ಈ ರಾಶಿಯ ಜನರ ಬಾಳಲ್ಲಿ ಸಂಪತ್ತಿನ ಮಳೆ ಸುರಿಸಲಿದೆ ದೀಪಾವಳಿ! ಸುಖದ ಸುಪ್ಪತ್ತಿಗೆ- ಅಂಗೈಯಲಿ ನಲಿಯುವಳು ಧನಲಕ್ಷ್ಮೀ
ಭಾರತದಲ್ಲಿ, ದೀಪಾವಳಿ ಎಂದರೆ ಬಹುದೊಡ್ಡ ಹಬ್ಬ. ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಜೊತೆಗೂಡಿ, ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇನ್ನು ಈ ಬಾರಿಯ ದೀಪಾವಳಿಯಲ್ಲಿ ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸಿದರೆ ಸಕಲ ಸಂಪತ್ತನ್ನು ಧಾರೆಯೆರೆಯುತ್ತಾರೆ ಎಂದು ಹೇಳಲಾಗುತ್ತದೆ.
ಲಕ್ಷ್ಮಿ ದೇವಿಯು ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತಾಳೆ. ಆದರೆ ಲಕ್ಷ್ಮಿ ದೇವಿಗೆ ಇಷ್ಟವಾದ 4 ರಾಶಿಗಳಿವೆ ಎಂದು ನಿಮಗೆ ತಿಳಿದಿದೆಯೇ? ಈ ರಾಶಿಗಳಿಗೆ ಈ ಬಾರಿಯ ದೀಪಾವಳಿಯಂದು ಹಣ, ಯಶಸ್ಸು, ಆರೋಗ್ಯ ಮತ್ತು ಶಾಂತಿಯನ್ನು ಕರುಣಿಸುತ್ತಾಳೆ ಎಂದು ಹೇಳಲಾಗುತ್ತದೆ.
ವೃಷಭ ರಾಶಿ: ಈ ರಾಶಿಯ ಅಧಿಪತಿ ಶುಕ್ರ. ಶುಕ್ರ ಗ್ರಹವನ್ನು ಸಂಪತ್ತು, ಸೌಕರ್ಯ, ಐಷಾರಾಮಿ, ಜೀವನ ಮತ್ತು ವೈಭವದ ಗ್ರಹವೆಂದು ಪರಿಗಣಿಸಲಾಗಿದೆ. ವೃಷಭ ರಾಶಿಯ ಮೇಲೆ ಶುಕ್ರನ ಪ್ರಭಾವದಿಂದಾಗಿ, ಈ ರಾಶಿಯ ಜನರ ಜೀವನದಲ್ಲಿ ಯಾವಾಗಲೂ ಸಂತೋಷ ಮತ್ತು ಐಷಾರಾಮಿ ಇರುತ್ತದೆ. ಇನ್ನು ಲಕ್ಷ್ಮೀದೇವಿಗೆ ವೃಷಭ ರಾಶಿಯ ಜನರು ತುಂಬಾ ಪ್ರಿಯರು. ಹೀಗಾಗಿ ಇವರನ್ನು ಅದೃಷ್ಟವಂತರು ಮತ್ತು ಶ್ರೀಮಂತಿಕೆ ಮಕ್ಕಳು ಎಂದು ಕರೆಯಲಾಗುತ್ತದೆ.
ಕರ್ಕಾಟಕ ರಾಶಿ: ವೃಷಭ ರಾಶಿಯವರಂತೆ ಕರ್ಕಾಟಕ ರಾಶಿಯವರ ಜೀವನದಲ್ಲಿ ಸಾಕಷ್ಟು ಸೌಕರ್ಯ, ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಇವರ ಬಳಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಕರ್ಕಾಟಕ ರಾಶಿಯ ಜನರು ತುಂಬಾ ಶ್ರಮಶೀಲರು, ಈ ಕಾರಣದಿಂದಾಗಿ ಅವರು ಯಾವಾಗಲೂ ಐಷಾರಾಮಿ ಜೀವನವನ್ನು ನಡೆಸಲು ಹಣವನ್ನು ಗಳಿಸುವ ಬಗ್ಗೆ ಯೋಚಿಸುತ್ತಾರೆ. ಈ ರಾಶಿಯ ಜನರಿಗೆ ದೀಪಾವಳಿ ವೇಳೆ ಲಕ್ಷ್ಮೀ ಅದೃಷ್ಟವನ್ನು ಕರುಣಿಸುತ್ತಾಳೆ.
ಸಿಂಹ ರಾಶಿ: ಲಕ್ಷ್ಮಿ ದೇವಿಯು ಯಾವಾಗಲೂ ಸಿಂಹ ರಾಶಿಯವರ ಮೇಲೆ ಆಶೀರ್ವಾದವನ್ನು ನೀಡುತ್ತಾಳೆ. ಜೀವನದುದ್ದಕ್ಕೂ ಸಂಪತ್ತು, ಸಂತೋಷ, ಸಮೃದ್ಧಿ ಮತ್ತು ಖ್ಯಾತಿಯನ್ನು ಪಡೆಯುತ್ತಾರೆ. ಸಿಂಹ ರಾಶಿಯ ಜನರು ನಾಯಕತ್ವದ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ವೃಶ್ಚಿಕ ರಾಶಿ: ಈ ರಾಶಿಯ ಜನರು ತಮ್ಮ ಜೀವನದುದ್ದಕ್ಕೂ ಸಂಪತ್ತು ಮತ್ತು ಅದೃಷ್ಟದಿಂದ ಆಶೀರ್ವದಿಸಲ್ಪಡುತ್ತಾರೆ. ಈ ಅದೃಷ್ಟದ ಜೊತೆಗೆ ಲಕ್ಷ್ಮಿ ದೇವಿ ಎಂದೆಂದೂ ಇವರ ಜೊತೆಯಲ್ಲೇ ಹೆಜ್ಜೆ ಇಡುತ್ತಾಳೆ ಎಂದು ಹೇಳಲಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)