ಆಭರಣ ಪ್ರಿಯರಿಗೆ ಸಂತಸದ ಸುದ್ದಿ.. ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...
ಕಳೆದ ಎರಡು ತಿಂಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 67 ಸಾವಿರ ಇದ್ದದ್ದು ಈಗ (ನವೆಂಬರ್ 5) 73 ಸಾವಿರ ದಾಟಿದೆ. ಅಂದರೆ 2 ತಿಂಗಳಲ್ಲಿ ಶೇ 10ರಷ್ಟು ಹೆಚ್ಚಳವಾಗಿದೆ.
ಆದರೆ ಕಳೆದ ಎರಡ್ಮೂರು ದಿನಗಳಿಂದ ಚಿನ್ನ ಕೊಂಚ ಕಡಿಮೆಯಾಗಿದೆ. ಗಗನಕ್ಕೇರಿದ ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರಿಯರು ಖುಷಿ ಪಡುತ್ತಿದ್ದಾರೆ. ಹೂಡಿಕೆ ಮಾಡಲು ಬಯಸುವವರಿಗೆ ಇದೇ ಸರಿಯಾದ ಸಮಯ ಎಂದರೇ ತಪ್ಪಾಗುವುದಿಲ್ಲ..
ಕಳೆದ ವಾರ ಚಿನ್ನ ಸುಮಾರು 2 ಸಾವಿರ ಏರಿಕೆಯಾಗಿದೆ. ಸದ್ಯ 770 ರೂಪಾಯಿ ಇಳಿಕೆಯಾಗಿದೆ. ಇದರಿಂದ ಗ್ರಾಹಕರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಈ ವಾರದ ಆರಂಭದಲ್ಲಿ ಬೆಲೆಗಳು ಹೆಚ್ಚು ಬದಲಾಗಿಲ್ಲ. ಇಂದಿನ ಬೆಲೆಗಳ ಪ್ರಕಾರ 22 ಕ್ಯಾರೆಟ್ ಚಿನ್ನದ ಬೆಲೆ ಈಗ ಪ್ರತಿ 10 ಗ್ರಾಂಗೆ 73,800 ರೂ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 80,055 ರೂ. ಆಗಿದೆ..
ಚಿನ್ನವನ್ನು ಖರೀದಿಸುವ ಮೊದಲು, ಆಭರಣಗಳ ಮೇಲೆ ಹಾಲ್ ಗುರುತುಗಳನ್ನು ಪರಿಶೀಲಿಸಿ. ಗುರುತು ಹೊಂದಿರುವ ಚಿನ್ನವು ಶುದ್ಧವಾಗಿರುತ್ತದೆ.. ಇದರಿಂದ ಈ ಆಭರಣಗಳನ್ನು ಮಾರಲು ಬಯಸಿದಾಗ ಅಥವಾ ಕರಗಿಸಿ ಮತ್ತೊಂದು ಆಭರಣವನ್ನು ಮಾಡಲು ಬಯಸಿದಾಗ ಹೆಚ್ಚು ಮಾಡುವ ಮಜೂರಿ ಇರುವುದಿಲ್ಲ.
ಮತ್ತೊಂದೆಡೆ, ಕಳೆದ ವಾರ ಬೆಳ್ಳಿ 2 ಸಾವಿರ ಏರಿಕೆ ಕಂಡಿತ್ತು. ವಾರದ ಅಂತ್ಯಕ್ಕೆ ಬೆಳ್ಳಿ 3 ಸಾವಿರ ಕುಸಿದಿದೆ. ಈ ವಾರದ ಆರಂಭದಲ್ಲಿ ಬೆಲೆಗಳು ಸ್ಥಿರವಾಗಿದ್ದವು. ಇಂದಿನ ಬೆಳಗಿನ ದರದ ಪ್ರಕಾರ ಬೆಳ್ಳಿ ಕುಸಿಯುವ ಲಕ್ಷಣಗಳು ಗೋಚರಿಸುತ್ತಿವೆ. ಸದ್ಯದ ಬೆಲೆಯಂತೆ ಒಂದು ಕೆಜಿ ಬೆಳ್ಳಿಯ ಬೆಲೆ 97,000 ರೂ. ಆಗಿದೆ..
ಇದೇ ವೇಳೆ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಸೌಲಭ್ಯವೂ ಇದೆ ಎಂಬುದು ಹಲವರಿಗೆ ತಿಳಿದಿಲ್ಲ. ಎಲ್ಲಾ ಶೋರೂಂಗಳಲ್ಲಿಯೂ ರೂ. 60 ಸಾವಿರಕ್ಕೆ ಚಿನ್ನ ಖರೀದಿಸಬಹುದು. ಆದರೆ ಈ ಚಿನ್ನವು 18 ಕ್ಯಾರೆಟ್ ಆಗಿರುತ್ತದೆ..