ಮನೆ ಹೀಗಿದ್ದರೆ ಬೆಟ್ಟದಷ್ಟಿದ್ದ ಐಶ್ವರ್ಯ ಕೂಡಾ ಕರಗಿ ಹೋಗುವುದು!ಇಂಥಹ ಮನೆಯಲ್ಲಿ ಲಕ್ಷ್ಮೀ ನಿಲ್ಲುವುದೇ ಇಲ್ಲ!ನಿಮ್ಮ ಬಡತನಕ್ಕೂ ಇದೇ ಕಾರಣವಾಗಿರಬಹುದು
ಸ್ವಚ್ಛತೆ ಇಲ್ಲದ ಮನೆಗಳಲ್ಲಿ ತಾಯಿ ಲಕ್ಷ್ಮೀ ನೆಲೆಸುವುದೇ ಇಲ್ಲ.ಲಕ್ಷ್ಮಿಗೆ ಹೊಲಸು ಇಷ್ಟವಾಗುವುದಿಲ್ಲ.ಆದ್ದರಿಂದ ಲಕ್ಷ್ಮೀ ಕೊಳಕು ಸ್ಥಳದಲ್ಲಿ ಉಳಿಯುವುದೇ ಇಲ್ಲ.
ಜಗಳ ವಿವಾದ ನಡೆಯುವ ಮನೆಯಲ್ಲಿ ಜನ ನಿಂದನೀಯ ಪದಗಳನ್ನು ಬಳಸುತ್ತಾರೆ. ಇಂಥಹ ಅಣೆಯಲ್ಲಿ ಕೂಡಾ ಲಕ್ಷ್ಮೀ ಉಳಿಯುವುದಿಲ್ಲ.
ಸೂರ್ಯಾಸ್ತದ ನಂತರ ಗುಡಿಸುವುದು, ಒರೆಸುವುದು ರಾತ್ರಿ ಹೊತ್ತು ಬಟ್ಟೆ ಒಗೆಯುವ ಮನೆಯ ಮೇಲೆ ಲಕ್ಷ್ಮೀ ಆಶೀರ್ವಾದ ಇರುವುದಿಲ್ಲ. ಅಂತಹ ಮನೆಗಳಲ್ಲಿ ತಾಯಿ ಲಕ್ಷ್ಮೀ ವಾಸಿಸುವುದಿಲ್ಲ.
ಹಿರಿಯರು, ಸಂತರು, ಬ್ರಾಹ್ಮಣರು ಮತ್ತು ಸ್ತ್ರೀಯರನ್ನು ಅವಮಾನಿಸುವ ಮನೆಗಳಲ್ಲಿ ತಾಯಿ ಲಕ್ಷ್ಮೀ ಒಂದು ಕ್ಷಣವೂ ನಿಲ್ಲುವುದಿಲ್ಲ.ಬದಲಿಗೆ, ಲಕ್ಷ್ಮಿ ದೇವಿಯ ಅಸಮಾಧಾನದಿಂದಾಗಿ,ಈ ಮನೆಗಳಲ್ಲಿ ಯಾವಾಗಲೂ ಬಡತನ ಇರುತ್ತದೆ.
ರಾತ್ರಿಯಲ್ಲಿ ಅಡುಗೆ ಮನೆಯಲ್ಲಿ ಕೊಳಕು ಮತ್ತು ಎಂಜಲು ಪಾತ್ರೆಗಳನ್ನು ಬಿಡುವುದು ತಪ್ಪು. ಹೀಗೆ ರಾತ್ರಿಯಿಡಿ ಎಂಜಲು ಪಾತ್ರೆಗಳನ್ನು ಇದುವ ಮನೆಯಲ್ಲಿ ಕೂಡಾ ಲಕ್ಷ್ಮೀ ನೆಲೆಸುವುದಿಲ್ಲ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.