Gold Price Today: ಏರಿಕೆಯಾಗಿ ಗ್ರಾಹಕರಿಗೆ ಶಾಕ್‌ ಕೊಟ್ಟಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ..!

Sun, 04 Aug 2024-7:30 am,

ಬಜೆಟ್ ನಲ್ಲಿ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಸತತವಾಗಿ ಏರಿಕೆ ಕಂಡಿದೆ. ಇದರಿಂದ ಚಿನ್ನದ ಬೆಲೆ ಮತ್ತೆ ದಾಖಲೆಯ ಗರಿಷ್ಠ ಮಟ್ಟ ತಲುಪಲಿದ್ದು, ಬಂಗಾರ ಪ್ರಿಯರು ಕಂಗಾಲಾಗಿದ್ದಾರೆ. ಆದರೆ, ಮೂರು ದಿನಗಳ ನಂತರ ಚಿನ್ನದ ದರ ಮತ್ತೆ ತಗ್ಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಗರಿಷ್ಠ ಮಟ್ಟದಲ್ಲಿದ್ದರೂ, ದೇಶಿಯ ಬೆಲೆಯಲ್ಲಿ ಇಳಿಕೆಯಾಗಿದೆ. 

ಶ್ರಾವಣ ಮಾಸ ಹಾಗೂ ಮದುವೆ ಸೀಸನ್ ಶುರುವಾಗಿದೆ. ಈಗ ಚಿನ್ನಕ್ಕೆ ಬೇಡಿಕೆ ಹೆಚ್ಚಿದೆ. ಇಂತಹ ಹೊತ್ತಿನಲ್ಲಿ ಬೆಲೆ ಇಳಿಕೆಯಾಗಿರುವುದು ಭಾರೀ ಸಮಾಧಾನ ತಂದಿದೆ. ಇದರಿಂದ ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚಲಿದೆ ಎನ್ನುತ್ತವೆ ಬುಲಿಯನ್ ಮಾರುಕಟ್ಟೆಯ ಮೂಲಗಳು. ಹಾಗಾದರೆ ಭಾನುವಾರ, ಆಗಸ್ಟ್‌ 04 ರಂದು ದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ..?ತಿಳಿಯಲು ಮುಂದೆ ಓದಿ...  

ಚಿನ್ನದ ಮಾರುಕಟ್ಟೆಯಲ್ಲಿ ಇಂದು ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ. 22ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ರೂ.100 ಇಳಿಕೆಯಾಗಿದ್ದು, ರೂ. 64,700 ಕ್ಕೆ ಇಳಿದಿದೆ. ಹಾಗೂ 2 4ಕ್ಯಾರೆಟ್ ಚಿನ್ನದ ಬೆಲೆ ರೂ.110 ಇಳಿಕೆಯಾಗಿ ರೂ. 70,580 ಕ್ಕೆ ಇಳಿದಿದೆ. ದೆಹಲಿ ಮಾರುಕಟ್ಟೆಯಲ್ಲಿ ನೋಡುವುದಾದರೆ 22ಕ್ಯಾರೆಟ್ ಚಿನ್ನದ ಬೆಲೆ ರೂ.100 ಇಳಿಕೆಯಾಗಿ ರೂ.64,850 ಆಗಿದೆ. ದೆಹಲಿಯಲ್ಲಿ ಇಂದು 24 ಕ್ಯಾರೆಟ್ ಬೆಲೆ ರೂ.110 ಇಳಿಕೆಯಾಗಿ ರೂ. 70,730ಕ್ಕೆ ಇಳಿದಿದೆ.  

ಇನ್ನೂ, ಕರ್ನಾಟಕದಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಹಾಗೂ ಇಳಿಕೆ ಕಾಣದೆ ಅದೇ ಬೆಲೆಯಲ್ಲಿ ಮುಂದುವರೆದಿದೆ. ಶನಿವಾರ ರಾಜ್ಯದಲ್ಲಿ 22  ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ. 64,700 ಇದ್ದು, 10 ಗ್ರಾಂನ 24 ಕ್ಯಾರೆಟ್‌ನ ಚಿನ್ನದ ಬೆಲೆ ರೂ.70,580 ಇದೆ.  

ಪ್ರತಿ ಕೆಜಿ ಬೆಳ್ಳಿ ದರ ಇಂದು ರೂ.1700 ಇಳಿಕೆಯಾಗಿ ರೂ. 90900 ಆಗಿದೆ. ದೆಹಲಿ ಮಾರುಕಟ್ಟೆಯಲ್ಲಿನ ಬೆಲೆಗಳನ್ನು ಗಮನಿಸಿದರೆ, ಪ್ರತಿ ಕೆಜಿ ಬೆಳ್ಳಿಯ ಬೆಲೆ ರೂ. 85500 ಆಗಿದೆ. ಆದಾಗ್ಯೂ, ಈ ಬೆಲೆಗಳು GST, TCS ಮತ್ತು ಇತರ ತೆರಿಗೆಗಳನ್ನು ಒಳಗೊಂಡಿಲ್ಲ. ಅವೆಲ್ಲವನ್ನೂ ಒಟ್ಟುಗೂಡಿಸಿದರೆ, ಬೆಲೆಗಳು ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದೆ. ಅದಕ್ಕಾಗಿಯೇ ಚಿನ್ನ ಮತ್ತು ಬೆಳ್ಳಿ ಖರೀದಿಸುವ ಮೊದಲು ಸ್ಥಳೀಯ ಬೆಲೆಗಳನ್ನು ತಿಳಿದುಕೊಳ್ಳುವುದು ಉತ್ತಮ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link