Gold from Mushrooms: ಅಣಬೆಯಿಂದಲೂ ತಯಾರಾಗುತ್ತದೆ ಚಿನ್ನ! ಗೋವಾ ವಿಜ್ಞಾನಿಗಳ ಅದ್ಭುತ ಶೋಧ

Thu, 29 Feb 2024-10:05 am,

ಆಹಾರವಾಗಿ ಕೆಲವರಿಗೆ ಅಣಬೆ ಬಹಳ ಇಷ್ಟವಾದರೆ ಇನ್ನು ಕೆಲವರಿಗೆ ಅಣಬೆಯ ವಾಸನೆಯೂ ಇಷ್ಟವಾಗುವುದಿಲ್ಲ. ಆದರೆ ಇದೇ ಅಣಬೆಯಿಂದ  ಚಿನ್ನವನ್ನು ತಯಾರಿಸಬಹುದು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು   ಗೋವಾದ ಸಂಶೋಧಕರು ಅಣಬೆಯಿಂದ ಚಿನ್ನವನ್ನು ಹೊರತೆಗೆಯಬಹುದು ಎಂದು ಹೇಳಿದ್ದಾರೆ. ಅಣಬೆಗಳಿಂದ ಚಿನ್ನದ ನ್ಯಾನೊ ಕಣಗಳನ್ನು ತಯಾರಿಸಬಹುದು ಎನ್ನುವುದು ವಿಜ್ಞಾನಿಗಳ ಮಾತು. 

ಗೋವಾದಲ್ಲಿ ಕಂಡುಬರುವ ಕಾಡು ಮಶ್ರೂಮ್‌ನಿಂದ ವಿಜ್ಞಾನಿಗಳು ಚಿನ್ನದ ನ್ಯಾನೊಪರ್ಟಿಕಲ್‌ಗಳನ್ನು ಸಿದ್ಧಪಡಿಸಿದ್ದಾರೆ. ಇದು ಟರ್ಮಿಟೊಮೈಸಸ್ ಜಾತಿಯದ್ದಾಗಿದೆ. ಗೆದ್ದಲು ಬೆಟ್ಟಗಳ ಮೇಲೆ ಬೆಳೆಯುವ ಈ ಅಣಬೆಯನ್ನು ಗೋವಾದಲ್ಲಿ  'ರಾನ್ ಓಲ್ಮಿ' ಎಂದು ಕರೆಯುತ್ತಾರೆ. ಈ ಅಣಬೆಯಿಂದ ವಿಜ್ಞಾನಿಗಳು ಚಿನ್ನವನ್ನು ಸಿದ್ಧಪಡಿಸಿದ್ದಾರೆ. 

ಟೇಲರ್ ಮತ್ತು ಫ್ರಾನ್ಸಿಸ್ ಪ್ರಕಟಿಸಿದ ಜಿಯೋಮೈಕ್ರೊಬಯಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಈ ಪ್ರಯೋಗವನ್ನು ಡಾ. ಸುಜಾತಾ ದಾಬೋಲ್ಕರ್ ಮತ್ತು ಡಾ. ನಂದಕುಮಾರ್ ಕಾಮತ್ ನೇತೃತ್ವದಲ್ಲಿ ನಡೆಸಲಾಗಿದೆ. ಮೂರು ವರ್ಷಗಳ ಕಾಲ  ಈ ತಂಡ ಈ ಅಣಬೆಗಳ ಮೇಲೆ ಸಂಶೋಧನೇ ನಡೆಸಲಾಯಿತು. ಈ ಸಂಶೋಧನೆಯಲ್ಲಿ, ವಿಜ್ಞಾನಿಗಳು ರೋನ್ ಓಲ್ಮಿ ಮಶ್ರೂಮ್‌ನಿಂದ ಚಿನ್ನದ ನ್ಯಾನೊಪರ್ಟಿಕಲ್‌ಗಳನ್ನು ಸಿದ್ಧಪಡಿಸಿ, ತಮ್ಮ ಸಂಶೋಧನೆಯನ್ನು ಗೋವಾ ಸರ್ಕಾರದ ಮುಂದೆ ಮಂಡಿಸಿದ್ದಾರೆ.   

ಅಣಬೆಯಿಂದ ತಯಾರಿಸಿದ ಚಿನ್ನವು ಗೋವಾದ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಸುಧಾರಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.ಈ ಸಂಶೋಧನೆಯಿಂದ ಗೋವಾದ ನೈಸರ್ಗಿಕ ಸಂಪನ್ಮೂಲಗಳನ್ನು ಹೊಸ ತಂತ್ರಜ್ಞಾನದಲ್ಲಿ ಬಳಸಿಕೊಳ್ಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ನ್ಯಾನೊ ಕಣಗಳ ಬೇಡಿಕೆ ಹೆಚ್ಚಾಗಿದೆ. ಬಯೋಮೆಡಿಕಲ್ ಮತ್ತು ಜೈವಿಕ ತಂತ್ರಜ್ಞಾನ ವಿಜ್ಞಾನಗಳಲ್ಲಿ ಇದರ ಬಳಕೆ ಹೆಚ್ಚಿದೆ. ಈ ನ್ಯಾನೊ ಚಿನ್ನದ ಕಣಗಳನ್ನು ವೈದ್ಯಕೀಯ ವಿಜ್ಞಾನದಲ್ಲಿ ಬಳಸಬಹುದು. ಇದರ ಬಳಕೆಯು ಉದ್ದೇಶಿತ ಔಷಧ ವಿತರಣೆ, ವೈದ್ಯಕೀಯ ಚಿತ್ರಣ ಮತ್ತು ಎಲೆಕ್ಟ್ರಾನಿಕ್ ತಯಾರಿಕೆಯಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. 

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ನ್ಯಾನೊ ಕಣಗಳಿಗೆ ಹೆಚ್ಚಿನ ಮೌಲ್ಯವಿದೆ. ಫೆಬ್ರವರಿ 2016 ರಲ್ಲಿ, ಒಂದು ಮಿಲಿಗ್ರಾಂ ಚಿನ್ನದ ನ್ಯಾನೊಪರ್ಟಿಕಲ್‌ನ ಬೆಲೆ ಅಂದಾಜು 80 ಡಾಲರ್ ಅಂದರೆ ಪ್ರತಿ ಗ್ರಾಂಗೆ 80,000 ರೂ. ಆಗಿತ್ತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link