ಮದುವೆ ಸೀಸನ್ ನಲ್ಲಿಯೇ ಯದ್ವಾತದ್ವಾ ಇಳಿಕೆಯಾಗುತ್ತಿದೆ ಬಂಗಾರದ ಬೆಲೆ !ಎಲ್ಲಿಯವರೆಗೆ ಮುಂದುವರಿಯಲಿದೆ ದರ ಕುಸಿತದ ಪಯಾಣ ? ಬಂಗಾರದ ಖರೀದಿ ಮಾಡಬೇಕೆಂದಿದ್ದರೆ ತಿಳಿದುಕೊಳ್ಳಿ
ಕಳೆದ ಕೆಲವು ತಿಂಗಳಿನಿಂದ ಗಗನಕ್ಕೇರಿದ್ದ ಚಿನ್ನದ ಬೆಲೆ ಇಳಿಯುವ ಲಕ್ಷಣಗಳೇ ಕಾಣುತ್ತಿರಲಿಲ್ಲ. ಬಂಗಾರದ ಖರೀದಿಯಲ್ಲ, ಅದರತ್ತ ಮುಖ ಮಾಡುವುದು ಕೂಡಾ ಸಾಧ್ಯವೇ ಇಲ್ಲ ಎನ್ನುವ ಮಾತಿನಂತೆ ಆಗಿತ್ತು.
ಆದರೆ ಒಂದು ವಾರದಿಂದ ಹಳದಿಲೋಹದ ಬೆಲೆ ಇಳಿಮುಖದತ್ತ ಸಾಗುತ್ತಲೇ ಇದೆ. ದಿನೇ ದಿನೇ ಚಿನ್ನದ ಬೆಲೆ ಕುಸಿಯುತ್ತಾ ಹೋಗುತ್ತಿದೆ.
ಮದುವೆಯ ಸೀಸನ್ ನಲ್ಲಿಯೇ ಚಿನ್ನದ ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆ ಒಂದು ರೀತಿಯಲ್ಲಿ ಎಲ್ಲರಿಗೂ ಶುಭ ಸೂಚಕವೇ. ಆಭರಣ ಪ್ರಿಯ ಮಹಿಳೆಯರಿಗಂತೂ ಬಂಗಾರ ಖರೀದಿಗೆ ಇದು ಸೂಕ್ತ ಸಮಯ.
999 ಶುದ್ಧತೆಯ 10 ಗ್ರಾಂ ಚಿನ್ನವು 355 ರೂ. ಇಳಿಕೆ ಕಂಡಿದ್ದು, 77,027 ರೂ.ಗೆ ಕುಸಿದಿದೆ. 916 ಶುದ್ಧತೆಯ 10 ಗ್ರಾಂ ಚಿನ್ನ ಇಂದು 325 ರೂ. ಇಳಿಕೆಯಾಗಿದ್ದು, ದರ 70,557 ರೂ. ತಲುಪಿದೆ. 80 ಸಾವಿರ ಗಡಿ ದಾಟಿದ್ದ ಬಂಗಾರದ ಇದೀಗ 70 ಸಾವಿರಕ್ಕೆ ಬಂದು ತಲುಪಿದೆ.
ಇನ್ನು ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಕೂಡಾ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ವಹಿವಾಟಿನಲ್ಲಿ ಚಿನ್ನವು ತೀವ್ರ ಕುಸಿತವನ್ನು ಕಂಡಿದ್ದು, MCX ನಲ್ಲಿ ಚಿನ್ನದ ಬೆಲೆ 76,800 ರೂ. ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸುಮಾರು 20 ಡಾಲರ್ ಕುಸಿತವಾಗಿದೆ.
ಅಮೆರಿಕಾದಲ್ಲಿ ಟ್ರಂಪ್ ವಿಜಯದ ನಂತರ,ಬಿಟ್‌ಕಾಯಿನ್ ಮತ್ತು ಷೇರು ಮಾರುಕಟ್ಟೆಗಳಂತಹ ಆಸ್ತಿಗಳ ಕಡೆಗೆ ಬಂಡವಾಳದ ಹರಿವಿನಿಂದಾಗಿ ಚಿನ್ನದ ಹೂಡಿಕೆಯ ಆಕರ್ಷಣೆ ಕಡಿಮೆಯಾಗಿದೆ.ಈ ಕಾರಣದಿಂದ ಚಿನ್ನದ ಬೆಲೆ ಕುಸಿತವಾಗುತ್ತಿದೆ.
ಆದರೆ ದರ ಕುಸಿತದ ಪಯಣ ಹೀಗೆಯೇ ಮುಂದುವರೆಯಲಿದೆ ಎಂದರೆ ತಪ್ಪಾಗಬಹುದು. ಮಾರುಕಟ್ಟೆ ತಜ್ಞರ ಪ್ರಕಾರ ಇದು ತಾತ್ಕಾಲಿಕ ಕುಸಿತ. ಚಿನ್ನಕ್ಕೆ ಬೇಡಿಕೆ ಜಾಸಿಯಾದರೆ ಮತ್ತೆ ಬೆಲೆ ಏರುತ್ತವೆ. ಹಾಗಾಗಿ ಈಗ ಚಿನ್ನ ಖರೀದಿ ಮಾಡಿದರೆ ಬೆಸ್ಟ್.
ಇನ್ನು ನಿಮ್ಮ ನಗರದ ಬಂಗಾರದ ಇಂದಿನ ನಿಖರವಾದ ಬೆಲೆಯನ್ನು ತಿಳಿಯಲು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.com ಅನ್ನು ಸಂಪರ್ಕಿಸಬಹುದು.