Superfoods For Children: ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು 5 ಸೂಪರ್‌ಫುಡ್‌ಗಳಿವು

Mon, 03 Jul 2023-1:13 pm,

ಮಕ್ಕಳ ಆರೋಗ್ಯ ಪ್ರತಿಯೊಬ್ಬರಿಗೂ ಬಹಳ ಕಾಳಜಿಯ ವಿಷಯವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅವರ ಆಹಾರದ ಬಗ್ಗೆ ವಿಶೇಷ ಗಮನಹರಿಸುವುದು ತುಂಬಾ ಅಗತ್ಯ. ಮಕ್ಕರ ಆಹಾರದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್‌ಗಳಂತಹ ಪೋಷಕಾಂಶಗಳ ಅಗತ್ಯವಿದೆ. ಮಕ್ಕಳ ಸರ್ವತೋಮುಕ ಬೆಳವಣಿಗೆಗಾಗಿ ನಿತ್ಯ ಅವರ ಆಹಾರದಲ್ಲಿ ಕೆಲವು ಸೂಪರ್‌ಫುಡ್‌ಗಳನ್ನು ಸೇರಿಸಬಹುದು. ಅಂತಹ ಸೂಪರ್‌ಫುಡ್‌ಗಳು ಯಾವುವು ಎಂದು ತಿಳಿಯೋಣ... 

ಎಲ್ಲರೂ ಇಷ್ಟಪಡುವಂತಹ ಎಲ್ಲಾ ಸಮಯದಲ್ಲೂ ಬಹಳ ಸುಲಭವಾಗಿ ಸಿಗುವ ಹಣ್ಣು ಬಾಳೆಹಣ್ಣು. ಬಾಳೆ ಹಣ್ಣಿನಲ್ಲಿ ವಿಟಮಿನ್ ಬಿ 6, ವಿಟಮಿನ್ ಸಿ, ವಿಟಮಿನ್ ಎ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಬಯೋಟಿನ್ ಮತ್ತು ಫೈಬರ್ ಸಮೃದ್ಧವಾಗಿದೆ. ಮಕ್ಕಳ ಆಹಾರದಲ್ಲಿ ನಿತ್ಯ ಬಾಳೆಹಣ್ಣನ್ನು ಸೇರಿಸುವುದರಿಂದ ಮಕ್ಕಳಿಗೆ ಈ ಪೋಷಕಾಂಶಗಳೆಲ್ಲವೂ ದೊರೆಯಲಿದ್ದು, ಅವರು ಬಲಿಷ್ಠರಾಗುತ್ತಾರೆ. 

ಮಕ್ಕಳ ಆಹಾರದಲ್ಲಿ ಡ್ರೈ ಫ್ರೂಟ್ಸ್ ಸೇರಿಸುವುದರಿಂದ ಅವರ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ವಾಸ್ತವವಾಗಿ, ಡ್ರೈ ಫ್ರೂಟ್ಸ್ ಪೌಷ್ಟಿಕಾಂಶಗಳಿಂದ ಸಮೃದ್ದವಾಗಿದೆ. ಡ್ರೈ ಫ್ರೂಟ್ಸ್ ನಲ್ಲಿ ಅತ್ಯುತ್ತಮ ಜೀವಸತ್ವಗಳು, ಖನಿಜಗಳು ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದರೊಂದಿಗೆ ಪ್ರೋಟೀನ್, ಪೊಟ್ಯಾಸಿಯಮ್ ಕೂಡ ಕಂಡು ಬರುತ್ತದೆ. ಹಾಗಾಗಿ, ಮಕ್ಕಳ ದೈನಂದಿನ ಆಹಾರದಲ್ಲಿ ಡ್ರೈ ಫ್ರೂಟ್ಸ್ ಸೇರಿಸುವುದು ತುಂಬಾ ಅಗತ್ಯ. ಆದರೆ, ಇದನ್ನು ಸೀಮಿತ ಪ್ರಮಾಣದಲ್ಲಿ ನೀಡಿದರಷ್ಟೇ ಇದರ ಪ್ರಯೋಜನ ಪಡೆಯಬಹುದು. 

ಆರೋಗ್ಯ ತಜ್ಞರ ಪ್ರಕಾರ, ಬೆಳಗಿನ ಉಪಹಾರದಲ್ಲಿ ಮೊಟ್ಟೆಯನ್ನು ಸೇವಿಸುವುದರಿಂದ ಹೆಚ್ಚಿನ ಪ್ರಯೋಜನಗಳು ಲಭ್ಯವಾಗಲಿವೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್, ವಿಟಮಿನ್-ಬಿ, ವಿಟಮಿನ್-ಡಿ, ಒಮೆಗಾ-3 ಕೊಬ್ಬಿನಾಮ್ಲ ಮತ್ತು ಫೋಲಿಕ್ ಆಮ್ಲ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳು ಇದರಲ್ಲಿ ಕಂಡುಬರುವುದರಿಂದ ಮೊಟ್ಟೆಯನ್ನು ಮಕ್ಕಳಿಗೆ ಅತ್ಯಗತ್ಯ ಸೂಪರ್‌ಫುಡ್‌ಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. 

ಹಾಲಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಹಾಗಾಗಿಯೇ, ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ಹಾಲಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಹಾಗಾಗಿ, ನಿತ್ಯ ಮಕ್ಕಳ ಆಹಾರದಲ್ಲಿ ಹಾಲನ್ನು ಸೇರಿಸುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

ಸಾಮಾನ್ಯವಾಗಿ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಇರುವವರು ಹೆಚ್ಚಾಗಿ ಓಟ್ಸ್ ಅನ್ನು ಬಳಸುತ್ತಾರೆ. ಆದರೆ, ಕರಗುವ ಫೈಬರ್ ಮತ್ತು ಬೀಟಾ-ಗ್ಲುಕನ್ ಓಟ್ಸ್ ನಲ್ಲಿ ಕಂಡು ಬರುವುದರಿಂದ ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಮಕ್ಕಳ ಬೆಳಗಿನ ಉಪಹಾರದಲ್ಲಿ ಓಟ್ಸ್ ಸೇರಿಸುವುದರಿಂದ ಹೃದಯದ ಆರೋಗ್ಯವನ್ನೂ ಸುಧಾರಿಸಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link