ಈ ರಾಶಿಯವರ ಬಾಳು ಬಂಗಾರವಾಗಬೇಕಾದರೆ ಬೆರಳಲ್ಲಿ ಚಿನ್ನದ ಉಂಗುರ ಇರಲೇಬೇಕು ! ಹಳದಿ ಲೋಹವಷ್ಟೇ ಬೆಳಗುವುದು ಇವರ ಅದೃಷ್ಟ

Fri, 18 Oct 2024-8:53 am,

ಲೋಹಗಳ ಮಹತ್ವ, ಮತ್ತು ವಿಶೇಷತೆಯನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ಇದರ ಪ್ರಕಾರ ಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಅದು ಅವರಿಗೆ ಹೆಚ್ಚು ಅದೃಷ್ಟ ಒಲಿದು ಬರುತ್ತದೆ. 

ಅದು ಕೂಡಾ ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಮಕ್ಕಳ ಸಂತೋಷದಲ್ಲಿ ಬರುವ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಧನಲಾಭ ಮತ್ತು ವೃತ್ತಿ ಪ್ರಗತಿಯನ್ನು ಕೂಡಾ ಸಾಧಿಸಬಹುದು. 

ಸಿಂಹ ರಾಶಿ : ಸಿಂಹ ರಾಶಿಯು ಬೆಂಕಿಯ ಅಂಶದ ಸಂಕೇತವಾಗಿದೆ.ಈ ರಾಶಿಯ ಅಧಿಪತಿ ಸೂರ್ಯ. ಆದ್ದರಿಂದ, ಸಿಂಹ ರಾಶಿಯ ಜನರು ಚಿನ್ನದ ಉಂಗುರವನ್ನು ಧರಿಸುವುದು ಮಂಗಳಕರ. ಸಿಂಹ ರಾಶಿಯವರಿಗೆ ಚಿನ್ನದ ಉಂಗುರ ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ.     

ಕನ್ಯಾ ರಾಶಿ :ಐಶಾರಮಿ ಜೀವನವನ್ನು ಇಷ್ಟಪಡುವವರು ಕನ್ಯಾ ರಾಶಿಯವರು. ಜೀವನದಲ್ಲಿ ಐಶಾರಾಮ ಒಲಿದು ಬರಬೇಕಾದರೆ ಇವರು ಚಿನ್ನ ಧರಿಸಬೇಕು. ಚಿನ್ನದ ಉಂಗುರ, ಚೈನ್ ಹೀಗೆ ಚಿನ್ನದಿಂದ ಮಾಡಿದ ಯಾವುದಾದರೂ ಆಭರಣವನ್ನು ಧರಿಸಿದರೆನೇ ಅವರ ಅದೃಷ್ಟ ತೆರೆದುಕೊಳ್ಳುವುದು. 

ತುಲಾ ರಾಶಿ : ತುಲಾ ರಾಶಿಯವರಿಗೂ ಚಿನ್ನವೇ ಅದೃಷ್ಟ.ಈ ರಾಶಿಯ ಅಧಿಪತಿ ಶುಕ್ರ ದೇವ. ಹಾಗಾಗಿ ಈ ರಾಶಿಯವರು ಚಿನ್ನದ ಉಂಗುರ ಹಾಕಿದ ಕೂಡಲೇ ಅದೃಷ್ಟ ಇವರ ಬೆನ್ನೇರುತ್ತದೆ. ಇವರ ಕಷ್ಟಗಳಿಗೆ ಚಿನ್ನವೇ ಪರಿಹಾರ. 

ಮೀನ ರಾಶಿ :ಚಿನ್ನವನ್ನು ಧರಿಸುವುದು ಮೀನ ರಾಶಿಯವರಿಗೂ ಅತ್ಯಂತ ಶುಭ.ಚಿನ್ನ ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕುವಾಗ ಚಿನ್ನದ ಉಂಗುರ ಧರಿಸಿ ಹೋದರೆ ಇವರಿಗೆ ಸೋಲಿಲ್ಲ. 

ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link