ಎಂಥಾ ಸಂಕಷ್ಟದಲ್ಲೂ ಈ ನಕ್ಷತ್ರದಲ್ಲಿ ಜನಿಸಿದವರ ಕೈಬಿಡಲ್ಲ ಪರಮೇಶ್ವರ: ಮೀನಾಮೇಷ ಎಣಿಸದೆ ಸಕಲ ಸಂಪತ್ತು ಕರುಣಿತ್ತಾರೆ ವಿಶ್ವಾಂಭರ

Wed, 30 Aug 2023-3:12 pm,

ಪುರಾಣಗಳ ಪ್ರಕಾರ ಮಹಾಶಿವನು ಕೆಲ ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತಾನೆ. ಆದರೆ ಶಿವ ಆಜನ್ಮವಾದ್ದರಿಂದ ಅವರಿಗೆ ನಿರ್ದಿಷ್ಟ ನಕ್ಷತ್ರವೆಂಬುದು ಇಲ್ಲ.  ಶ್ರೀರಾಮ ಪುನರ್ವಸು ನಕ್ಷತ್ರದಲ್ಲಿ ಹುಟ್ಟಿದರೆ, ಶ್ರೀಕೃಷ್ಣ ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದನೆಂದು ಹೇಳಲಾಗುತ್ತದೆ. ಅಂತೆಯೇ ನರಸಿಂಹ ಸ್ವಾಮಿ ಸ್ವಾತಿ ನಕ್ಷತ್ರದಲ್ಲಿ, ವಾಮನ ಶ್ರವಣ ನಕ್ಷತ್ರದಲ್ಲಿ… ಹೀಗೆ ಇತ್ಯಾದಿ ಅವತಾರಗಳ ಜನನವು ಕೆಲವು ನಕ್ಷತ್ರದಲ್ಲಿ ಆಗಿದೆ ಎಂದು ಹೇಳಲಾಗುತ್ತದೆ.

ಆದರೆ ಪರಮೇಶ್ವರನಿಗೆ ಅಂತಹ ನಿರ್ದಿಷ್ಟ ರಾಶಿಯಾಗಲಿ, ನಕ್ಷತ್ರವಾಗಲಿ ಇಲ್ಲವಂತೆ. ಆದರೆ ವೈದಿಕ ಜ್ಯೋತಿಷ್ಯದಲ್ಲಿ ಪರಶಿವನು ಹಲವಾರು ಗ್ರಹಗಳ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದಾನೆ,

ಸೋಮ ರೂಪವಾಗಿರುವ ಮೃಗಶಿರ ಮತ್ತು ರುದ್ರ ರೂಪವಾಗಿರುವ ಆರ್ದ್ರ ನಕ್ಷತ್ರದಲ್ಲಿ ಶಿವನ ಪ್ರಭಾವ ಹೆಚ್ಚಿರುತ್ತದೆ ಎನ್ನಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದ ಜನರನ್ನು ಮಹಾಶಿವ ಕಾಪಾಡುತ್ತಾನೆ ಎಂದು ಹೇಳಲಾಗುತ್ತದೆ.

ಇದಲ್ಲದೆ, ವಿಶ್ವಾಂಭರನು ಅನೇಕ ಇತರ ನಕ್ಷತ್ರಗಳೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ. ಆ ನಕ್ಷತ್ರಗಳು ಯಾವುವು ಎಂದರೆ, ಅಶ್ವಿನಿ, ಭರಣಿ, ಆಶ್ಲೇಷಾ, ಸ್ವಾತಿ, ಪೂರ್ವ ಭದ್ರ, ಉತ್ತರಾ ಭದ್ರ ಮತ್ತು ಶ್ರವಣಾ ನಕ್ಷತ್ರ.

ಈ ನಕ್ಷತ್ರದಲ್ಲಿ ಜನಿಸಿದ ಜನರು ಪ್ರತೀದಿನ ಶಿವ ಆರಾಧನೆ ಮಾಡಿದರೆ ಸಕಲ ಸಂಪತ್ತನ್ನು ಮಹಾದೇವ ಕರುಣಿಸುತ್ತಾನೆ ಎಂಬುದು ನಂಬಿಕೆ. ಇನ್ನು ಮಹಾದೇವ ಉಗ್ರ ಸ್ವರೂಪನಾದರೂ ಮೃದು ಸ್ವಭಾವವುಳ್ಳ ದೇವರೆಂದು ಪರಿಗಣಿಸಲಾಗಿದೆ. ಭಕ್ತರು ಮನಸ್ಸಿಟ್ಟು ಪೂಜಿಸಿ, ವರ ಬೇಡಿದರೆ ತಕ್ಷಣ ಅಸ್ತು ಎನ್ನುತ್ತಾರೆ ಎಂಬುದು ಪುರಾಣಗಳಲ್ಲಿ ಉಲ್ಲೇಖಿಸಿರುವ ಅಂಶ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link