ಬಂಗಾರ ಖರೀದಿಸಲು ಬಯಸುವವರಿಗೆ ಇದು ಬೆಸ್ಟ್‌ ಟೈಮ್‌..ಮೊದಲ ಶ್ರಾವಣ ಸೋಮವಾರದಂದು ಚಿನ್ನದ ಬೆಲೆ ಇಷ್ಟೆ ನೋಡಿ

Mon, 05 Aug 2024-12:55 pm,

ವಿವಾಹ ಸಂಭ್ರಮಗಳಲ್ಲಿ ಹೆಚ್ಚು ಬಳಕೆಯಾಗುವ ಚಿನ್ನ ಬೆಳ್ಳಿ ಈಗಿನ ಕಾಲದಲ್ಲಿ ಬಹುಬೇಡಿಕೆಯ ಒಂದು ವಸ್ತು. ಡಿಮ್ಯಾಂಡ್‌ ಹೆಚ್ಚಾದಂತೆ ಚಿನ್ನದ ಬೆಲೆ ದಿನೇ ದಿನೇ ಆಗಸಕ್ಕೇರುತ್ತಿದೆ. ಅದರಲ್ಲಂಥೂ ಭಾರತೀಯರು ಚಿನ್ನ ಹಾಗೂ ಬೆಳ್ಳಿ ಕೊಳ್ಳಲು ವಿಶೇಷ ದಿನಗಳಿಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಯಾವಾಗಲೋ ಮಾಡುವ ಮದುವೆಗಾಗಿ ಮುಂಚೆಯಿಂದಲೇ ಚಿನ್ನ ಕೂಡಿಡುವ ಅಭ್ಯಾಸ ಅನೇಕ ಭಾರತೀಯರ ಮನೆಗಳಲ್ಲಿದೆ. ಇಂದಿನಿಂದ(ಆಗಸ್ಟ್‌ 05)ರಿಂದ ಶ್ರಾವಣ ಸೋಂವಾರ ಶುರುವಾಗಲಿದೆ, ಇದು ವರ್ಷದಲ್ಲಿ ಒಮ್ಮೆ ಬರುವ ವಿಶೇಷ ದಿನ, ಈ ದಿನ ಚಿನ್ನ ಕೊಂಡರೆ ಶುಭವಾಗುತ್ತದೆ. ಹಾಗಾದರೆ ಈವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂದು ಕೇಳುವವರಿಗೆ ಇಲ್ಲಿದೆ ನೋಡಿ ಡಿಟೈಲ್ಸ್‌...  

ಮಹಿಳೆಯರಿಗಂತೂ ಚಿನ್ನದ ಬೆಲೆ ಎಷ್ಟಿದ್ದರು ಚಿನ್ನವನ್ನು ಖರೀದಿಸಲೇ ಬೇಕು. ಅದರಲ್ಲಿ ಅಂತೂ ವಿಶೇಷ ದಿನದಂದು ಚಿನ್ನ ಕೊಳ್ಳಬೇಕು ಎಂದು ಅನೇಕ ಮಹಿಳೆಯರು ಹಣ ಕೂಡಿತ್ತು ಒಳ್ಳೆಯ ದಿನಕ್ಕಾಗಿ ಕಾಯುತ್ತಾ ಕೂತಿರುತ್ತಾರೆ. ಅದರಲ್ಲೂ ಇಂದು ಚಿನ್ನದ ಬೆಲೆ ಕಡಿಮೆಯಾಗಿದೆ. ಗೃಹಿಣಿಯರಿಗೆ ಆಘರಣ ಖರೀದಿಸಲೂ ಬೆಸ್ಟ್‌ ಟೈಮ್‌ ಅಷ್ಟೇ ಅಲ್ಲ ಇದು ಬೆಸ್ಟ್‌ ಡೇ ಅಂತಾನೇ ಹೇಳ ಬಹುದು.  

ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ನ 1 ಗ್ರಾಂ ಗಾರದ ಬೆಲೆ  ರೂ. 6,470 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾದಲ್ಲಿ ಇದರ ಬೆಲೆ ರೂ. 6,470 ಆಗಿದೆ. ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 6,485 ರೂ.ಗೆ ಇಳಿಕೆಯಾಗಿದೆ.  

ಇಂದು ಮಾರುಕಟ್ಟೆಯಲ್ಲಿ 18 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ರೂ. 5,294 ಆಗಿದ್ದು, 22 ಕ್ಯಾರಟ್  1 ಗ್ರಾಂ ಚಿನ್ನದ ಬೆಲೆ ರೂ. 6,470 ಆಗಿದೆ. 24 ಕ್ಯಾರಟ್‌ನ 1 ಗ್ರಾಂನ ಬೆಲೆ ರೂ. 7,058 ಆಗಿದ್ದು, 8GM 18 ಕ್ಯಾರಟ್‌ನ 10 ಗ್ರಾಂನ ಚಿನ್ನದ ಬೆಲೆ ರೂ. 42,352 ಆಗಿದ್ದು, 22 ಕ್ಯಾರಟ್ 10 ಗ್ರಾಂನ ಚಿನ್ನದ ಬೆಲೆ ರೂ. 51,760 ಆಗಿದೆ.ಇನ್ನೂ 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ ರೂ. 56,464 ಆಗಿದೆ.  

ಇನ್ನು 10GMನ 18 ಕ್ಯಾರಟ್ ಚಿನ್ನದ ಬೆಲೆ  ರೂ. 52,940 ಆಗಿದ್ದು, 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ರೂ. 64,700 ಆಗಿದೆ. 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ರೂ. 70,580 ಆಗಿದ್ದು,100 ಗ್ರಾಂನ 18 ಕ್ಯಾರಟ್‌ನ ಚಿನ್ನದ ಬೆಲೆ  ರೂ. 5,29,400 ಆಗಿದೆ. 22 ಕ್ಯಾರಟ್ 100 ಗ್ರಾಂನ ಚಿನ್ನದ ಬೆಲೆ ರೂ. 6,47,000 ಆಗಿದ್ದು, 24 ಕ್ಯಾರಟ್  100 ಗ್ರಾಂನ ಬೆಲೆ ರೂ. 7,05,800 ಆಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link