ಚಿನ್ನ ಖರೀದಿಸಲು ಸುವರ್ಣಾವಕಾಶ!ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 4000 ರೂಪಾಯಿಯಷ್ಟು ಅಗ್ಗವಾದ ಬಂಗಾರ !
ಮದುವೆಯ ಸೀಸನ್‌ನಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುವುದರಿಂದ, ಬೆಲೆಗಳು ಏರಲು ಪ್ರಾರಂಭಿಸುತ್ತವೆ.ಇದು ಸಾಮಾನ್ಯ ಪ್ರಕ್ರಿಯೆ. ಆದರೆ ಈ ಬಾರಿ ಇದು ಭಿನ್ನವಾಗಿದೆ.
ಚಿನ್ನಕ್ಕೆ ಬೇಡಿಕೆ ಹೆಚ್ಚಿದ್ದರೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿಲ್ಲ.ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ.ಚಿನ್ನ ಮತ್ತೆ ಅಗ್ಗವಾಗಿದೆ.
ಮಧ್ಯೆ ಮಧ್ಯೆ ಒಂದೆರಡು ದಿನ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡಿದ್ದು ಇದೆ. ಆದರೆ ಇಲ್ಲಿ ನಾವು ಸಾರ್ವಕಾಲಿಕ ದರವನ್ನು ನೋಡಿ ಹೇಳುವುದದಾರೆ, ಇಲ್ಲಿಯವರೆಗೆ ಚಿನ್ನದ ಬೆಲೆ 4000 ರೂ.ಯಷ್ಟು ಇಳಿಕೆ ಕಂಡು ಬಂದಿದೆ.
24 ಕ್ಯಾರೆಟ್‌ನಿಂದ 18 ಕ್ಯಾರೆಟ್‌ವರೆಗಿನ ಚಿನ್ನದ ಬೆಲೆಗಳು ಹೀಗಿವೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 76287 ರೂ. 23 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75981 ರೂ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69879 ರೂ. 18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 44628 ರೂ.
ಗೋಲ್ಡ್ ಫ್ಯೂಚರ್ ಮಾರುಕಟ್ಟೆಯಲ್ಲಿ ಕೂಡಾ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.ಜಾಗತಿಕ ಮಾರುಕಟ್ಟೆಯಲ್ಲಿನ ದುರ್ಬಲ ಪ್ರವೃತ್ತಿಯಿಂದಾಗಿ ಚಿನ್ನದ ಭವಿಷ್ಯದ ಬೆಲೆಗಳು ಕುಸಿದಿವೆ ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಹೇಳಿಕೆ.
ಇನ್ನು ಬೆಳ್ಳಿ ಬೆಲೆಯಲ್ಲಿಯೂ ಕುಸಿತ ಕಂಡಿದ್ದು, ಗುರುವಾರದ ಫ್ಯೂಚರ್ಸ್ ವಹಿವಾಟಿನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 656 ರಷ್ಟು ಕುಸಿದು ರೂ 87,024 ಕ್ಕೆ ತಲುಪಿದೆ.
ಇನ್ನು ನಿಮ್ಮ ನಗರದ ಬಂಗಾರದ ಇಂದಿನ ನಿಖರವಾದ ಬೆಲೆಯನ್ನು ತಿಳಿಯಲು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.com ಅನ್ನು ಸಂಪರ್ಕಿಸಬಹುದು.