5100 ರೂಪಾಯಿಯಷ್ಟು ಅಗ್ಗವಾದ ಚಿನ್ನ ! ಬಂಗಾರ ಇಷ್ಟೊಂದು ಅಗ್ಗವಾಗಲು ಇದೇ ಕಾರಣ !
ಬಂಗಾರದ ಬೆಲೆ ಇಂದು ಪಾತಾಳಕ್ಕೆ ಇಳಿದಿದೆ. ಚಿನ್ನದ ಬೆಲೆ 56,600 ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಬಹಳ ದಿನಗಳ ನಂತರ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ ಕಂಡು ಬಂದಿದೆ.
ಇಂದು ಬೆಳ್ಳಿ ಬೆಲೆಯಲ್ಲಿಯೂ ಕೂಡಾ ಶೇ.4ಕ್ಕಿಂತ ಹೆಚ್ಚು ಕುಸಿದಿದ್ದು, 66,000 ರೂ. ಯಲ್ಲಿ ವಹಿವಾಟು ನಡೆಸುತ್ತಿದೆ.
ಮೇ 6 ರಂದು, MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 61,845 ರೂಪಾಯಿಗಳ ದಾಖಲೆಯ ಮಟ್ಟದಲ್ಲಿತ್ತು. ಆದರೆ ಇಂದು MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 56,691 ರೂಪಾಯಿಗಳ ಮಟ್ಟದಲ್ಲಿದೆ. ಅಂದರೆ ಇದರ ಪ್ರಕಾರ ಸದ್ಯ ಚಿನ್ನ 5154 ರೂ.ಗಳಷ್ಟು ಅಗ್ಗವಾಗುತ್ತಿದೆ.
ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಇಂದು ಶೇಕಡಾ 1.58 ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 56,691 ರೂ. ಆಗಿದೆ. ಬೆಳ್ಳಿಯ ದರದಲ್ಲಿ ಶೇ.4.46ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ 66740 ರೂ. ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಅಮೆರಿಕದಲ್ಲಿ ಚಿನ್ನದ ಬೆಲೆ ಶೇಕಡಾ 0.39 ರಷ್ಟು ಕಡಿಮೆಯಾಗಿದೆ. ಇದಲ್ಲದೇ ಬೆಳ್ಳಿಯ ಬೆಲೆ 0.29 ಶೇಕಡಾ ಕುಸಿದಿದೆ.
ತಜ್ಞರ ಪ್ರಕಾರ, ಅಮೆರಿಕದಲ್ಲಿ ಡಾಲರ್ ಸೂಚ್ಯಂಕವು 10 ತಿಂಗಳ ದಾಖಲೆಯ ಮಟ್ಟವನ್ನು ತಲುಪಿದೆ. ಇದರ ಪರಿಣಾಮ ಚಿನ್ನದ ಬೆಲೆಯ ಮೇಲೆ ಗೋಚರಿಸುತ್ತದೆ.
ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡುಬರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.