Gold Price Today: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ! ಭಾರಿ ಕಡಿಮೆ ಬೆಲೆಗೆ ಸಿಗಲಿದೆ ಚಿನ್ನ?
Gold Price Today: ಹಬ್ಬ ಹರಿದಿನಗಳ ಪ್ರಯುಕ್ತ ನೀವು ಚಿನ್ನ ಖರೀದಿಸಲು ಬಯಸುವುದು ಸಾಮಾನ್ಯ. ಆರೆ ಬೆಲೆ ಏರಿಕೆ ನಿಮ್ಮ ಕನಸ್ಸಿಗೆ ಅಡಿಯಾಗಬಹುದು. ನವರಾತ್ರಿ ಮೊದಲ ದಿನದಂದು ಬೆಲೆ ಏರಿಕೆಯಾಗುವ ಮೂಲಕ ದೇಶದ ಜನರಿಗೆ ಶಾಕ್ ಕೊಟ್ಟಿತ್ತು. ಆದರೆ ಇದೀಗ ಚಿನ್ನದ ಬೆಲೆ ಇಳಿಕೆ ಕಂಡಿದ್ದು, ಇದರಿಂದ ದೇಶದ ಜನ ನಿಟ್ಟುಸಿರಿ ಬಿಟ್ಟಿದ್ದಾರೆ.
ಯುಎಸ್ ಫೆಡ್ ಬಡ್ಡಿದರಗಳನ್ನು ಕಡಿಮೆಗೊಳಿಸಿದ ಕಾರಣಕ್ಕಾಗಿ, ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ತತವಾಗಿ ಹೆಚ್ಚುತ್ತಿರುವ ಚಿನ್ನದ ದರ ಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಂಚ ಇಳಿಕೆ ಕಂಡಿದೆ.
ಸದ್ಯ ದೇಶದಲ್ಲಿ ಚಿನ್ನದ ಬೆಲೆ ಯಾವುದೇ ಏರಿಕೆ ಅಥವ ಇಳಿಕೆ ಕಾಣದೆ ಸ್ಥಿರವಾಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಚಿನ್ನದ ದರ ಇಳಿಕೆಯಾಗಿರುವುದರಿಂದ ದೇಶೀಯವಾಗಿಯೂ ಇಳಿಕೆಯಾಗುವ ಸಾಧ್ಯತೆಗಳಿವೆ. ಸದ್ಯ ನಗರದಲ್ಲಿ 10 ಗ್ರಾಂನ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 71,210 ನಲ್ಲಿದ್ದು, 24 ಕ್ಯಾರೆಟ್‌ನ 10 ಗ್ರಾಂನ ಚಿನ್ನದ ಬೆಲೆ ರೂ. 77,680ರಲ್ಲಿ ಆಗಿದ್ದು, ಚಿನ್ನದ ಬೆಲೆಯಲ್ಲಿ ರೂ. 660 ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಚಿನ್ನದ ಬೆಲೆ ಸ್ಥಿರವಾಗಿದೆ. ಇಲ್ಲಿ, 10 ಗ್ರಾಂನ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 71,360 ಆಗಿದ್ದು, 24 ಕ್ಯಾರೆಟ್‌ನ ಚಿನ್ನದ ದರ ರೂ. 77,830 ಆಗಿದೆ.