GO FIRST ಸ್ಪೆಷಲ್ ಆಫರ್, ಪ್ರಯಾಣದ ವೇಳೆ ಸಿಗಲಿದೆ ಉಚಿತ ಆಹಾರ.! ಸೀಟು ಆಯ್ಕೆ ಮಾಡುವ ಅವಕಾಶವೂ ಲಭ್ಯ

Sat, 04 Jun 2022-3:04 pm,

ಈ ದಿನ ಪ್ರಯಾಣಿಸಬೇಕು ದೇಶೀಯ ವಿಮಾನಯಾನ ಕಂಪನಿ ಗೋ ಫಸ್ಟ್ ಈ ಕೊಡುಗೆಯ ಲಾಭವನ್ನು ಪಡೆಯಲು, ಮಂಗಳವಾರ ಮತ್ತು ಬುಧವಾರ ಪ್ರಯಾನ ಬೆಳೆಸಬೇಕಾಗುತ್ತದೆ. ಈ ದಿನದ ವಿಮಾನ ಟಿಕೆಟ್ ಬುಕಿಂಗ್ ಮೇಲೆ ಈ ಕೊಡುಗೆಗಳನ್ನು ನೀಡಲಾಗುತ್ತಿದೆ.

ಈ GO FIRST ಆಫರ್‌ನಲ್ಲಿ ಬುಕಿಂಗ್ ಅವಧಿಯು ಜೂನ್ 2 ರಿಂದ ಸೆಪ್ಟೆಂಬರ್ 25, 2022 ರವರೆಗೆ ಇರಲಿದೆ. ಆದರೆ ಪ್ರಯಾಣದ ಅವಧಿಯು ಜೂನ್ 7 ರಿಂದ ಸೆಪ್ಟೆಂಬರ್ 28, 2022 ರವರೆಗೆ  ಆಗಿರಬೇಕು. ಆದರೆ ಈ ಆಫರ್ ಮಂಗಳವಾರ ಮತ್ತು ಬುಧವಾರದ ಪ್ರಯಾಣದ ಮೇಲೆ ಮಾತ್ರ ಲಭ್ಯ.   

ಈ ಕೊಡುಗೆಯ ಅಡಿಯಲ್ಲಿ ನೀವು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದರೆ ನಂತರ ದಂಪತಿಗಳು 1000 ರೂ. ಮೌಲ್ಯದ ಫುಡ್ ಹ್ಯಾಂಪರ್ ಅನ್ನು ಪಡೆಯುತ್ತಾರೆ ಮತ್ತು ನಾಲ್ಕು ಮಂದಿಯ ಕುಟುಂಬಕ್ಕೆ 2000 ರೂ. ಮೌಲ್ಯದ ಆಹಾರದ ಹ್ಯಾಂಪರ್ ಅನ್ನು ನೀಡಲಾಗುವುದು. 

ನೀವು ಏರ್‌ಲೈನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ವಿಮಾನಗಳ ಟಿಕೆಟ್ ಬುಕ್ ಮಾಡಬಹುದು. ಅಲ್ಲದೆ ಈ ಟಿಕೆಟನ್ನು ನಿಮ್ಮ ನುಕುಲಕ್ಕೆ ತಕ್ಕಂತೆ ಎಷ್ಟು ಬಾರಿ ಬೇಕಾದರೂ ರಿಶೆಡ್ಯುಲ್ ಮಾಡಬಹುದು.  ಈ ಆಫರ್ ಏರ್‌ಲೈನ್‌ನ ವೆಬ್‌ಸೈಟ್‌ನಿಂದ ಬುಕಿಂಗ್‌ ಮಾಡಿದರೆ ಮಾತ್ರ ಅನ್ವಯವಾಗುತ್ತದೆ. 

ಸ್ಪ್ಲಿಟ್  PNR ಗಳಲ್ಲಿ ಆಫರ್ ಅನ್ವಯಿಸುವುದಿಲ್ಲ ಎಂದು ಏರ್‌ಲೈನ್ಸ್ ಸ್ಪಷ್ಟಪಡಿಸಿದೆ. ನಿಗದಿತ ಹಾರಾಟಕ್ಕೆ ಕನಿಷ್ಠ 4 ಗಂಟೆಗಳ ಮೊದಲು ಯಾವುದೇ ಬದಲಾವಣೆಗಳನ್ನು ಮಾಡಬೇಕು. ಈ ಕೊಡುಗೆ ಎಲ್ಲಾ ದೇಶೀಯ ವಿಮಾನಗಳಲ್ಲೂ ಲಭ್ಯ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link