Gold Rate Today: ಚಿನ್ನದ ಬೆಲೆ ಮತ್ತೆ ಭಾರೀ ಇಳಿಕೆ... 10 ಗ್ರಾಂ ಬಂಗಾರದ ಬೆಲೆ ಇಷ್ಟೇನಾ?

Sun, 28 Jul 2024-9:37 am,

ಇಂದು ಸಹ ಬಂಗಾರದ ಬೆಲೆ ಮತ್ತಷ್ಟು ಇಳಿಕೆಯಾಗಿದೆ.  

ಚಿನ್ನದ ಮೇಲಿನ ಕಸ್ಟಮ್ ಸುಂಕವನ್ನು ಶೇ.10 ಕಡಿಮೆ ಮಾಡಿದ ನಂತರ, ಬಂಗಾರದ ಬೆಲೆ ಇಳಿಯುತ್ತಲೇ ಇದೆ.

ಚಿನ್ನದ ಬೆಲೆಯಲ್ಲಿ ಇಂದು ಕೂಡ ಇಳಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಕಡಿಮೆಯಾಗಿದೆ. ಇಂದು 22 ಗ್ರಾಮ್ ಚಿನ್ನದ ಬೆಲೆ 6,300 ರೂ. ಆಗಿದೆ.

ಹತ್ತು ದಿನದಲ್ಲಿ ಬರೋಬ್ಬರಿ 560 ರೂ.ನಷ್ಟು ಬಂಗಾರದ ಬೆಲೆ ಇಳಿಕೆ ಆಗಿದೆ. ಬಜೆಟ್ ಪೂರ್ವದಿಂದಲೇ ಚಿನ್ನದ ಬೆಲೆ ಇಳಿಯಲು ಆರಂಭಿಸಿತ್ತು.

ಆದರೆ ಬಜೆಟ್​ ನಲ್ಲಿ ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಇಳಿಸಿದ ನಂತರ ನಿರಂತರವಾಗಿ ಚಿನ್ನದ ಬೆಲೆ ಕುಸಿತ ಕಂಡಿದೆ.

ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 63,000 ರೂಪಾಯಿ. 24 ಕ್ಯಾರಟ್ ಚಿನ್ನದ ಬೆಲೆ 68,730 ರೂಪಾಯಿ. ಬೆಳ್ಳಿ ಬೆಲೆ ಪ್ರತಿ ಕೆಜಿ ಗೆ 84,250 ರೂಪಾಯಿ ಆಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link