Goddess Lakshmi: ಲಕ್ಷ್ಮೀದೇವಿ ನೆಲೆಸಬೇಕೆಂದರೆ ಮನೆ ಮುಂದೆ ಈ ಗಿಡಗಳನ್ನು ನೆಡಬೇಕು
ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನವಾಗಿದೆ. ತುಳಸಿ ಗಿಡವನ್ನು ಲಕ್ಷ್ಮೀದೇವಿ ಎಂದು ಹಿಂದೂಗಳು ಪೂಜಿಸುತ್ತಾರೆ. ಮನೆಯ ದ್ವಾರಕ್ಕೆ ನೇರವಾಗಿ ಕಾಣುವಂತೆ ತುಳಸಿ ಕಟ್ಟೆ ಮಾಡಿ ಅಲ್ಲಿ ಗಿಡ ನೆಟ್ಟರೆ ನಿಮಗೆ ತಾಯಿ ಲಕ್ಷ್ಮೀದೇವಿಯ ಕೃಪೆ ಸಿಗುತ್ತದೆ. ಜೊತೆಗೆ ಅದಕ್ಕೆ ನೀರು ಹಾಕಿ ಬಾಡದಂತೆ ಸದಾ ಕಾಪಾಡಬೇಕು.
ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯ ಗಿಡ ಅಥವಾ ಮರವನ್ನು ಮನೆಯ ಮುಂಭಾಗ ಬೆಳೆಸುವುದರಿಂದ ನಿಮಗೆ ತಾಯಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ದೊರೆಯುತ್ತದೆ. ತಾಯಿ ಲಕ್ಷ್ಮೀದೇವಿಯ 16 ಸ್ಥಾನಗಳಲ್ಲಿ ಬಿಲ್ವ ವೃಕ್ಷವೂ ಒಂದಾಗಿರುವುದರಿಂದ ಮನೆಯ ಮುಂಭಾಗ ಬಿಲ್ವ ವೃಕ್ಷವನ್ನು ಪೋಷಿಸಬೇಕು.
ಮನಿ ಪ್ಲಾಂಟ್ ಅತ್ಯಂತ ಶುಭದಾಯಕ ಗಿಡವಾಗಿದೆ. ಮನೆಯ ಮುಂಭಾಗ ಅಥವಾ ಬಾಲ್ಕನಿಯಲ್ಲಿ ಒಂದು ಪಾಟ್‌ನಲ್ಲಿ ಇದನ್ನು ಬೆಳೆಸಬಹುದು. ಮನಿಪ್ಲಾಂಟ್ ಬಳ್ಳಿ ಮೇಲಕ್ಕೆ ಹಬ್ಬುವಂತೆ ನೆಟ್ಟರೆ ಧನ ವೃದ್ಧಿಯಾಗುತ್ತದೆ. ಆದರೆ ಅಪ್ಪಿತಪ್ಪಿಯೂ ಇದು ನೆಲದಲ್ಲಿ ಹರಡದಂತೆ ಎಚ್ಚರಿಕೆ ವಹಿಸಬೇಕು.