Goddess Lakshmi: ಇಂತಹ ಜನರ ಬಳಿ ಲಕ್ಷ್ಮಿ ಎಂದಿಗೂ ಉಳಿಯುವುದಿಲ್ಲ
ರಾತ್ರಿ ಮೊಸರು ತಿನ್ನುವವನು: ಗರುಡ ಪುರಾಣದ ಪ್ರಕಾರ, ರಾತ್ರಿಯಲ್ಲಿ ಮರೆತೂ ಸಹ ಮೊಸರು ತಿನ್ನಬಾರದು. ಮೊಸರು ಆರೋಗ್ಯಕ್ಕೆ ಒಳ್ಳೆಯದಾದರೂ ರಾತ್ರಿ ಸೇವಿಸುವುದರಿಂದ ಆಯಸ್ಸು ಕಡಿಮೆಯಾಗುತ್ತದೆ.
ಶ್ರೀಮಂತರು ಇತರರನ್ನು ಅವಮಾನಿಸಲು ಪ್ರಯತ್ನಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಗರುಡ ಪುರಾಣದ ಪ್ರಕಾರ ಹೀಗೆ ಮಾಡುವುದು ಒಂದು ರೀತಿಯ ಪಾಪ. ಇದನ್ನು ಮಾಡುವವರು ಅಥವಾ ಸಂಪತ್ತಿನ ಬಗ್ಗೆ ಹೆಮ್ಮೆಪಡುವವರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿಯು ದೂರ ಹೋಗುತ್ತಾಳೆ.
ಗರುಡ ಪುರಾಣದ ಪ್ರಕಾರ, ಹಣದ ದುರಾಸೆಯ ಜನರು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಇದಲ್ಲದೇ ಪರರ ಸಂಪತ್ತನ್ನು ದೋಚಲು ಯತ್ನಿಸುವವನಿಗೆ ಯಾವ ಜನ್ಮದಲ್ಲೂ ತೃಪ್ತಿ ಸಿಗುವುದಿಲ್ಲ. ಇಂತಹ ದುರಾಸೆಯ ಮನೋಭಾವ ಇರುವವರ ಬಳಿ ಲಕ್ಷ್ಮಿ ನೆಲೆಸುವುದಿಲ್ಲ.
ಗರುಡ ಪುರಾಣದ ಪ್ರಕಾರ, ಇತರರನ್ನು ಟೀಕಿಸುವುದು ಅಥವಾ ಹೀಯಾಳಿಸುವುದು ಪಾಪ. ಅಂತಹ ಜನರು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ.
ಗರುಡ ಪುರಾಣದ ಪ್ರಕಾರ ಯಾವಾಗಲೂ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಏಕೆಂದರೆ ಇದನ್ನು ಮಾಡದ ವ್ಯಕ್ತಿಯ ಜೀವನದಲ್ಲಿ ಯಾವಾಗಲೂ ಹಣದ ಕೊರತೆ ಇರುತ್ತದೆ. ಅಂತಹವರ ಜೊತೆ ಲಕ್ಷ್ಮಿ ಒಂದು ಕ್ಷಣವೂ ಉಳಿಯುವುದಿಲ್ಲ.