕ್ರದ ಚಿಹ್ನೆ ಇರುವುದು ಬಹಳ ಶುಭ ಎಂದು ನಂಬಲಾಗುತ್ತದೆ. ಈ ಚಿಹ್ನೆಗಳು ಯಾವ ಮಹಿಳೆಯರ ಪಾದದ ಅಡಿಯಲ್ಲಿ, ಈ ಗುರುತುಗಳಿದ್ದರೆ, ಅವರಿಗೆ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶವಿರುತ್ತದೆಯಂತೆ. ಇವರು ಇಡೀ ಕುಟುಂಬಕ್ಕೆ ಅದೃಷ್ಟ ತರುತ್ತಾರೆ ಎನ್ನುತ್ತದೆ ಶಾಸ್ತ್ರ.. ಇನ್ನು ಯಾರ ಹೆಬ್ಬೆರಳು ಅಗಲ, ದುಂಡಗೆ ಇರುತ್ತದೆಯೋ ಅವರು ಮತ್ತು ಅವರ ಕುಟುಂಬವು ಜೀವನದಲ್ಲಿ ಎಲ್ಲಾ ಸಂತೋಷವನ್ನು ಪಡೆಯುತ್ತದೆಯಂತೆ.
ಕೈಯಲ್ಲಿ ಉದ್ದನೆಯ ಬೆರಳುಗಳನ್ನು ಹೊಂದಿರುವ ಹುಡುಗಿಯರು ತಮ್ಮ ಗಂಡಂದಿರಿಗೆ ತುಂಬಾ ಲಕ್ಕಿಯಂತೆ. ಪತ್ನಿ ಉದ್ದನೆಯ ಕೈಬೆರಳುಗಳನ್ನು ಹೊಂದಿದ್ದರೆ, ಪತಿ ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾನೆ.
ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ಹುಡುಗಿಯರು, ಸಂತೋಷ ಮತ್ತು ಸಮೃದ್ಧಿಯ ದೃಷ್ಟಿಯಿಂದಲೂ ಅದೃಷ್ಟವಂತರಂತೆ.