Gold Rate Today: ಚಿನ್ನ ಖರೀದಿಸಲು ಬಯಸುವವರಿಗೆ ಉತ್ತಮ ಅವಕಾಶ, ಧನತ್ರಯೋದಶಿಗೂ ಮುನ್ನ ಚಿನ್ನ-ಬೆಳ್ಳಿ ಬೆಲೆ ಎಷ್ಟು?

Wed, 04 Nov 2020-1:18 pm,

ಮಂಗಳವಾರ ದಿ.03-11-2020 ರಂದೂ ಕೂಡ ಬುಲಿಯನ್ ಮಾರುಕಟ್ಟೆಯಲ್ಲಿ  ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಗಮನಿಸಲಾಗಿತ್ತು. ಬೆಳಗ್ಗೆ ಸುಮಾರು 10 ಗಂಟೆಗೆ  ಮಲ್ಟಿ ಕಮೊಡಿಟಿ (MCX) ಎಕ್ಸ್ಚೆಂಜ್  ನಲ್ಲಿ ಚಿನ್ನ ಪ್ರತಿ 10 ಗ್ರಾಂ.ಗೆ ರೂ.135 ಇಳಿಕೆಯೊಂದಿಗೆ ರೂ.50, 932ಗೆ ತನ್ನ ದಿನದ ವಹಿವಾಟು ಆರಂಭಿಸಿತ್ತು. ಬೆಳ್ಳಿ ಕೂಡ ಪ್ರತಿ ಕೆ.ಜಿಗೆ  ರೂ.102  ಇಳಿಕೆಯೊಂದಿಗೆ ರೂ.61, 905ಕ್ಕೆ ತನ್ನ ವಹಿವಾಟು ಆರಂಭಿಸಿತ್ತು.

ಮಂಗಳವಾರ ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ರೂ.55 ರಷ್ಟು ವೇಗ ಪಡೆದುಕೊಂಡು ಪ್ರತಿ 10 ಗ್ರಾಂ.ಗೆ ರೂ. 51,735 ಕ್ಕೆ  ತನ್ನ ದಿನದ ವಹಿವಾಟು ಅಂತ್ಯಗೊಳಿಸಿತ್ತು. HDFC ಸಿಕ್ಯೋರಿಟಿಸ್ ನ ಹಿರಿಯ ವಿಶ್ಲೇಷಕ (ಕಮೊಡಿಟಿ) ತಪನ್ ಪಟೇಲ್ ಅವರು ಹೇಳುವ ಪ್ರಕಾರ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ವೇಗ ಪಡೆದುಕೊಂಡ ಕಾರಣ ದೆಹಲಿಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ.55 ರಷ್ಟು ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 1,894 ಡಾಲರ್ ರಷ್ಟಿದ್ದರೆ, ಬೆಳ್ಳಿ ಬೆಲೆ ಕೂಡ $24 ಪ್ರತಿ ಔನ್ಸ್ ತಲುಪಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿಯೂ ಕೂಡ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ರೂ. 170 ರಷ್ಟು ವೇಗ ಪಡೆದುಕೊಂಡು ರೂ.61, 780ಕ್ಕೆ ತಲುಪಿದೆ.

ಸಾವರಿನ್ ಗೋಲ್ಡ್ ಬಾಂಡ್ ಯೋಜನೆ 2020-21 ರ 8 ನೆ ಸರಣಿ 9 ನವೆಂಬರ್-13 ನವೆಂಬರ್ ವರೆಗೆ ಸಬಸ್ಕ್ರಿಪ್ಶನ್ ಗಾಗಿ ತೆರೆದುಕೊಳ್ಳಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಭಾರತ ಸರ್ಕಾರದವತಿಯಿಂದ ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಜಾರಿಗೊಳಿಸುತ್ತಿದೆ.

ಸಾವೆರಿನ್ ಗೋಲ್ಡ್ ಬಾಂಡ್ ಯೋಜನೆಯ ಅಡಿ ಪ್ರತಿ ಹೂಡಿಕೆದಾರರು ವಾರ್ಷಿಕವಾಗಿ ಹೆಚ್ಚುವರಿ ಅಂದರೆ 400 ಗ್ರಾಂ.ನಷ್ಟು ಚಿನ್ನ ಖರೀದಿಸಬಹುದಾಗಿದೆ. ಇನ್ನೊಂದೆಡೆ ಈ ಯೋಜನೆಯ ಅಡಿ ಅತಿ ಕಡಿಮೆ ಅಂದರೆ 1 ಗ್ರಾಂ.ವರೆಗೆ ಚಿನ್ನವನ್ನು ಕೂಡ ಖರೀದಿಸಬಹುದು. ಈ ಯೋಜನೆಯಡಿ ಹೂಡಿಕೆ ಮಾಡುವುದರಿಂದ ನೀವು ತೆರಿಗೆ ಉಳಿತಾಯ ಕೂಡ ಮಾಡಬಹುದು. ಈ ಬಾಂಡ್ ಗಳನ್ನು ಟ್ರಸ್ಟ್ ಗೆ ಸಂಬಂಧಿಸಿದ ವ್ಯಕ್ತಿಗಳು, HUF, ಯಾವುದೇ ಟ್ರಸ್ಟ್, ವಿಶ್ವವಿದ್ಯಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಮಾರಾಟ ಮಾಡುವುದರ ಮೇಲೆ ನಿಷೇಧ ವಿಧಿಸಲಾಗಿದೆ.

ಹಬ್ಬದ ಸೀಜನ್ ಅನ್ನು ವಿಶೇಷವಾಗಿಸಲು ಭಾರತದ ಅತಿ ದೊಡ್ಡ ಮರ್ಚೆಂಟ್ ಪೇಮೆಂಟ್ ಕಂಪನಿ ಭಾರತ ಪೇ ತನ್ನ ಪ್ಲಾಟ್ಫಾರ್ಮ್ ನಲ್ಲಿ ಡಿಜಿಟಲ್ ಗೋಲ್ಡ್ ಯೋಜನೆ ಲಾಂಚ್ ಮಾಡಿದೆ. ಸೇಫ್ ಗೋಲ್ಡ್ (SafeGold) ಜೊತೆಗೆ ಸೇರಿ ಜಂಟಿಯಾಗಿ ಭಾರತ ಪೇ ಈ ಯೋಜನೆಯನ್ನು ಆರಂಭಿಸಿದೆ. ಸೇಫ್ ಗೋಲ್ಡ್ ಒಂದು ಡಿಜಿಟಲ್ ಪ್ಲಾಟ್ಫಾರ್ಮ್ ಆಗಿದ್ದು, ಇದು ತನ್ನ ಗ್ರಾಹಕರಿಗೆ 24 ಗಂಟೆಗಳ ಕಾಲ ಲೋ ಟಿಕೆಟ್ ಸೈಜ್ ನಲ್ಲಿ 24 ಕ್ಯಾರೆಟ್ ಗುಣಮಟ್ಟದ ಫಿಸಿಕಲ್ ಗೋಲ್ಡ್ ಖರೀದಿ, ಮಾರಾಟ ಹಾಗೂ ಡಿಲೆವರಿ ಸೌಲಭ್ಯ ಒದಗಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link